ಯುವಜನತೆ ಗಾಂಧಿ ಸಂದೇಶ ಅಳವಡಿಸಿಕೊಳ್ಳಿ

| Published : Oct 27 2025, 02:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಹಾತ್ಮಾ ಗಾಂಧೀಜಿಯವರ ಜೀವನದ ಸಂದೇಶಗಳನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದು ರಾಜ್ಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಜ್ಯಾಧ್ಯಕ್ಷ ಬಾಪುಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾತ್ಮಾ ಗಾಂಧೀಜಿಯವರ ಜೀವನದ ಸಂದೇಶಗಳನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದು ರಾಜ್ಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಜ್ಯಾಧ್ಯಕ್ಷ ಬಾಪುಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಜರುಗಿದ ಮಹಾತ್ಮಾ ಗಾಂಧೀಜಿ ದತ್ತಿ. ಸಂಗಪ್ಪ ಕಮದಾಳ ದತ್ತಿ. ಶ್ರೀ ಮುರಗೋಡ ಮಹಾದೇವರು ದತ್ತಿ ಎಂಬ ವಿಶೇಷ ದತ್ತಿಗೋಷ್ಠಿಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಹೋರಾಟದ ಬದುಕು ಇಂದು ನಾವೆಲ್ಲ ಸ್ಮರಿಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವೀರಪ್ಪ ಹುಡೇದ ಮಾತನಾಡಿ, ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ದತ್ತಿಗೋಷ್ಠಿಗಳನ್ನು ಏರ್ಪಡಿಸಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಶರಣ ಸಾಹಿತ್ಯದ ಚಿಂತಕ ಸಿದ್ದಲಿಂಗಪ್ಪ ಹದಿಮೂರ ಮಾತನಾಡಿ, ಇಂಚಗೇರಿ ಮಠವು ಸ್ವಾತಂತ್ರ‍್ಯ ಹೋರಾಟದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ನಡೆಸುವ ಮೂಲಕ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಅಂತರ್ಜಾತೀಯ ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ನಡೆಸಿದ್ಧಾರೆ. ಜಾತ್ಯತೀತ ಸಾಮರಸ್ಯದ ಮನೋಭಾವಕ್ಕೆ ಹೆಸರುವಾಸಿಯಾದ ಶ್ರೀ ಮಠದ ಮಾಧವಾನಂದ ಪ್ರಭೂಜಿ (ಮಹಾದೇವಪ್ಪ ಮುರಗೋಡ) ಯವರ ನೇತೃತ್ವದಲ್ಲಿ ಸಶಸ್ತ್ರ ಹೋರಾಟದಲ್ಲಿ ಇಂಚಗೇರಿ ಮಠದ ಅನನ್ಯ ಪಾತ್ರವನ್ನು ನಾವೆಲ್ಲರೂ ಸ್ಮರಿಸಬೇಕೆಂದು ಕರೆ ನೀಡಿದರು.

ಶಿಕ್ಷಕ ಯಮನಪ್ಪ ಪವಾರ, ಶಿಕ್ಷಕಿ ಶರಣಮ್ಮ ಹಾದಿಮನಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಣಿ ಹುಡೇದ, ಅಮರೇಶ್ವರ ವಿ.ವಿ.ಸಂಘದ ಅಧ್ಯಕ್ಷ ಬಿ.ಎಸ್.ನವಲಿ, ಸಾಮಾಜಿಕ ಚಿಂತಕ ಇಸಾಕ ಪಠಾಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಕಸಾಪ ಜಿಲ್ಲಾ ಪದಾಧಿಕಾರಿಗಳಾದ ಸುಖದೇವಿ ಅಲಬಾಳಮಠ, ಜಯಶ್ರೀ ಹಿರೇಮಠ, ಸಿ.ಎಸ್.ಕಣಕಾಲಮಠ ಉಪಸ್ಥಿತರಿದ್ದರು. ಶಶಿಕಲಾ ನಾಯ್ಕೋಡಿ, ಸುನಂದಾ ಕೋರಿ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಸ್ವಾಗತಿಸಿ ಗೌರವಿಸಿದರು. ಡಾ.ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶೈಲಾ ಬಳಗಾನೂರ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.