ಸಾರಾಂಶ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡೆ ಎನ್.ಎಸ್.ಎಸ್,ಯುವರೆಡ್ ಕ್ರಾಸ್, ಸ್ಕೌಟ್ ಅಂಡ್ ಗೈಡ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಬೀರೂರುಸಾಮಾಜಿಕ ಗೌರವ ತರುವ ಮೌಲ್ಯಯುತ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ. ಯುವಕರು ಈ ದೇಶದ ಶಕ್ತಿಯಾಗಿದ್ದು ಅವರೇ ಈ ದೇಶದ ಆಸ್ತಿ ಎಂದು ಪುರಸಭಾ ಆಶ್ರಯ ಸಮಿತಿ ಸದಸ್ಯ ಹಾಗೂ ಜಿ.ಎಫ್.ಜಿಸಿ ಕಾಲೇಜಿನ ಸಿಡಿಸಿ ಸದಸ್ಯ ಎನ್.ಮುಬಾರಕ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ,ಕ್ರೀಡಾ, ಎನ್.ಎಸ್.ಎಸ್,ಯುವರೆಡ್ ಕ್ರಾಸ್, ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಪದವಿಯನ್ನು ಕಲಿಕೆಗಲ್ಲದೆದೆ ಬರೀ ಪದವಿ ಗಳಿಕೆಗೆ ಉಪಯೋಗಿಸುವ ಮನಸ್ಥಿತಿಯಿಂದ ಕೀಳರಿಮೆ ಮೂಡುತ್ತಿದೆ. ಆದರೆ ಯಾವುದೇ ಉನ್ನತ ಶೈಕ್ಷಣಿಕ ಪದವಿಗೆ ಕಡಿಮೆ ಇಲ್ಲದಂತೆ ಪದವಿ ವ್ಯಾಸಾಂಗಕ್ಕೆ ಅಷ್ಟೆ ಮಹತ್ವವಿದೆ ಎಂಬುದನ್ನು ಯುವ ಪೀಳಿಗೆ ಅರ್ಥ ಮಾಡಿಕೊಂಡು ಶೈಕ್ಷಣಿಕ ಬದುಕಿನಲ್ಲೇ ಉತ್ತಮ ಸಾಧನೆ ಮಾಡಬೇಕೆ ವಿನಃ ಮಾನವೀ ಯತೆ ಮರೆಯಬಾರದು ಸಂಬಂಧ ಮತ್ತು ಗುರುಹಿರಿಯರಿಗೆ ಬೆಲೆಕೊಟ್ಟಾಗ ಮಾತ್ರ ಸಮಾಜಕ್ಕೆ ಒಳಿತಾಗುವ ಶಕ್ತಿ ಲಭಿಸುತ್ತದೆ ಎಂದರು.ಶಾಸಕ ಕೆ.ಎಸ್.ಆನಂದ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕಾಲೇಜಿಗೆ ಬೇಕಾದ 4 ಕೊಠಡಿಗಳು ನಿರ್ಮಾಣವಾಗುತ್ತಿವೆ. ಈ ಕಾಲೇಜಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಕ್ಕೆ ಸಿಡಿಸಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸಿದರು.ನಿವೃತ್ತ ಯೋಧ ಕುಮಾರಸ್ವಾಮಿ ಮಾತನಾಡಿ, ಭಾರತೀಯ ಯೋಧರು ಅಪ್ರತಿಮ ದೇಶ ಭಕ್ತರು, ಯುವಜನರು ರಾಷ್ಟ್ರಾಭಿ ಮಾನ ಹೊಂದುವ ಜೊತೆಗೆ ಸೇನೆ ಮೂಲಕ ದೇ ಶ ಸೇವೆಗೆ ಮುಂದಾಗಬೇಕು. ಭಾರತೀಯ ಸೇನೆ ವಿಷಮ ಸನ್ನಿವೇಶಗಳನ್ನು ಕೆಚ್ಚೆದೆಯಿಂದ ಎದುರಿಸಿ ದೇಶಭಕ್ತಿ ಮೆರೆದಿದೆ. ಸೈನಿಕನಲ್ಲಿ ಕೆಚ್ಚೆದೆಯ ಸಂಯಮ, ಧೈರ್ಯ ಸಂದರ್ಭಕ್ಕೆ ತಕ್ಕಂತೆ ಮೂಡಿಬರುತ್ತವೆ. ಸನ್ನಿವೇಶ ಎದುರಿಸುವುದು ಹೇಗೇ, ಎನ್ನುವುದನ್ನು ಸೈನ್ಯ ಕಲಿಸುತ್ತದೆ ಎಂದು ತಿಳಿಸಿದರು.ನಿವೃತ್ತ ಯೋಧ ದಕ್ಷಿಣಮೂರ್ತಿ ಮಾತನಾಡಿ, ಸೇನೆಯಲ್ಲಿ ತಮ್ಮ ಸೇವಾ ಅವಧಿ ಅನುಭವ ಹಂಚಿಕೊಂಡು ನಮ್ಮ ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಉಪಟಳ ನೀಡುತ್ತವೆ. ಪಾಕಿಸ್ಥಾನ ಕಾಶ್ಮೀರದಲ್ಲಿ ಕುಮ್ಮಕ್ಕು ನೀಡುವ ಮೂಲಕ ಭಯೋ ತ್ಪಾದನೆಗೆ ಬೆಂಬಲ ನೀಡುತ್ತಿದೆ. ಆದರೆ ಕಾಶ್ಮೀರದ ಶೇ. 90ಕ್ಕೂ ಹೆಚ್ಚು ಜನ ಭಾರತದೊಂದಿಗೆ ಇರಲು ಇಚ್ಚಿಸುತ್ತಾರೆ. ಭಾರತೀಯ ಸೈನ್ಯ ತಂತ್ರಜ್ಞಾನದ ಜೊತೆಗೆ ಯುದ್ದ ನೈಪುಣ್ಯ ಅಳವಡಿಸಿದೆ. ಹಾಗಾಗಿ ನಮ್ಮ ಸೇನೆಗೆ ಜಗತ್ತಿನಲ್ಲೇ ಹೆಚ್ಚು ಗೌರವವಿದೆ ಎಂದರು. ಒಬ್ಬ ಸೈನಿಕನಿಗೆ ಜೀವನದಲ್ಲಿ ಶಿಸ್ತು ಮತ್ತು ಶ್ರದ್ಧೆ ಜೊತೆಗೆ ಸಾಮಾಜಿಕ ಗೌರವ ಲಭ್ಯ. ಯುವಕರು ಮತ್ತು ಬದಲಾದ ಸನ್ನಿವೇಶದಲ್ಲಿ ಸುಶಿಕ್ಷಿತ ಯುವತಿಯರಿಗೂ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರುಅಧ್ಯಕ್ಷತೆವಹಿಸಿದ್ದ ಪ್ರಾಶುಂಪಾಲ ಡಾ.ಎಸ್.ಹರೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಪರಿಶ್ರಮವಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ಹೊರಹೊಮ್ಮಲು ಸಾಧ್ಯ, ಮನುಷ್ಯನ ಭಾವನೆ ಮತ್ತು ಯೋಜನೆಗಳು ಒಂದಕ್ಕೊಂದು ಪೂರಕವಾ ದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ. ವಿದ್ಯಾರ್ಥಿಗಳು ಅಂಕಗಳಿಸಲು ಮಾತ್ರ ಸ್ಪರ್ಧೆ ನಡೆಸದೆ ಅತ್ಯುತ್ತಮ ವಿದ್ಯಾರ್ಥಿಯಾಗಲು ಸ್ಪರ್ಧೆ ನಡೆಯಬೇಕು ಎಂದರು.ಈ ಸಂದರ್ಭದಲ್ಲಿ ಸಿಡಿಸಿ ಸದಸ್ಯ ಬಿ.ಜಿ.ಮೈಲಾರಪ್ಪ, ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ್, ಜಿ.ಸಿ.ಪ್ರಸಾದ್ ಕುಮಾರ್, ಲೋಕಾಂಬಿಕ, ವಿದ್ಯಾರ್ಥಿಗಳಾದ ಶಾಂತ, ಪವಿತ್ರ, ಭೂಮಿಕ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.12 ಬೀರೂರು 2ಬೀರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ಯುವರೆಡ್ ಕ್ರಾಸ್, ಸ್ಕೌಟ್ ಅಂಡ್ ಗೈಡ್ ಉದ್ಘಾಟನಾ ಕಾರ್ಯಕ್ರಮವನ್ನು ಪುರಸಭಾ ಆಶ್ರಯ ಕಮಿಟಿ ಸದಸ್ಯ ಎನ್. ಮುಬಾರಕ್ ಉದ್ಘಾಟಿಸಿದರು. ಪ್ರಾಶುಂಪಾಲ ಡಾ.ಎಸ್.ಹರೀಶ್ ಕುಮಾರ್ ಮತ್ತಿತರರು ಇದ್ದರು.