ಕಾಲೇಜು ವಿದ್ಯಾರ್ಥಿನಿ ಚುಡಾಯಿಸಿದ ಯುವಕ ಜೈಲಿಗೆ

| Published : Aug 25 2025, 01:00 AM IST

ಸಾರಾಂಶ

ವಿದ್ಯಾರ್ಥಿನಿ ಪ್ರಿಯಾಂಕ ನಿರಾಕರಿಸಿದ್ದಾಳೆ, ಆಗ ಮತ್ತೆ ಆರೋಪಿ ಆಯೂಬ್‌ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ತೊಂದರೆ ಕೊಡುತ್ತ, ನೀವು ನನ್ನ ಜೊತೆ ಮಾತನಾಡಲೇಬೇಕು ಎಂದು ಒತ್ತಾಯಿಸಿ, ಬಾಯಿಗೆ ಬಂದಂತೆ ಮಾತನಾಡಿ ಅಪಮಾನ ಮಾಡಿದ್ದು, ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ .

ಗುಂಡ್ಲುಪೇಟೆ: ಯುವಕನೊಬ್ಬ ಅನ್ಯ ಕೋಮಿನ ವಿದ್ಯಾರ್ಥಿನಿಯನ್ನು ಚುಡಾಯಿಸಿ ಜೈಲಿಗೆ ಸೇರಿದ ಪ್ರಸಂಗ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದಿದೆ. ಪಟ್ಟಣದ ನಿವಾಸಿ ಆಯೂಬ್‌ (22) ಎಂಬಾತನು ತಾಲೂಕಿನ ಬರಗಿ ಗ್ರಾಮದ ವಿದ್ಯಾರ್ಥಿನಿ ಪ್ರಿಯಾಂಕ (ಹೆಸರು ಬದಲು) (18) ಶನಿವಾರ ಸಂಜೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿದ್ದಾಗ ನನ್ನನ್ನೇಕೆ ಮಾತನಾಡಿಸುತ್ತಿಲ್ಲ, ನೀ ಅಂದ್ರೆ ನನಗಿಷ್ಟ ಎಂದು ಪೀಡಿಸಿದ್ದಾನೆ. ವಿದ್ಯಾರ್ಥಿನಿ ಪ್ರಿಯಾಂಕ ನಿರಾಕರಿಸಿದ್ದಾಳೆ, ಆಗ ಮತ್ತೆ ಆರೋಪಿ ಆಯೂಬ್‌ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ತೊಂದರೆ ಕೊಡುತ್ತ, ನೀವು ನನ್ನ ಜೊತೆ ಮಾತನಾಡಲೇಬೇಕು ಎಂದು ಒತ್ತಾಯಿಸಿ, ಬಾಯಿಗೆ ಬಂದಂತೆ ಮಾತನಾಡಿ ಅಪಮಾನ ಮಾಡಿದ್ದು, ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ವಿದ್ಯಾರ್ಥಿನಿ ದೂರು ಕೊಟ್ಟಿದ್ದಾಳೆ. ದೂರಿನನ್ವಯ ಗುಂಡ್ಲುಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.