ಸಾರಾಂಶ
ದಂಡಿನಶಿವರ ಹೋಬಳಿಯ ಬಳ್ಳೆಕಟ್ಟೆ ಗ್ರಾಮದ ನಿವಾಸಿ ಲಿಂಗಪ್ಪನವರ ಮಗ ದರ್ಶನ್ (21) ಮೃತ ದುರ್ದೈವಿ.
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಸಾರಿಗೇಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ದಂಡಿನಶಿವರ ಹೋಬಳಿಯ ಬಳ್ಳೆಕಟ್ಟೆ ಗ್ರಾಮದ ನಿವಾಸಿ ಲಿಂಗಪ್ಪನವರ ಮಗ ದರ್ಶನ್ (21) ಮೃತ ದುರ್ದೈವಿ. ಈತನು ಗುರುವಾರ ಮಧ್ಯಾಹ್ನ ಗ್ರಾಮದ ಸ್ನೇಹಿತರೊಂದಿಗೆ ಸಾರಿಗೆಹಳ್ಳಿ ಕೆರೆಗೆ ಈಜಲು ತೆರಳಿದ್ದಾನೆ. ಮಾಚೇನಹಳ್ಳಿ ಕೋಡಿ ಬಳಿ ಈಜಲು ಎಲ್ಲರೊಟ್ಟಿಗೆ ದರ್ಶನ್ ಕೂಡ ನೀರಿಗೆ ಇಳಿದಿದ್ದಾನೆ. ಆದರೆ ಈಜಲು ಬಾರದ ಯುವಕ ದರ್ಶನ್ ದಿಢೀರನೆ ನೀರಿನಲ್ಲಿ ಮುಳುಗಿದ್ದಾನೆ. ಗಾಬರಿಗೊಂಡ ಇನ್ನಿತರೆ ಸ್ನೇಹಿತರು ದರ್ಶನ್ ಗಾಗಿ ಹುಡುಕಾಡಿದ್ದಾರೆ. ಈ ವಿಚಾರ ಗ್ರಾಮಸ್ಥರಿಗೆ ತಿಳಿದ ಕೂಡಲೇ ಗ್ರಾಮದ ಹಲವು ಈಜುದಾರರು ಮೃತ ದರ್ಶನ್ ಪತ್ತೆಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಸಂಜೆಯಾಗಿದ್ದರಿಂದ ಹುಡುಕಾಟ ಕೈಬಿಡಲಾಯಿತು. ಶುಕ್ರವಾರ ಬೆಳಗ್ಗೆಯಿಂದಲೇ ಪಟ್ಟಣದ ಅಗ್ನಿಶಾಮಕ ಸಿಬ್ಬಂದಿ ಮತ್ತು ದಂಡಿನಶಿವರ ಪೊಲೀಸರು ಹಗ್ಗ ಮತ್ತು ಕಬ್ಬಿಣದ ಸರಪಳಿಯ ಸಹಾಯದಿಂದ ಹುಡುಕಾಟ ಮಾಡಿದರು. ಅಂತಿಮವಾಗಿ ದರ್ಶನ್‌ನ ಶವ ಪತ್ತೆಯಾಗಿ ಮೇಲೆತ್ತಲಾಯಿತು.ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರ್ಶನ್ ನೀರಿನಲ್ಲಿ ಮುಳುಗಿ ಹೋದ ಸಂಗತಿ ಕಾಳ್ಗಿಚ್ಚಿನಂತೆ ಹಬ್ಬಿ ಅಪಾರ ಸಂಖ್ಯೆಯಲ್ಲಿ ಜನರು ಕೆರೆಯ ಬಳಿ ಜಮಾಯಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))