ಯುವ ಸಮೂಹ ಸಾಮಾಜಿಕ ಮೌಲ್ಯಗಳ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ-ದುರ್ಗಾಪ್ರಸಾದ

| Published : Feb 18 2024, 01:31 AM IST

ಯುವ ಸಮೂಹ ಸಾಮಾಜಿಕ ಮೌಲ್ಯಗಳ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ-ದುರ್ಗಾಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ತಮ್ಮ ಜೀವನದ ಮೊದಲು 25 ವರ್ಷಗಳನ್ನು ಶ್ರಮವಹಿಸಿ ಉತ್ತಮ ವಿದ್ಯಾಭ್ಯಾಸವನ್ನು ಪಡೆದರೆ ಸಮಾಜಕ್ಕೆ ಆಸ್ತಿಯಾಗುತ್ತೀರಿ ಎಂದು ಉಪಪ್ರಾಚಾರ್ಯ ದುರ್ಗಾಪ್ರಸಾದ ಅಭಿಪ್ರಾಯಪಟ್ಟರು.

ಡಂಬಳ: ನಮ್ಮ ಯುವ ಸಮೂಹ ಸಾಮಾಜಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾಭ್ಯಾಸದೊಂದಿಗೆ ಕ್ರೀಡೆ, ಸಾಹಿತ್ಯ ಸೇರಿದಂತೆ ಇನ್ನಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಜೀವನದ ಮೊದಲು 25 ವರ್ಷಗಳನ್ನು ಶ್ರಮವಹಿಸಿ ಉತ್ತಮ ವಿದ್ಯಾಭ್ಯಾಸವನ್ನು ಪಡೆದರೆ ಸಮಾಜಕ್ಕೆ ಆಸ್ತಿಯಾಗುತ್ತೀರಿ ಎಂದು ಉಪಪ್ರಾಚಾರ್ಯ ದುರ್ಗಾಪ್ರಸಾದ ಅಭಿಪ್ರಾಯಪಟ್ಟರು.

ಡಂಬಳ ಹೋಬಳಿ ಡೋಣಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಡೋಣಿ ಇವರ ಸಹಯೋಗದೊಂದಿಗೆ ಸಮಾಜಮುಖಿ ಚಟುವಟಿಕೆಗಳು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನವೋದಯ ವಿದ್ಯಾಲಯದ ಕನ್ನಡ ಹಿರಿಯ ಉಪನ್ಯಾಸಕ ಮನೋಹರ ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿ, ಸುಶಿಕ್ಷಿತ ಯುವ ಸಮೂಹ ತಮ್ಮ ಪೋಷಕರು, ಸಮಾಜಕ್ಕೆ ಕೀರ್ತಿ ತರುತ್ತದೆ. ಶಿಕ್ಷಣದ ಜೊತೆಗೆ ನೈತಿಕ ಸಾಮಾಜಿಕ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಂಡಾಗ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ.ಯುವಪೀಳಿಗೆ ದೇಶದ ಭವಿಷ್ಯ ತಮ್ಮ ಜೀವನವನ್ನು ಸೂಕ್ತ ಮಾರ್ಗದಲ್ಲಿ ನಡೆಸಿಕೊಳ್ಳಬೇಕು.ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿಯಾಗಿ ಸಮಾಜಕ್ಕೆ ಶ್ರಮ ಜೀವಿಯಾಗಿ ಬಾಳಬೇಕೆಂದು ಸಲಹೆ ನೀಡಿದರು.

ಪುಸ್ತಕ ಪ್ರದರ್ಶನ, ಜಾನಪದ ಗೀತೆ ಸ್ಪರ್ಧೆ, ನಿಬಂಧ ಸ್ಪರ್ಧೆ ಸೇರಿದಂತೆ ಇತರೆ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎ.ವಿ. ಶಿವನಗೌಡರ, ಶಿಕ್ಷಕಿ ಪದ್ಮಾವತಿ, ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ಯು.ಎಸ್. ಗಂಗಾಪೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.