ಮಾದಕ ದ್ರವ್ಯದತ್ತ ಯುವ ಸಮುದಾಯ ಒಲವು ವಿಷಾದನೀಯ: ಆಂಜನೇಯ ರೆಡ್ಡಿ

| Published : Aug 17 2024, 12:49 AM IST

ಮಾದಕ ದ್ರವ್ಯದತ್ತ ಯುವ ಸಮುದಾಯ ಒಲವು ವಿಷಾದನೀಯ: ಆಂಜನೇಯ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರಿ ಪೊಲೀಸ್ ಠಾಣೆ, ಅಮರ್ ಅಕ್ಟರ್ ಅಂತೋನಿ ಕ್ರಿಕೆಟ್ ಸಂಘಟಕರು, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಪುತ್ತೂರಿನ ಬಸ್ಸು ನಿಲ್ದಾಣದ ಸಮೀಪದ ಗಾಂಧೀಕಟ್ಟೆಯ ಬಳಿ ಗುರುವಾರ ಸಂಜೆ ‘ಮಾದಕ ದ್ರವ್ಯ ಅಳಿಸಿ-ನಮ್ಮೂರ ಉಳಿಸಿ’, ‘ನಮ್ಮ ಜೀವ-ನಮ್ಮ ರಕ್ಷಣೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ದೇಶ ಮತ್ತು ಕುಟುಂಬವನ್ನು ಮುನ್ನೆಡೆಸಬೇಕಾಗಿರುವ ಯುವ ಸಮೂಹವು ಪ್ರಸ್ತುತ ಮಾದಕ ದ್ರವ್ಯದತ್ತ ಒಲವು ತೋರುತ್ತಿರುವುದು ಖೇದಕರವಾಗಿದೆ. ಮಾದಕ ವಸ್ತುಗಳು ಇಂದು ಅವ್ಯಾಹತವಾಗಿ ಬೆಳೆಯುತ್ತಿದ್ದು ಇದು ಯುವಸಮೂಹವನ್ನು ದುರಂತದೆಡೆಗೆ ಸಾಗಿಸುತ್ತಿದೆ ಎಂದು ಪುತ್ತೂರು ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಆಂಜನೇಯ ರೆಡ್ಡಿ ಆಂತಕ ವ್ಯಕ್ತ ಪಡಿಸಿದರು.

ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರಿ ಪೊಲೀಸ್ ಠಾಣೆ, ಅಮರ್ ಅಕ್ಟರ್ ಅಂತೋನಿ ಕ್ರಿಕೆಟ್ ಸಂಘಟಕರು, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಪುತ್ತೂರಿನ ಬಸ್ಸು ನಿಲ್ದಾಣದ ಸಮೀಪದ ಗಾಂಧೀಕಟ್ಟೆಯ ಬಳಿ ಗುರುವಾರ ಸಂಜೆ ‘ಮಾದಕ ದ್ರವ್ಯ ಅಳಿಸಿ-ನಮ್ಮೂರ ಉಳಿಸಿ’, ‘ನಮ್ಮ ಜೀವ-ನಮ್ಮ ರಕ್ಷಣೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುತ್ತೂರಿನಲ್ಲಿ ೧೫೦ ಮಂದಿ ಪೊಲೀಸರು ಇದ್ದರೂ ಎಲ್ಲವನ್ನೂ ತಡೆಯಲು ಸಾಧ್ಯವಾಗುವುದಿಲ್ಲ. ಕೇವಲ ಮಾದಕ ದ್ರವ್ಯಗಳು ಮಾತ್ರವಲ್ಲ ಸೈಬರ್ ಕ್ರೈಂ ಪ್ರಕರಣಗಳು, ಅಪಾಯವೆಂದು ಗೊತ್ತಿದ್ದರೂ ನದಿಗಳ ದಡದಲ್ಲಿ ಸೆಲ್ಫಿ ತೆಗೆಯುವುದು, ಇಂತಹ ಅಪರಾಧಗಳಿಗೆ ಯುವ ಸಮೂಹ ಬಲಿಯಾಗುತ್ತಿದೆ. ಭಾರತ ಸದೃಢವಾಗಬೇಕಾದರೆ ಯುವಸಮೂಹ ಸದೃಢವಾಗಬೇಕು. ಯುವಸಮೂಹ ಇಂತಹ ವ್ಯಸನಗಳಿಂದ ದೂರವಿರಬೇಕು ಎಂದು ಹೇಳಿದರು.

ಪುತ್ತೂರು ಸಂಚಾರಿ ಠಾಣೆಯ ಪಿಎಸ್‌ಐ ಉದಯರವಿ ಮಾತನಾಡಿ, ದೇಶಕ್ಕೆ ರಕ್ಷಣೆ ನೀಡುವ ಸೈನಿಕರ ತ್ಯಾಗ ಬಲಿದಾನಗಳಿಂದ ಭಾರತ ದೇಶವು ಹಲವು ವಿಪತ್ತುಗಳನ್ನು ಮೆಟ್ಟಿ ನಿಂತಿದೆ. ಅತಿ ಹೆಚ್ಚು ಸೈನಿಕರನ್ನು ಹೊಂದಿದ ಪಂಜಾಬ್‌ನಲ್ಲಿ ವಿರೋಧಿ ರಾಷ್ಟ್ರಗಳು ಮಾದಕ ದ್ರವ್ಯಗಳನ್ನು ನೀಡುವ ಮೂಲಕ ಅವರ ಬಲ ಕುಗ್ಗಿಸುವ ಕೆಲಸ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದರು.ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಐಎಸ್‌ಐ ಮಾರ್ಕ್ ಹೊಂದಿರದ ಹೆಲ್ಮೆಟ್ ಧರಿಸಿದರಿಗೆ ಐಎಸ್‌ಐ ಮಾರ್ಕ್ ಹೊಂದಿದ ಹೆಲ್ಮೆಟ್ ಉಚಿತವಾಗಿ ವಿತರಣೆ ಮಾಡಲಾಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ಎನ್ ಭಟ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಸೈನಿಕರನ್ನು ಸಂಘಟಕರಿಂದ ಶಾಲು ಹೊದಿಸಿ ಗೌರವಿಸಲಾಯಿತು. ಮಾದಕ ದ್ರವ್ಯ ಮುಕ್ತ ಪುತ್ತೂರು ಆಗಬೇಕು ಎನ್ನುವ ನಿಟ್ಟಿನಲ್ಲಿ ನಶಮುಕ್ತ ಭಾರತ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಶುಭ ಹಾರೈಸಿದರು.

ಗಾಂಧಿ ಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ, ಅಮರ್ ಅಕ್ಟರ್ ಅಂತೋನಿ ಕ್ರಿಕೆಟ್ ಸಂಘಟಕ ರಝಾಕ್ ಬಿ.ಎಚ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ,ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಕುಟ್ಟಿ ಎಂ.ಕೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮದ್ ಬಡಗನ್ನೂರು, ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ''''ಕೋಸ್ಟ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮೋಹನ್‌ದಾಸ್ ರೈ, ಅಧ್ಯಕ್ಷ ಜುನೈದ್ ಪಿ.ಕೆ, ಸಂಘಟನಾ ಸದಸ್ಯ ಅಶೋಕ್ ರಾವ್ ಬಪ್ಪಳಿಗೆ, ನಗರಸಭಾ ನಾಮನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡು, ಸಲೀಂ ಬರೆಪ್ಪಾಡಿ, ಹಿಂದು-ಮುಸ್ಲಿ-ಕ್ರಿಶ್ಚಿಯನ್ ಜನಜಾಗೃತಿ ಸಂಘಟನೆಯ ಭಾನುಪ್ರಕಾಶ್ ಮತ್ತಿತರರು ಇದ್ದರು.