ಯುವಕರು ಕಾಂಗ್ರೆಸ್‌ ಕಡೆ ಹೆಚ್ಚು ವಾಲುತ್ತಿದ್ದಾರೆ-ಕೃಷ್ಣಗೌಡ ಪಾಟೀಲ

| N/A | Published : Jul 04 2025, 11:47 PM IST / Updated: Jul 05 2025, 12:49 PM IST

ಯುವಕರು ಕಾಂಗ್ರೆಸ್‌ ಕಡೆ ಹೆಚ್ಚು ವಾಲುತ್ತಿದ್ದಾರೆ-ಕೃಷ್ಣಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

 ಯುವಶಕ್ತಿ ಇತ್ತೀಚೆಗೆ ಕಾಂಗ್ರೆಸ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು.

ಲಕ್ಷ್ಮೇಶ್ವರ: ಈ ದೇಶಕ್ಕೆ ಯುವಶಕ್ತಿಯ ಕೊಡುಗೆ ಅಪಾರವಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಆದ್ಯತೆ ಇಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಕಾಂಗ್ರೆಸ್‌ನಲ್ಲಿ ಯುವಕರಿಗೆ ಸದಾ ಹೆಚ್ಚು ಆದ್ಯತೆ ನೀಡುವ ಮೂಲಕ ಉತ್ತರ ಕೊಡುತ್ತಿದೆ. ಯುವಶಕ್ತಿ ಇತ್ತೀಚೆಗೆ ಕಾಂಗ್ರೆಸ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು. 

ಅವರು ಶುಕ್ರವಾರ ಪಟ್ಟಣದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ನಿವಾಸದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜುಲೈ ೧೨ರಂದು ನಡೆಯುವ ಚುನಾಯಿತ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಯುವ ಶಕ್ತಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗದಗದಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಭಾಗವಹಿಸಬೇಕು. ಜಿಲ್ಲೆಯಲ್ಲಿ ಪಕ್ಷದ ಹಿರಿಯರ ಮಾರ್ಗದರ್ಶನಲ್ಲಿ ಯುವಕರು ಪಕ್ಷದ ಬಲ ಹೆಚ್ಚಿಸಬೇಕು. 12 ರಂದು ಗದಗದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆಯುವ ಯುವ ಧ್ವನಿ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದು ಯಶಸ್ವಿಗೊಳಿಸಬೇಕು ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ್, ರಾಜ್ಯಯುವ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು, ಪಕ್ಷದ ಶಾಸಕರು, ಮಾಜಿ ಶಾಸಕರಗಳು, ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಹೇಳಿದರು

,ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಪಕ್ಷಕ್ಕೆ ಯುವಶಕ್ತಿ ಆನೆಬಲ ಇದ್ದಂತೆ. ಪಕ್ಷವನ್ನು ಹಿರಿಯರು ಕಟ್ಟಿ ಬೆಳೆಸಿದ್ದರೆ, ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿ ಯುವಕರಿಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಯುವ ಕಾಂಗ್ರೆಸ್ ಸಮಾವೇಶ ರಾಜ್ಯಕ್ಕೆ ಒಂದು ಸಂದೇಶವನ್ನು ನೀಡುವಂತಾಗಲಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು. 

ಈ ಸಂದರ್ಭದಲ್ಲಿ ರಾಜ್ಯ ಪ್ರ.ಕಾರ್ಯದರ್ಶಿಗಳಾದ ಅಕ್ಷಯ ಪಾಟೀಲ, ಉದಯಗೌಡ ವೀರನಗೌಡ, ಹಜರೇಸಾಬ ನದಾಫ, ಲೊಕೇಶ ದೊಡ್ಡಮನಿ, ತಾಲೂಕು ಅಧ್ಯಕ್ಷ ರಾಹುಲ್ ಹೊಳಲಾಪುರ, ನಗರ ಅಧ್ಯಕ್ಷ ಅಮರೇಶ ತೆಂಬದಮನಿ, ಜಯಮ್ಮ ಕಳ್ಳಿ, ರಾಜರತ್ನ ಹುಲಗೂರ, ಕಿರಣ ನವಲೆ, ಮಹಾಂತೇಶ ಗುಡಿಸಲಮನಿ, ಪ್ರಕಾಶ ಕೊಂಚಿಗೇರಿಮಠ, ವಾಸಿಂ ಮುಚ್ಚಾಲೆ, ನೀಲಪ್ಪ ಶೇರಸೂರಿ, ದಾದಾಪೀರ ಟಕ್ಕೇದ, ಯಲ್ಲಪ್ಪ ಹಂಜಗಿ, ರಾಜು ಓಲೆಕಾರ, ಶಿದ್ದು ದುರಗಣ್ಣವರ, ಸರ್ಫರಾಜ ಸೂರಣಗಿ, ಮಹಾದೇವ ಹಾದಿಮನಿ, ಬಸವರಾಜ ಬೆಟಗೇರಿ, ರಾಜು ಓಲೇಕಾರ, ರಾಜು ಬೆಂಚಳ್ಳಿ, ಬಾಬು ಅಳವಂಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.

Read more Articles on