ಯುವಕರು ಧಾರ್ಮಿಕ ಆಚರಣೆಗಳನ್ನು ಮುಂದುವರಿಸಿ

| Published : Jul 22 2025, 12:15 AM IST

ಸಾರಾಂಶ

ಹೊಸಕೋಟೆ: ಪೂರ್ವಿಕರು ಆಚರಿಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಗಳು ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಪಟಾಲಮ್ಮ ದೇವಿ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಾಂಜಿನಿ ತಿಳಿಸಿದರು.

ಹೊಸಕೋಟೆ: ಪೂರ್ವಿಕರು ಆಚರಿಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಗಳು ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಪಟಾಲಮ್ಮ ದೇವಿ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಾಂಜಿನಿ ತಿಳಿಸಿದರು. ನಗರದ ಎಂವಿ ಬಡಾವಣೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪಟಾಲಮ್ಮ ದೇವಿ ದೇವಾಲಯದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಕಾಲಕ್ಕೆ ಮಳೆ ಬೆಳೆ ಆಗಲಿ ಎಂದು ದೇವಿಗೆ ಬೆಲ್ಲದಚ್ಚಿನ ದೀಪಾರತಿ ಮಾಡಿ ಪೂಜೆ ಸಲ್ಲಿಸಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು. ದೇವಾಲಯದ ಪ್ರಧಾನ ಅರ್ಚಕ ನಂದೀಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್, ಸದಸ್ಯರಾದ ಶೋಭಾ ಶಿವಾನಂದ್, ಟೌನ್ ಬಿಜೆಪಿ ಅದ್ಯಕ್ಷ ಬಾಲಚಂದ್ರ, ಅಸಂಘಟಿತ ಪಿಒಪಿ ಕಾರ್ಮಿಕರ ಸಂಘದ ಅಧ್ಯಕ್ಷ ಜೆ.ಎಂ.ಹಸೇನ್, ಪಟಾಲಮ್ಮ ದೇವಿ ಅಸಂಘಟಿತ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮುನಿಯಪ್ಪ, ಕಾರ್ಯದರ್ಶಿ ಮುತ್ತು, ಮೇಲುಕೋಟೆ ಕೃಷ್ಣ, ಸದಸ್ಯರಾದ ಚಂದ್ರು, ನಾರಾಯಣಸ್ವಾಮಿ, ಪೈಂಟರ್ ನಾರಾಯಣಸ್ವಾಮಿ, ಪ್ಲಂಬರ್ ರಘು, ಸುರೇಶ್, ಬಾಕ್ಸರ್ ರವಿ ಇತರರು ಹಾಜರಿದ್ದರು.