ದುಶ್ಚಟಗಳನ್ನು ತಡೆಗಟ್ಟಲು ಯುವಕರಿಂದ ಮಾತ್ರ ಸಾಧ್ಯ. ಆದರೆ ಯುವ ಜನತೆದುಶ್ಚಟಗಳ ದಾಸತ್ವಕ್ಕೆ ಮಾರು ಹೋಗದೆ ಅವುಗಳ ವಿರುದ್ಧ ಹೋರಾಟ ನಡೆಸಿದರೆ ಮಾತ್ರ ಅವುಗಳ ನಿರ್ಮೂಲನೆ ಸಾಧ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆ ಎಎಸ್ಐ ಅನಂತ್ ಕಮಾರ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ದುಶ್ಚಟಗಳನ್ನು ತಡೆಗಟ್ಟಲು ಯುವಕರಿಂದ ಮಾತ್ರ ಸಾಧ್ಯ. ಆದರೆ ಯುವ ಜನತೆದುಶ್ಚಟಗಳ ದಾಸತ್ವಕ್ಕೆ ಮಾರು ಹೋಗದೆ ಅವುಗಳ ವಿರುದ್ಧ ಹೋರಾಟ ನಡೆಸಿದರೆ ಮಾತ್ರ ಅವುಗಳ ನಿರ್ಮೂಲನೆ ಸಾಧ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆ ಎಎಸ್ಐ ಅನಂತ್ ಕಮಾರ್ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್, ಸುಂಟಿಕೊಪ್ಪ ವಲಯ ವತಿಯಿಂದ ಸುಂಟಿಕೊಪ್ಪಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ಅನಾಹುತಗಳು ಸಮಾಜಕ್ಕೆ ಮಾರಕವಾಗುತ್ತಿದೆ. ಯುವ ಜನತೆಯು ಅದರ ದಾಸತ್ವಕ್ಕೆ
ತುತ್ತಾಗಬೇಡಿ. ಡ್ರಗ್ಸ್ ಸೇವಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ಪ್ರಕಾರ ಕಠಿಣಜೈಲು ಶಿಕ್ಷೆಯಾಗುತ್ತದೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಅದು
ಮುಳುವಾಗುತ್ತದೆ. ಮಕ್ಕಳು ಈ ಬಗ್ಗೆಎಚ್ಚರದಿಂದಿರಬೇಕು ಎಂದರು.
ಸುಂಟಿಕೊಪ್ಪ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಉದ್ಘಾಟಿಸಿ ಮಾತನಾಡಿದ ಅವರು,ಮದ್ಯಪಾನ, ಧೂಮಪಾನ, ಮಾದಕ ವಸ್ತು, ಗುಟ್ಕಾ ಸೇವನೆಯು
ಕುಟುಂಬ ವರ್ಗವನ್ನು ಸಂಕಷ್ಟಕ್ಕೀಡು ಮಾಡುತ್ತದೆ ಎಂದರು.ಮುಖ್ಯ ಅತಿಥಿಗಳಾದ ಮಡಿಕೇರಿ ತಾಲೂಕು ಶ್ರೀ.ಕ್ಷೇ.ಧ.ಯೋ.
ಯೋಜನಾಧಿಕಾರಿ ಯು. ಪುರುಷೋತ್ತಮ್ ಮಾತನಾಡಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ಸಮಾಜಮುಖಿ
ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದರಲ್ಲಿವಿದ್ಯಾರ್ಥಿಗಳ ಸ್ವಸ್ಥ ಜೀವನಗೋಸ್ಕರ ಸ್ವಾಸ್ಥ್ಯ ಸಂಕಲ್ಪ ಎನ್ನುವ
ಕಾರ್ಯಕ್ರಮವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಇದರಿಂದಲಕ್ಷಾಂತರ ವಿದ್ಯಾರ್ಥಿಗಳು ದುಶ್ಚಟಮುಕ್ತರಾಗಿ
ಗೌರವ ಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಡಿ. ನರಸಿಂಹ ಅವರು
ಮಾತನಾಡಿ, ಮಕ್ಕಳು ಒಳ್ಳೆಯ ವಿದ್ಯೆ ಕಲಿತು ತಂದೆತಾಯಿಗೆ ಉತ್ತಮ ಹೆಸರು ತಂದುಕೊಡಬೇಕು ಎಂದರು.
ಪ್ರಭಾರ ಮುಖ್ಯ ಶಿಕ್ಷಕಿ ಚಿತ್ರ ಅಧ್ಯಕ್ಷತೆ ವಹಿಸಿದ್ದರು.ಪೋಲಿಸ್ ಸಿಬ್ಬಂದಿ ರಮೇಶ್, ಉಕ್ಕಡದ ಕಾರ್ಯದರ್ಶಿ ಸರಸ್ವತಿ,
ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ವಲಯದ ಮೇಲ್ವಿಚಾರಕ ಸಂತೋಷ್ ನಾಯ್ಕ್ ನಿರೂಪಿಸಿ, ಸೇವಾ
ಪ್ರತಿನಿಧಿ ಚಿತ್ರ ಸ್ವಾಗತಿಸಿ, ಸೇವಾ ಪ್ರತಿನಿಧಿ ಯಶೋಧವಂದಿಸಿದರು.