ದೇಶ ಸುಭದ್ರಗೊಳಿಸಲು ಯುವಕರೇ ಯೋಧರಾಗಿ : ಕೀರ್ತಿಕುಮಾರ್ ಕರೆ

| Published : Jul 27 2025, 01:50 AM IST

ದೇಶ ಸುಭದ್ರಗೊಳಿಸಲು ಯುವಕರೇ ಯೋಧರಾಗಿ : ಕೀರ್ತಿಕುಮಾರ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ಯೌವನ ವಯಸ್ಸಿನಲ್ಲಿ ವ್ಯಸನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು ಸುಭದ್ರಗೊಳಿಸುವ ಯೋಧರಾಗಬೇಕು ಎಂದು ಬಸವನಹಳ್ಳಿ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್ ಕರೆ ನೀಡಿದರು.

- ಎಐಟಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ಯೌವನ ವಯಸ್ಸಿನಲ್ಲಿ ವ್ಯಸನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು ಸುಭದ್ರಗೊಳಿಸುವ ಯೋಧರಾಗಬೇಕು ಎಂದು ಬಸವನಹಳ್ಳಿ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್ ಕರೆ ನೀಡಿದರು.ನಗರದ ಎಐಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ಧ 26ನೇ ಕಾರ್ಗಿಲ್ ವಿಜಯೋತ್ಸವ ಉದ್ಘಾಟಿಸಿ ಮಾತನಾಡಿದರು. ಭಾರತಾಂಬೆ ಮಣ್ಣಿನ ಋಣ ಹಾಗೂ ತಾಯ್ನಾಡಿನ ಜೀವಸಂಕುಲ ಕಾಪಾಡುತ್ತಿರುವ ಸೈನಿಕರು ದೇಶದ ಹೆಮ್ಮೆಯ ಪುತ್ರರು. ಹೀಗಾಗಿ ಉತ್ಸಾಹಿ ಯುವಕರು ಜೀವನದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದರೆ ಬದುಕಿನಲ್ಲಿ ಆತ್ಮಸ್ಥೆರ್ಯ ಹಾಗೂ ಶಿಸ್ತಿನ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ರಾಷ್ಟ್ರದ ಹಿತದೃಷ್ಟಿಯಿಂದ ಸೈನಿಕರು, ರೈತರು, ಪೌರ ಕಾರ್ಮಿಕರು ತಮ್ಮದೇ ಶೈಲಿಯಲ್ಲಿ ಸಮಾಜಕ್ಕಾಗಿ ದುಡಿ ಯುತ್ತಿದ್ದಾರೆ. ಈ ನಡುವೆ ಹಿಮಪರ್ವತದಲ್ಲಿ ಯಾವುದೇ ಕ್ಷಣದಲ್ಲೂ ಪ್ರಾಣದ ಪಕ್ಷಿ ಹಾರಿ ಹೋಗಲಿದೆ ಎಂಬ ಸತ್ಯ ಅರಿತಿದ್ದರೂ ಗಡಿಯಲ್ಲಿನ ಸೈನಿಕರ ಸೇವೆ ಎಲ್ಲರಿಗಿಂತ ಮಿಗಿಲಾದುದು ಎಂದು ಹೇಳಿದರು.ಭಾರತೀಯರಾದ ನಾವುಗಳು ಯುವ ಸಮೂಹಕ್ಕೆ ಹೆಚ್ಚೆಚ್ಚು ಯೋಧರನ್ನಾಗಿಸಲು ಪ್ರೋತ್ಸಾಹಿಸಬೇಕು. ದೇಶಪ್ರೇಮವನ್ನು ಆಳವಾಗಿ ಮೈಗೂಡಿಸಿಕೊಳ್ಳಲು ಪಾಲಕರು ಮುಂದಾದರೆ ರಾಷ್ಟ್ರದ ಮಣ್ಣಿನ ಋಣ ತೀರಿಸಿದಂತಾ ಗಲಿದೆ ಎಂದ ಅವರು, ಆ ನಿಟ್ಟಿನಲ್ಲಿ ಯುವಕರು ಸೈನಿಕರಾಗುವ ಆಶಯ ವ್ಯಕ್ತಪಡಿಸಬೇಕು ಎಂದರುರಾಷ್ಟ್ರದ ಮೇಲೆ ಅಭಿಮಾನ, ಪ್ರೀತಿ ಹಾಗೂ ಸಮಸ್ತ ಭಾರತೀಯರನ್ನು ರಕ್ಷಿಸುತ್ತೇನೆಂಬ ಕಿಚ್ಚಿನಿಂದ ಸೈನ್ಯಕ್ಕೆ ಸೇರ ಬೇಕಿದೆ ಹೊರತು, ಹೊಟ್ಟೆಪಾಡಿಗಲ್ಲ. ಎದುರಾಳಿಗಳ ಗುಂಡಿಗೆ ಸೀಳುವಂಥ ಆತ್ಮಸ್ಥೈರ್ಯ ತುಂಬಿರಬೇಕು. ಜೊತೆಗೆ ಕಾಶ್ಮೀರದ ಹಿಮಕಣಿವೆಯನ್ನು ಒಗ್ಗಿಸುವಂಥ ಶಾರೀರಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಸೈನಿಕ ಪ್ರಕಾಶ್‌ಶೆಟ್ಟಿ ಮಾತನಾಡಿ 1999ರಲ್ಲಿ ಸತತವಾಗಿ ಮೂರು ತಿಂಗಳು ಹೋರಾಡಿದ ಪರಿಣಾಮ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ವಿಜಯ ಸಾಧಿತು. ಈ ಯುದ್ಧದಲ್ಲಿ ಅನೇಕರು ದೇಶಕ್ಕಾಗಿ ಮಡಿದರು, ಹಲವರಿಗೆ ಅಂಗಾಂಗಗಳು ವೈಫಲ್ಯತೆ ಉಂಟಾಯಿತು. ಆ ಕಾರ್ಗಿಲ್ ಯುದ್ಧದಲ್ಲಿ ಮಡಿದವರ ನೆನಪಿಗೆ ವಿಜಯೋತ್ಸವ ಆಚರಿಸ ಲಾಗುತ್ತಿದೆ ಎಂದರು.ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ರಿಜಿಸ್ಟರ್ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಭಾರತದಲ್ಲಿ ಇಂದು ಕೋಟ್ಯಂತರ ಕುಟುಂಬಗಳು ಸೌಖ್ಯವಾಗಿ ಬಾಳಲು, ಶುಭ ಸಮಾರಂಭ ಆಚರಣೆ ಹಾಗೂ ಸ್ನೇಹಿತರೊಂದಿಗೆ ಗಡಿಯಲ್ಲಿನ ಯೋಧರು ಕಾರಣ. ಪ್ರತಿಯೊಬ್ಬ ಪ್ರಜೆಯು ಸೈನಿಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್, ಎಐಬಿಎಂ ಪ್ರಾಂಶುಪಾಲ ಕೆ.ಎಸ್.ಪ್ರಕಾಶ್‌ರಾವ್, ಉಪ ಪ್ರಾಂಶುಪಾಲ ಡಾ. ಪ್ರದೀಪ್ ಜಿ.ದೇಸಾಯಿ ಉಪಸ್ಥಿತರಿದ್ದರು. 26 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ಧ 26ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಬಸವನಹಳ್ಳಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್ ಉದ್ಘಾಟಿಸಿದರು. ಡಾ. ಸುಬ್ರಾಯ, ಡಾ. ಸಿ.ಟಿ. ಜಯದೇವ್‌ ಇದ್ದರು.

------------------------------