ಸಾರಾಂಶ
ಚನ್ನಪಟ್ಟಣ: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ಎಂದಿಗೂ ಪ್ರಸ್ತುತವಾಗಿದ್ದು, ಯುವಪೀಳಿಗೆ ಬಾಬಾಸಾಹೇಬರ ಆಶಯದಂತೆ ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ತಾಲೂಕು ಅಯೋಜಿಸಿದ್ದ ಎಸ್‌ಸಿ, ಎಸ್ಟಿ ನೌಕರರ ತಾಲೂಕು ಸಮ್ಮೇಳನ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎಸ್‌ಸಿ,ಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿ, ನೌಕರರು ನೆಪ ಮಾತ್ರಕ್ಕೆ ಇಂತಹ ಕಾರ್ಯಕ್ರಮಗಳನ್ನು ಅಯೋಜಿಸದೆ ಗ್ರಾಮಾಂತರ ಮತ್ತು ನಗರದಲ್ಲಿರುವ ಬಡ ವರ್ಗದ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಾದ ಶಿಕ್ಷಣವನ್ನು ನಿಮ್ಮಗಳ ಖರ್ಚುಗಳಿಂದ ನೀಡಿದರೆ ಇಂತಹ ಕಾರ್ಯಕ್ರಮಗಳಿಗೆ ಒಂದು ಗೌರವ ಲಭಿಸುತ್ತದೆ. ಬುದ್ಧ, ಅಂಬೇಡ್ಕರ್, ಅವರ ಜ್ಞಾನ ದೀವಿಗೆಯನ್ನು ನೀಡಿದ ಮನ್ನಣೆಯಾಗುತ್ತದೆ ಎಂದರು.
ಕ.ರಾ.ಸ. ಎಸ್‌ಸಿ-ಎಸ್‌ಟಿ ನೌ.ಸ.ಸಮಿತಿ ತಾಲೂಕು ಘಟಕದ ಅಧ್ಯಕ್ಷ ಪಿ.ವಿಷಕಂಠಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಮಂತ್ರಿ ಘೋಷಣ್ ಅಭಿಯಾನ ಸಹಾಯಕ ನಿರ್ದೇಶಕ ಎಸ್.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ರುದ್ರಯ್ಯ, ಕ.ರಾ.ಸ. ಎಸ್‌ಸಿಎಸ್‌ಟಿ ನೌ.ಸ.ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್, ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಜೆ.ರವೀಂದ್ರ, ವಿವಿಧ ಇಲಾಖೆಗಳ ಉಪನಿರ್ದೇಶಕರಾದ ಮರಿಸ್ವಾಮಿ, ಎಸ್.ಸ್ವಾಮಿ, ವಿಜಯ್ ಕುಮಾರ್, ಸಾಯಿ ಆಸ್ಪತ್ರೆ ಡಾ. ಸಂಪಂಗಿರಾಮಯ್ಯ, ತಾ.ಪಂ.ಲೆಕ್ಕ ಪರಿಶೋಧನಾಧಿಕಾರಿ ಕೋಮಲ ಉಪಸ್ಥಿತರಿದ್ದರು.ಇದೇ ವೇಳೆ ಮಾಜಿ ಶಾಸಕ ಸಾದತ್ ಆಲಿ ಖಾನ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರಪ್ಪ ಎಂ. ಎಲ್., ಪಿಡಬ್ಲೂಡಿ ಪ್ರಥಮ ದರ್ಜೆ ಸಹಾಯಕಿ ಕಲಾವತಿ, ಧನಲಕ್ಷ್ಮಿ, ವೆಂಕಟೇಶ್ (ಶೇಠು), ಸಿದ್ಧಾರ್ಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಪೊಟೋ೧೫ಸಿಪಿಟಿ೨:ಚನ್ನಪಟ್ಟಣದಲ್ಲಿ ಎಸ್‌ಸಿ, ಎಸ್ಟಿ ನೌಕರರ ತಾಲೂಕು ಸಮ್ಮೇಳನ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎಸ್‌ಸಿ,ಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ನಡೆಯಿತು.