ರಾಮನಗರ: ಜಗತ್ತಿನ ಖ್ಯಾತ ಐಟಿ, ಎಐ ಕಂಪನಿಗಳು ಭಾಗಿಯಾಗಿರುವ ಜಾಗತಿಕ ಎಐ ಶೃಂಗ ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುವ ಮೂಲಕ ದೇಶ ದ್ರೋಹಿ ಕೃತ್ಯ ಎಸಗಿದ್ದಾರೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಜಗನ್ನಾಥಗೌಡ ಕಿಡಿಕಾರಿದರು.

ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಜಾಗತಿಕ ಸಮುದಾಯ ಹಾಜರಿದ್ದ ಸಮಾರಂಭವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿರುವುದು ದೇಶದ ಘನತೆಗೆ ಧಕ್ಕೆ ತರುವಂತದ್ದು. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಭಾರತ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಂತಹ ಹಲವು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ. ಮೋದಿ ಅವರು ಕೃತಕ ಬುದ್ಧಿ ಮತ್ತೆ (ಎಐ)ಯನ್ನು ಭಾರತದ ಭವಿಷ್ಯದ ತಂತ್ರಜ್ಞಾನ ಎಂದು ಬಣ್ಣಿಸಿದ್ದಾರೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ದೇಶವನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸಿರುವ ಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಈ ಘಟನೆಯನ್ನು ಬಿಜೆಪಿ ಖಂಡಿಸುವ ಜೊತೆಗೆ ಕಾಂಗ್ರೆಸ್ಸಿಗರು ಏನೇ ಕುತಂತ್ರ ಮಾಡಿದರು ದೇಶದಲ್ಲಿ ಬಿಜೆಪಿಯವರು ಭಾರತವನ್ನು ಕಟ್ಟಲಿಕ್ಕೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ‌ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿಕ್ಕರಾಮು, ಕಾರ್ಯದರ್ಶಿ ಕೃಷ್ಣ, ಪ್ರಾಧಿಕಾರದ ಮಾಜಿ ನಿರ್ದೇಶಕ ಕಾಳಯ್ಯ, ಬಿಜೆಪಿ ಮುಖಂಡ ಮಂಜುನಾಥ್ ಇತರರಿದ್ದರು.