ಮಾಗಡಿ ತಾಲೂಕಿನ ಪೋಸ್ಟ್ ಹ್ಯಾಂಡ್ ಮೂಲದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಚಲುವ, ಆಕೆಗೆ 18 ವರ್ಷ ತುಂಬಿದ ನಂತರ ಓಡಿಹೋಗುವ ಯೋಜನೆ ಹಾಕಿಕೊಂಡಿದ್ದ ಎನ್ನಲಾಗಿದ್ದು, ವಿಷಯ ತಿಳಿದ ಪೋಷಕರು ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.

ಕುಣಿಗಲ್: ತಾಲೂಕಿನ ಕೊತ್ತಗೆರೆ ಮೂಲದ ಚಲುವ (36) ಎಂಬ ವ್ಯಕ್ತಿ ಅಪ್ರಾಪ್ತ ಬಾಲಕಿಯರ ಮನೆಯವರಿಗೆ ಫೇಸ್ ಬುಕ್ ಲೈವ್ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆತನನ್ನು ಮಾಗಡಿ ಬಳಿ ಕೊಲೆ ಮಾಡಿ ಬಿಸಾಡಿರುವ ಘಟನೆ ನಡೆದಿದೆ. ಕಳೆದ 3 ವರ್ಷದಿಂದ ತಮ್ಮ ಸೋದರ ಸಂಬಂಧಿ,ಮಾಗಡಿ ತಾಲೂಕಿನ ಪೋಸ್ಟ್ ಹ್ಯಾಂಡ್ ಮೂಲದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಚಲುವ, ಆಕೆಗೆ 18 ವರ್ಷ ತುಂಬಿದ ನಂತರ ಓಡಿಹೋಗುವ ಯೋಜನೆ ಹಾಕಿಕೊಂಡಿದ್ದ ಎನ್ನಲಾಗಿದ್ದು, ವಿಷಯ ತಿಳಿದ ಪೋಷಕರು ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು. ಮೃತ ಚಲುವನ ವಯಸ್ಸು36, ಅಪ್ರಾಪ್ತೆ ವಯಸ್ಸು ಕಡಿಮೆ ಇದ್ದ ಕಾರಣ ಹಾಗೂ ಆತನ ಮದ್ಯವ್ಯಸನ ಹಾಗೂ ದುಶ್ಚಟಗಳಿಂದ ಬೇಸತ್ತ ಬಾಲಕಿಯ ಸಂಬಂಧಿಕರು ಚಲುವನ ಪ್ರೀತಿಗೆ ಅಡ್ಡ ಬಂದು ಆತನಿಗೆ ಬುದ್ದಿ ಹೇಳಿ ದೂರ ಇಟ್ಟಿದ್ದರು. ಪ್ರೇಯಸಿ ಕಾಣೆಯಾದ ಹಿನ್ನೆಲೆ ಕೋಪಗೊಂಡ ಚಲುವ ತನ್ನ ಫೇಸ್ ಬುಕ್ ಲೈವ್ ನಲ್ಲಿ ‘ನನ್ನ ಹುಡುಗಿಗೆ ಹೊಡೆದಿದ್ದೀರಾ, ಆಕೆಗೆ ಜೈಲಿನಲ್ಲಿ ನೀಡುವ ರೀತಿ ಚಿತ್ರಹಿಂಸೆ ಕೊಟ್ಟಿದ್ದೀರಾ, ಅವಳಿಗೆ ಪೋನ್ ಕೊಡದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ನೀವು ಅವಳನ್ನು ಎಲ್ಲಿಟ್ಟರೂ ಬಿಡುವುದಿಲ್ಲ ಎಂದು ಲೈವ್ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ಆಕೆಯ ಕೆಲವು ಸಂಬಂಧಿಕರು ಮಾಗಡಿ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ, ಸ್ಥಳಕ್ಕೆ ಕುಣಿಗಲ್ ಸಿಪಿಐ ಮಾಧ್ಯನಾಯಕ್ ತಮ್ಮ ಸಿಬ್ಬಂದಿ ಜೊತೆ ಹೋಗಿ ಶವವನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.