ಯುವಕ ನಾಪತ್ತೆ: ಮುಂದುವರೆದ ಶೋಧ

| Published : Dec 27 2023, 01:31 AM IST

ಸಾರಾಂಶ

ಮಾಗಡಿ: ಸ್ನೇಹಿತನ ಜೊತೆ ಸಾವನದುರ್ಗದಲ್ಲಿ ಚಾರಣಕ್ಕೆ ಬಂದು ನಾಪತ್ತೆಯಾಗಿರುವ ಗಗನ್ ದೀಪ್ ಸಿಂಗ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ತಲಾ 8 ಸಿಬ್ಬಂದಿ ಸಾವನದುರ್ಗದಲ್ಲಿ ಗಗನ್ ದೀಪ್ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ ಮೂಲದ ಗಗನ್ (30), ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಡಿಸೆಂಬರ್ 24ರಂದು ರಜೆ ಇದ್ದದ್ದರಿಂದ ಸ್ನೇಹಿತನ ಜೊತೆ ಮಧ್ಯಾಹ್ನ 3ಕ್ಕೆ ಚಾರಣ ಏರಿದ್ದ ಗಗನ್ ಏಕಾಏಕಿ ಕಾಣೆಯಾಗಿದ್ದಾನೆ. ಇನ್ನು ಗಗನ್ ಕಾಣೆಯಾಗುತ್ತಿದ್ದಂತೆಯೇ ಸ್ನೇಹಿತರು ಬೆಟ್ಟ ಇಳಿದು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಎಚ್ಚೆತ್ತ ಪೊಲೀಸರು, ಅರಣ್ಯಾಧಿಕಾರಿಗಳು ಡ್ರೋಣ್ ಬಳಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ 48 ಗಂಟೆಗಳಿಂದ ಸ್ಥಳದಲ್ಲೇ ಬೀಡುಬಿಟ್ಟು ಗಗನ್‌ಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಈ ಬಗ್ಗೆ ಮಾಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.೨೬ಕೆಆರ್‌ಎಂಎನ್ ೭ಜೆಪಿಜಿ:

ಸಾವನದುರ್ಗದಲ್ಲಿ ಗಗನ್ ದೀಪ್ ಸಿಂಗ್ ಗಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿರುವುದು.