ಯುವ ಆವೃತ್ತಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವರದಾನ

| Published : Nov 21 2025, 02:00 AM IST

ಸಾರಾಂಶ

ಸರ್ಕಾರಿ ಪ್ರೌಢಶಾಲೆಯ ಬಡ ಮಕ್ಕಳ ಓದಿಗೆ ಅನಕೂಲವಾಗಲಿ, ಅವರು ಸಹ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನ ಪಡೆದು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲಿ ಎಂಬುದೇ ಕನ್ನಡಪ್ರಭ ಯುವ ಆವೃತ್ತಿಯ ಉದ್ದೇಶ.

ನವಲಗುಂದ:

ಕನ್ನಡಪ್ರಭ ಯುವ ಆವೃತ್ತಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ಈ ಪತ್ರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಜೀವಿನಿಯಾಗಿದೆ ಎಂದು ಸಮಾಜ ಸೇವಕ ದಾವಲಸಾಬ ಅಲ್ಲಿಬಾಯಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರ್ಕಾರಿ ಪ್ರೌಢಶಾಲೆಯ ಬಡ ಮಕ್ಕಳ ಓದಿಗೆ ಅನಕೂಲವಾಗಲಿ, ಅವರು ಸಹ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನ ಪಡೆದು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲಿ ಎಂಬುದು ಇದರ ಮುಖ್ಯ ಉದ್ಯೇಶವಾಗಿದೆ. ಈ ಪತ್ರಿಕೆಯನ್ನು ವಿದ್ಯಾರ್ಥಿಗಳು ದಿನಂಪ್ರತಿ ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾಜ ಸೇವಕ ಮಾಬುಸಾಬ್‌ ಯರಗುಪ್ಪಿ ಮಾತನಾಡಿ, ಪಠ್ಯದ ಜತೆಗೆ ಸಾಮಾನ್ಯ ಜ್ಞಾನದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಗೆ ಬರುವ ಕನ್ನಡಪ್ರಭ ಪತ್ರಿಕೆಯ ಯುವ ಆವೃತ್ತಿ ಓದಬೇಕು ಮತ್ತು ಅದರಲ್ಲಿ ಮುಖ್ಯವಾಗಿರುವ ವಿಷಯ ಸಂಗ್ರಹಿಸಿಟ್ಟುಕೊಳ್ಳಬೇಕು. ಅದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಅನಕೂಲವಾಗುತ್ತದೆ ಎಂದರು...

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಖ್ವಾಜೇಸಾಬ ಮುಲ್ಲಾ ಹಂಚಿನಾಳ ಮಾತನಾಡಿದರು. ಬಳಿಕ ದಾವಲಸಾಬ ಅಲ್ಲಿಬಾಯಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕ ಆನಂದ ಭೋವಿ, ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಎಸ್‌ಡಿಎಂಸಿ ಸದಸ್ಯ ದಾದಾಪೀರ ಬೇಪಾರಿ, ಸಹ ಶಿಕ್ಷಕರಾದ ಡಿ.ಜಿ. ಹುಲ್ಲೂರ, ಎಸ್.ಪಿ. ಕಾಮತ್, ಮುಕ್ತಾರ ಅಹ್ಮದ ಕೋತ್ವಾಲ್, ಬಿ.ಎಸ್. ರಶ್ಮಿ, ಎಂ.ವಿ. ಶಿರಗೂರ, ಮೀರಾ ಒಡೆಯರ ಸೇರಿದಂತೆ ಹಲವರಿದ್ದರು.