ದೇವರಹಿಪ್ಪರಗಿ: ತಾಲೂಕಿನ ಹುಣಶ್ಯಾಳ ಗ್ರಾಮದ ಯುವಕ ರಸ್ತೆ ಅಪಘಾತದಲ್ಲಿ ಕುವೈತ್ ದೇಶದಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ದೇವರಹಿಪ್ಪರಗಿ: ತಾಲೂಕಿನ ಹುಣಶ್ಯಾಳ ಗ್ರಾಮದ ಯುವಕ ರಸ್ತೆ ಅಪಘಾತದಲ್ಲಿ ಕುವೈತ್ ದೇಶದಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.ಶಮಶುದ್ದಿನ್ ಮಹಿಬೂಬಸಾಬ ಸಿಪಾಯಿ(45) ಮೃತ ಯುವಕ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ತಾಯಿ, ಮೂವರು ಸಹೋದರಿಯರು, ಸಹೋದರು ಹಾಗೂ ಬಂಧುಗಳಿದ್ದಾರೆ. ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ. ಶುಕ್ರವಾರ ಮಧ್ಯಾಹ್ನ ಮೃತದೇಹ ಸ್ವಗ್ರಾಮಕ್ಕೆ ಬರಲಿದ್ದು, ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.