ಲಕ್ಷ್ಮೇಶ್ವರ: ಬಿರುಗಾಳಿ ಮಳೆಗೆ ವಿದ್ಯುತ್‌ ಕಂಬ ಉರುಳಿ ಭಾನುವಾರ ಗಾಯಗೊಂಡಿದ್ದ ಕುರಿಗಾಹಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾನೆ.

ಮಂಜುನಾಥ ನಿಂಗಪ್ಪ ಶೆರಸೂರಿ (26) ಮೃತಪಟ್ಟ ವ್ಯಕ್ತಿ.

ಈತ ಭಾನುವಾರ ಸಂಜೆ ಪಟ್ಟಣದ ಹೊರವಲಯದಲ್ಲಿ ಕುರಿ ಕಾಯಲು ಹೋಗಿದ್ದಾಗ ಬಿರುಗಾಳಿ ಮಳೆಗೆ ವಿದ್ಯುತ್‌ ಕಂಬ ಉರುಳಿ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅಲ್ಲದೇ ಎರಡು ಕಾಲುಗಳೂ ಮುರಿದಿದ್ದವು. ಕೂಡಲೇ ಆತನನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹುಬ್ಬಳ್ಳಿಯ ಕೆಎಂಸಿಆರಐಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ.

ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸಿಡಿಲು ಬಡಿದು ಕುರಿಗಾಹಿ ಸಾವು

ಗದಗ: ಜಿಲ್ಲೆಯಲ್ಲಿ ಸೋಮವಾರ ಸಂಜೆ ಗಂಗಿಮಡಿಯ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಹಿಯೊಬ್ಬರು ಅಸುನೀಗಿದ್ದಾರೆ.ಒಕ್ಕಲಗೇರಿ ಓಣಿಯ ನಿವಾಸಿ ಮರಿತಮ್ಮಪ್ಪ ಗಿಡ್ಡಹನುಮಣ್ಣನವರ (52) ಮೃತಪಟ್ಟ ವ್ಯಕ್ತಿ.​ಸೋಮವಾರ ಸಂಜೆ ಗಂಗಿಮಡಿ ಹೊರವಲಯದ ಜಮೀನೊಂದರಲ್ಲಿ ಹಾಕಲಾಗಿದ್ದ ಕುರಿಯ ದೊಡ್ಡಿಯಲ್ಲಿ ಮರಿತಮ್ಮಪ್ಪ ಆಶ್ರಯ ಪಡೆದಿದ್ದರು. ಆಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.