ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಮತ್ತು ಉದ್ದೇಶ ಹೊಂದಿರಬೇಕು. ಜೀವನದ ಪ್ರತಿಯೊಂದು ಕಾರ್ಯವೂ ಆತ್ಮತೃಪ್ತಿಯನ್ನು ನೀಡುವಂತಾಗಿದ್ದರೆ ಮಾತ್ರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು. ಇತ್ತೀಚೆಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಂದ ಜನರ ಆರೋಗ್ಯ ಹಾನಿಗೊಳಗಾಗುತ್ತಿದೆ. ಆಸ್ಪತ್ರೆಗಳು ಹಣ ಮಾಡುವ ಕೇಂದ್ರಗಳಾಗುತ್ತಿರುವ ಇಂದಿನ ಕಾಲದಲ್ಲಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಜಾಗೃತಿ ಹೊಂದಬೇಕು ಎಂದು ಅವರು ಸಲಹೆ ನೀಡಿದರು. ಮುಂದುವರೆದ ದೇಶಗಳಲ್ಲಿ ಫಾಸ್ಟ್ ಫುಡ್ ಬಳಕೆ ಕಡಿಮೆಯಾಗುತ್ತಿದ್ದು, ಯೋಗ-ಧ್ಯಾನ ಸೇರಿದಂತೆ ವೆಲ್‌ನೆಸ್ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಯೋಗ ಮತ್ತು ಧ್ಯಾನ ಅವಶ್ಯಕ ಎಂದು ಯೋಗ ಗುರು ಚೇತನ ಗುರೂಜಿ ಅಭಿಪ್ರಾಯಪಟ್ಟರು.ಶುಕ್ರವಾರ ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಲಯನ್ಸ್ ಸೇವಾಸಂಸ್ಥೆ ವತಿಯಿಂದ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ

ಮಾತನಾಡಿದ ಅವರು, ಇಂದಿನ ಒತ್ತಡಪೂರ್ಣ ಜೀವನದಿಂದ ಹೊರಬರಲು ಯೋಗ, ಧ್ಯಾನ ಇದರೊಂದಿಗೆ ನಿತ್ಯ ಆಹಾರ ಪದ್ಧತಿ ಸಹ ಸರಿಯಾದ ಪ್ರಮಾಣದಲ್ಲಿರಬೇಕು ಹಾಗೂ ನಮ್ಮ ಆಲೋಚನೆಗಳು ಸಕಾರತ್ಮಕವಾಗಿ ಇಟ್ಟುಕೊಳ್ಳುವ ಅಗತ್ಯವಿದ್ದಾಗ ನಾವು ಆರೋಗ್ಯವಂತರಾಗಿರಬಹುದು ಎಂದರು. ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಮತ್ತು ಉದ್ದೇಶ ಹೊಂದಿರಬೇಕು. ಜೀವನದ ಪ್ರತಿಯೊಂದು ಕಾರ್ಯವೂ ಆತ್ಮತೃಪ್ತಿಯನ್ನು ನೀಡುವಂತಾಗಿದ್ದರೆ ಮಾತ್ರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು. ಇತ್ತೀಚೆಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಂದ ಜನರ ಆರೋಗ್ಯ ಹಾನಿಗೊಳಗಾಗುತ್ತಿದೆ. ಆಸ್ಪತ್ರೆಗಳು ಹಣ ಮಾಡುವ ಕೇಂದ್ರಗಳಾಗುತ್ತಿರುವ ಇಂದಿನ

ಕಾಲದಲ್ಲಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಜಾಗೃತಿ ಹೊಂದಬೇಕು ಎಂದು ಅವರು ಸಲಹೆ ನೀಡಿದರು. ಮುಂದುವರೆದ ದೇಶಗಳಲ್ಲಿ ಫಾಸ್ಟ್ ಫುಡ್ ಬಳಕೆ ಕಡಿಮೆಯಾಗುತ್ತಿದ್ದು, ಯೋಗ-ಧ್ಯಾನ ಸೇರಿದಂತೆ ವೆಲ್‌ನೆಸ್ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಆದರೆ ಭಾರತದಲ್ಲಿ ರಕ್ತದ ಒತ್ತಡ, ಮಧುಮೇಹ ಮುಂತಾದ ರೋಗಗಳಿಗೆ ಔಷಧಿಗಳ ಅವಲಂಬನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.ಲಯನ್ಸ್ ಸಂಸ್ಥೆಯ ವತಿಯಿಂದ 12 ದಿನಗಳ ಕಾಲ ಉಚಿತವಾಗಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಅನೇಕರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಜಿಲ್ಲಾ ಮುಖಂಡರಾದ ಡಾ. ನವೀನ್ ಚಂದ್ರ ಶೆಟ್ಟಿ, ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಬಸವರಾಜು, ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ರಂಗನಾಥ್, ಲಕ್ಷ್ಮಣ ಕೀರ್ತಿ, ಜಗದೀಶ್, ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.