ಉಡುಪಿ: ಜನತಾದಳ (ಜಾ) ಪಕ್ಷದ ವರಿಷ್ಠ ಎಚ್.ಡಿ. ದೇವೇ ಗೌಡ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಆದೇಶದಂತೆ ಜೆಡಿಎಸ್ ಕೋರ್ ಸಮಿತಿ ರಾಜ್ಯಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ ಮತ್ತು ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಆದೇಶ ಪತ್ರವನ್ನು ಬೆಂಗಳೂರು ಪಕ್ಷ ಕಚೇರಿಯಲ್ಲಿ ನೀಡಲಾಯಿತು.

ಕಳೆದ 32 ವರ್ಷಗಳಿಂದ ಜನತಾ ಪರಿವಾರದಲ್ಲಿ ತೊಡಗಿರುವ ಯೋಗೇಶ್ ವಿ. ಶೆಟ್ಟಿ ಅವರು ಸತತ 3ನೇ ಬಾರಿ, 2016 ರಿಂದ ಜಿಲ್ಲಾಧ್ಯಕ್ಷರಾಗಿದ್ದಾರೆ.