ಸಾರಾಂಶ
ಅನ್‌ಲೈನ್ ಅಪ್‌ನಲ್ಲಿ 10 ರಿಂದ 15 ಲಕ್ಷ ಸಾಲ ನೀಡುವುದಾಗಿ ನಂಬಿಸಿ ಸುಮಾರು 2.50 ಲಕ್ಷ ರುಪಾಯಿ ಹಣವನ್ನು ಆನ್‌ಲೈನ್ ಫೆಮೆಂಟ್ ಮೂಲಕ ಹಣ ವರ್ಗಾಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕೊಳ್ಳೇಗಾಲ: ಆನ್‌ಲೈನ್‌ನಲ್ಲಿ ಸಾಲ ಕೊಡುವುದಾಗಿ ನಂಬಿಸಿ ಯುವಕನಿಂದ 2 ಲಕ್ಷಕ್ಕೂ ಹಣ ಪಡೆದು ಮೋಸ ಮಾಡಿದ ಪರಿಣಾಮ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ನಡೆದಿದೆ.
ತಾಲೂಕಿನ ಕಾಮಗೆರೆ ಗ್ರಾಮದ ಯುವಕ ರಾಜಪ್ಪ (29) ಮೃತ ದುರ್ದೈವಿ. ಅನ್‌ಲೈನ್ ಅಪ್‌ನಲ್ಲಿ 10 ರಿಂದ 15 ಲಕ್ಷ ಸಾಲ ನೀಡುವುದಾಗಿ ನಂಬಿಸಿ ಸುಮಾರು 2.50 ಲಕ್ಷ ರುಪಾಯಿ ಹಣವನ್ನು ಆನ್‌ಲೈನ್ ಫೆಮೆಂಟ್ ಮೂಲಕ ಹಣ ವರ್ಗಾಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. 2.50 ಲಕ್ಷ ವರ್ಗಾಯಿಸಿಕೊಂಡರು ತನಗೆ ಸಾಲ ನೀಡಲಿಲ್ಲ, ಬಳಿಕ ಕರೆ ಸ್ವೀಕರಿಸದ ಹಿನ್ನೆಲೆ ಮೋಸ ಹೋದ ಯುವಕ ವಿಡಿಯೋ ಮಾಡಿ ಹರಿಬಿಟ್ಟು ನೇಣು ಹಾಕಿಕೊಂಡಿದ್ದಾರೆ.ನೇಣು ಬಿಗಿದುಕೊಂಡ ವ್ಯಕ್ತಿಯನ್ನು ಗಮನಿಸಿದ ಕೆವಲರು ಹತ್ತಿರದ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿನ ವೈದ್ಯಾಧಿಕಾರಿಗಳು ಯುವಕ ಮೃತ ಪಟ್ಟಿರುವುದು ದೃಢಪಡಿಸಿದ ಹಿನ್ನೆಲೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಿಬ್ಬಂದಿ ಹೋಲಿ ಕ್ರಾಸ್ ಆಸ್ಪತ್ರೆಗೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮಕೈಗೊಂಡಿದ್ದಾರೆ.ನೊಂದ ಯುವಕ ಹರಿಬಿಟ್ಟ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಾಲ ನೀಡುತ್ತಾರೆಂದು ಆನ್‌ಲೈನ್ ವಂಚನೆಗೊಳಗಾಗಬಾರದು. ನನಗೆ ವಂಚಿಸಿದವರಿಗೂ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾನೆ.------- 10ಕೆಜಿಎಲ್ 17 ಆತ್ಮಹತ್ಯೆಗೆ ಶರಣಾದ ಯುವಕ ರಾಚಪ್ಪ