ಬಾದಾಮಿ: ಸಮೀಪದ ಬನಶಂಕರಿ ಹೊಂಡದಲ್ಲಿ ಬಿದ್ದು ಯುವಕ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.

ಬಾದಾಮಿ: ಸಮೀಪದ ಬನಶಂಕರಿ ಹೊಂಡದಲ್ಲಿ ಬಿದ್ದು ಯುವಕ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ. ಅಮಿನಗಡದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್‌ ರಫೀಕ ಅಬ್ದುಲ್ ಸಾಬ ಗುಡೂರು(35) ಮೃತ ಯುವಕ. ಬನಶಂಕರಿ ಜಾತ್ರೆಗೆ ಬಂದ ಈತ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಬುಧವಾರ ಸಂಜೆವರೆಗೂ ಶವ ಪತ್ತೆಯಾಗಿಲ್ಲ. ಶವ ಪತ್ತೆ ಕಾರ್ಯ ಮುಂದುವರೆದಿದೆ.