ಕನ್ನಡಪ್ರಭ ವಾರ್ತೆ ತುಮಕೂರುಕಾನೂನು ಪದವಿ ಮುಗಿಸಿದ ಯುವ ವಕೀಲರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಜವಾಬ್ದಾರಿಯನ್ನು ನಿಭಾಯಿಸಿಲು ನಿರಂತರ ಅಧ್ಯಯನ, ಶಿಸ್ತು, ಬದ್ಧತೆ, ನೈತಿಕತೆ, ಕ್ರಿಯಾಶೀಲತೆ ರೂಢಿಸಿಕೊಂಡು ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಧೀಶರಾದ ಪಿ. ಕೃಷ್ಣಭಟ್ ಕಿವಿಮಾತು ಹೇಳಿದರು.ಬುಧವಾರ ನಗರದ ವಿದ್ಯೋದಯ ಕಾನೂನು ಕಾಲೇಜಿನ ಈ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಕಾನೂನು ಸೇವಾ ಕೇಂದ್ರ, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತಿತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಾನೂನು ಪದವಿಯ ನಂತರ ಯಶಸ್ವಿ ವಕೀಲರಾಗಲು ಕಾನೂನಿನ ಆಳವಾದ ಅಧ್ಯಯನ ಮಾಡಬೇಕು. ಜೊತೆಗೆ ಮಹನೀಯ ಸಾಧನೆಗಳ ಜೀವನಚರಿತ್ರೆ, ಅವರು ಬರೆದ ಪುಸ್ತಕಗಳನ್ನು ಓದಿ ಅವರ ಅನುಭವ, ಸಲಹೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು,ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್, ವಲ್ಲಭಭಾಯಿ ಪಟೇಲ್, ಅಬ್ರಹಾಂ ಲಿಂಕನ್ ಸೇರಿದಂತೆ ಜಗತ್ತಿನ ಬಹುತೇಕ ನಾಯಕರು ಕಾನೂನು ಅಧ್ಯಯನ ಮಾಡಿದವರು ಇಲ್ಲವೆ, ಕಾನೂನು ತಿಳಿದವರೇ ಆಗಿದ್ದಾರೆ. ಉತ್ತಮ ನಾಯಕರಾಗಲು ಕಾನೂನಿನ ಹಿನ್ನೆಯೂ ಅಗತ್ಯವೆಂದುದು ಇದರಿಂದ ತಿಳಿಯುತ್ತದೆ. ಇಂತಹ ಸಾಧಕರ ಜೀವನ ಚರಿತ್ರೆ ಓದಬೇಕು, ಅವರಂತೆ ಯಶಸ್ಸಿನ ಹಾದಿಯಲ್ಲಿ ಸಾಗಬೇಕು. ಸಾರ್ವಜನಿಕರಿಗೆ ಕಾನೂನು ಸೇವೆ, ಸಲಹೆ ನೀಡಬೇಕಾದ ವಕೀಲರು ಅಡ್ಡದಾರಿಯಲ್ಲಿ ನ್ಯಾಯ ಒದಗಿಸುವ ಪ್ರಯತ್ನ ಮಾಡಬಾರದು, ಸರಿಯಾದ ಕಾನೂನು ಮಾರ್ಗ ಅನುಸರಿಸುವ ನ್ಯಾಯವಾದಿಗಳಿಗೆ ಹೆಚ್ಚಿನ, ಶಾಶ್ವತ ಗೌರವ, ಮಾನ್ಯತೆ ದೊರೆಯುತ್ತದೆ ಎಂದು ತಿಳಿಸಿದರು.ವಿದ್ಯೋದಯ ಕಾನೂನು ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತ ನಿರ್ದೇಶಕರು, ವಿದ್ಯೋದಯ ಫೌಂಡೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಸ್. ರಾಜು ಅವರು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರು ಕಾನೂನು ಕ್ಷೇತ್ರದಲ್ಲಿ ಮಾಡಿರುವ ಸೇವಾ ಸಾಧನೆ ಪರಿಚಯಿಸಿದರು. ಟ್ರಸ್ಟ್‌ನ ಸಿಇಒ ಪ್ರೊ.ಕೆ. ಚಂದ್ರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶಮಾ ಸೈದಿ ವಾರ್ಷಿಕ ವರದಿ ವಾಚಿಸಿದರು.ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಗೌರವ ಗಳಿಸಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾ ಡಾ.ಎ. ನಾರಾಯಣಸ್ವಾಮಿ, ಡಾ.ಆರ್. ರಮೇಶ್, ಡಾ.ಜಿ.ವೈ. ನಟರಾಜ್, ಡಾ.ಎಸ್. ಗಂಗಾಧರ್, ಡಾ. ಮುದ್ದುರಾಜು, ಡಾ.ಎನ್.ಹೆಚ್. ಕುಮಾರ್, ಡಾ. ಮಮತಾ ಕ್ಯಾತಣ್ಣನವರ್, ಡಾ. ಆಂಜನೇಯ ನಾಯಕ್, ಡಾ.ವಿ. ಕಿಶೋರ್ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರು ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದರು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಐಕ್ಯೂಎಸಿ ಸಂಯೋಜಕ ಡಾ.ಎನ್.ಹೆಚ್. ಕುಮಾರ್, ಕ್ರೀಡೆ ಮತ್ತು ಎನ್‌ಎಸ್‌ಎಸ್ ಸಮಿತಿ ಸಂಯೋಜಕ ಡಾ.ವಿ. ಕಿಶೋರ್, ಯುವ ಮತ್ತು ರೆಡ್‌ಕ್ರಾಸ್ ಸಮಿತಿ ಸಂಯೋಜಕಿ ಕೆ.ಎಸ್. ಪುಷ್ಪ, ಸಾಂಸ್ಕೃತಿಕ ಸಮಿತಿ ಸಂಯೋಜಕ ಡಾ.ಜಿ.ವೈ. ನಾಗರಾಜು, ಕಾನೂನು ಸೇವೆಗಳ ಸಂಯೋಜಕಿ ಎ.ಎಚ್. ರಶ್ಮಿ ಮೊದಲಾದವರು ಭಾಗವಹಿಸಿದ್ದರು.
ಯುವ ವಕೀಲರು ಕ್ರಿಯಾಶೀಲತೆ, ಅಧ್ಯಯನಶೀಲತೆ ಬೆಳೆಸಿಕೊಳ್ಳಿ
ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್, ವಲ್ಲಭಭಾಯಿ ಪಟೇಲ್, ಅಬ್ರಹಾಂ ಲಿಂಕನ್ ಸೇರಿದಂತೆ ಜಗತ್ತಿನ ಬಹುತೇಕ ನಾಯಕರು ಕಾನೂನು ಅಧ್ಯಯನ ಮಾಡಿದವರು ಇಲ್ಲವೆ, ಕಾನೂನು ತಿಳಿದವರೇ ಆಗಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.