ದಾರಿ ತಪ್ಪುವ ಹಾಗೂ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಸಂಬಂಧಗಳನ್ನು ವಿಘಟಿತಗೊಳಿಸುವ ಯುವ ಸಮೂಹಕ್ಕೆ ಸರಿಯಾದ ದಾರಿಯನ್ನು ಹುಡುಕಿಕೊಡುವ ಕೆಲಸ ಕನ್ನಡ ಸಾಹಿತ್ಯ ಕ್ಷೇತ್ರ ಮಾಡಬೇಕಾಗಿದೆ. ಎಂದು ನಿವೃತ್ತ ಪ್ರಾಚಾರ್ಯ ಡಾ.ವರದರಾಜ ಚಂದ್ರಗಿರಿ ಹೇಳಿದರು.
ಉಪ್ಪಿನಂಗಡಿ: ದಾರಿ ತಪ್ಪುವ ಹಾಗೂ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಸಂಬಂಧಗಳನ್ನು ವಿಘಟಿತಗೊಳಿಸುವ ಯುವ ಸಮೂಹಕ್ಕೆ ಸರಿಯಾದ ದಾರಿಯನ್ನು ಹುಡುಕಿಕೊಡುವ ಕೆಲಸ ಕನ್ನಡ ಸಾಹಿತ್ಯ ಕ್ಷೇತ್ರ ಮಾಡಬೇಕಾಗಿದೆ. ಹಿಂದೆ ಕೌಶಲ್ಯ ನಿರ್ಮಾಣದ ಅಗತ್ಯವಿತ್ತು. ಆದರೆ ಇಂದು ಯುವ ಸಮೂಹದ ಮನಸ್ಸು-ಹೃದಯಕ್ಕೆ ಮಾರ್ಗದರ್ಶನದ ಅಗತ್ಯತೆ ಇದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ವರದರಾಜ ಚಂದ್ರಗಿರಿ ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಡಬ ತಾಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಹಿಸಿದ್ದ ಮಾಜಿ ಶಾಸಕಿ, ಚಿಂತಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ, ಇಂದಿಗೂ ಕನ್ನಡದ ಸಾಹಿತ್ಯದ ಮೌಲ್ಯ ಕ್ಷೀಣಿಸಿಲ್ಲ. ಅಸ್ವಾದಿಸುವ ಮನಸ್ಸು ಕಡಿಮೆಯಾಗಿದೆ. ಸಮಾಜ ಸುಧಾರಣೆಯಂತಹ ಸಾಹಿತ್ಯಗಳನ್ನು ರಚಿಸುವಲ್ಲಿ ಯುವಮನಸ್ಸುಗಳು ಮುಂದಾಗಬೇಕು ಎಂದರು. ಕ.ಸಾ.ಪ ಜಿಲ್ಲಾ ಅಧ್ಯಕ್ಷ ಎಂ ಪಿ ಶ್ರೀನಾಥ್ ಆಶಯ ನುಡಿಗಳ್ಳಾಡಿದರು. ನಿಕಟಪೂರ್ವ ಅಧ್ಯಕ್ಷ ಎನ್ ಕರುಣಾಕರ ಗೋಗಡೆ ಹೊಸ್ಮಠ ಶುಭಹಾರೈಸಿದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಕಲಾಪ್ರದರ್ಶನ ಉದ್ಘಾಟಿಸಿದರು. ಕಡಬ ತಾಲೂಕು ತಹಸೀಲ್ದಾರ ಗಣೇಶ್ ಸವನೂರ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ರಾಜೇಶ್ವರಿ ಎಂ, ಎಸ್ ವಿನಯ ಆಚಾರ್, ಗೌರವ ಕೋಶಾಧ್ಯಕ್ಷ ಬಿ ಐತ್ತಪ್ಪ ನಾಯ್ಕ, ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ಪೆರಾಲು ಸುಳ್ಯ, ಡಿ ಯದುಪತಿ ಗೌಡ ಬೆಳ್ತಂಗಡಿ, ಉಮೇಶ್ ನಾಯಕ್ ಪುತ್ತೂರು, ವಿಶ್ವನಾಥ ಬಂಟ್ವಾಳ, ಡಾ.ಮಂಜುನಾಥ್ ಎಸ್ ಮಂಗಳೂರು, ಡಾ.ಧನಂಜಯ ಕುಂಬ್ಲೆ ಉಳ್ಳಾಲ, ವೇಣುಗೋಪಾಲ್ ಶೆಟ್ಟಿ ಕೆ ಮೂಡಬಿದ್ರೆ, ಮಿಥುನ ಉಡುಪ ಮುಲ್ಕಿ, ಕ.ಸಾಪ ಕಡಬ ತಾಲೂಕು ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ , ಶ್ರೀ ರಾಮಕುಂಜೇಶ್ವರ ವಿದ್ಯಾಲಯ ಸಂಚಾಲಕ ಶಿವಪ್ರಸಾದ್ ಇಜ್ಜಾವು, ರಾಮಕುಂಜ ಗ್ರಾ.ಪಂ ಪಿಡಿಓ ಮೋಹನ್, ಸಿ ಆರ್ ಪಿ ಮಹೇಶ್, ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಮೈ, ಸಂಚಾಲಕ ಬಾಲಕೃಷ್ಣ ಯಡಪಡಿತ್ತಾಯ, ಗೌರವಾಧ್ಯಕ್ಷ ರಾಧಕೃಷ್ಣ ಕೆ ಎಸ್, ಉಪಾಧ್ಯಕ್ಷ ಅಬ್ರಾಹಂ ವರ್ಗಿಸ್ , ಯಶವಂತ ರೈ ಸುಬ್ರಹ್ಮಣ್ಯ, ಗ್ರೇಸಿ ಪಿಂಟೋ , ಗುರುರಾಜ್ ರೈ ಕೇವಳ, ಪ್ರಕಾಶ್ ರಾಮಕುಂಜ ಮೊದಲಾದವರು ಇದ್ದರು.ಪಂಚವರ್ಣ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ನಾರಾಯಣ ಭಟ್ ಟಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಸಮ್ಮೇಳನ ಉದ್ಘಾಟಕರ ಪರಿಚಯವನ್ನು ಸರಿತಾ ನಿರ್ವಹಿಸಿದರು. ಕಡಬ ತಾಲುಕು ಕ.ಸಾ.ಪ ಅಧ್ಯಕ್ಷ ಸೇಸಪ್ಪ ರೈ ಪ್ರಸ್ತಾವನೆಗೈದರು. ಗಾಯತ್ರಿ ಯು.ಎನ್. ಸ್ವಾಗತಿಸಿದರು. ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು. ಚೇತನ್ ಆನೆಗುಂಡಿ ನಿರೂಪಿಸಿದರು. ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ ಉದ್ಘಾಟಿಸಿದರು. ಕೊಯ್ಲ ಗ್ರಾ.ಪಂ ಮಾಜಿ ಅಧ್ಯಕ್ಷೆ ಪುಷ್ಪಾ ಶುಭಾಷ್ ಶೆಟ್ಟಿ ಪುಷ್ಪಾರ್ಚನೆಗೈದರು. ರಾಮಕುಂಜ ಗ್ರಾ.ಪಂ ಮಾಜಿ ಅಧ್ಯಕ್ಷೆ ಸುಚೇತ ರಾಷ್ಟ್ರಧ್ವಜರೋಹಣಗೈದರು. ಕ.ಸಾಪ ಜಿಲ್ಲಾಧ್ಯಕ್ಷ ಡಾ.ಎಂ ಪಿ ಶ್ರೀನಾಥ್ ಪರಿಷತು ಧ್ವಜಾರೋಹಣಗೈದರು. ಕಡಬ ತಾಲೂಕು ಕ.ಸಾ.ಪ ಅಧ್ಯಕ್ಷ ಸೇಸಪ್ಪ ರೈ ಸಮ್ಮೇಳನ ಧ್ವಜಾರೋಹಣಗೈದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ತಂಡದಿಂದ ನಾಡಗೀತೆ, ರೈತಗೀತೆ ನಡೆಯಿತು.ಉದ್ಘಾಟನೆಯ ಬಳಿಕ ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ನಡೆಯಿತು.