ಯುವಕರು ಕೃಷಿಗೆ ಬನ್ನಿ: ಸ್ಯಾಮ್ಸನ್‌ ನೊರೊನ್ಹಾ

| Published : Jul 26 2025, 01:30 AM IST

ಸಾರಾಂಶ

ಕೃಷಿಕ ಸಂಘವು ಪಡುಬೆಳ್ಳೆ ಭಟ್ಟ ಸಾಲು ಪಾವ್ಲಿನ್ ಆಳ್ವರ ಮನೆ ವಠಾರದಲ್ಲಿ ವೈಜ್ಞಾನಿಕ ಮಲ್ಲಿಗೆ ಮತ್ತು ಭತ್ತ ಕೃಷಿ ಮಾಹಿತಿ ಕಾರ್ಯಕ್ರಮ ನಡೆಸಿತು.

ಕನ್ನಡಪ್ರಭ ವಾರ್ತೆ ಕಾಪು

ಆಧುನಿಕ ಯಂತ್ರೋಪಕರಣಗಳಿಂದಾಗಿ ಕೃಷಿ ಸುಲಭವಿದ್ದರೂ ಹಿರಿಯರ ಕೃಷಿ ಭೂಮಿ ಮಾರಿ ಯುವಕರು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ, ನಿವೃತ್ತಗೊಂಡವರು ನಗರಗಳಲ್ಲಿ ಫ್ಲಾಟ್ ವಾಸಿಗಳಾಗುತ್ತಿದ್ದಾರೆ. ತಮ್ಮ ಪಾಲಿನ ಜಮೀನನ್ನು ಮಾರದೆ ಅಥವ ಹಡೀಲು ಬಿಡದೆ ಯಾವುದೇ ಕೃಷಿ ಮಾಡಿದರೂ ಲಾಭ ಪಡೆಯಬಹುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪಾಂಬೂರು - ಪಂಜಿಮಾರು ವಲಯ ಸಮಿತಿ ಅಧ್ಯಕ್ಷ ಸ್ಯಾಮ್ಸನ್ ನೊರೊನ್ಹಾ ಕರೆ ನೀಡಿದರು. ಕೃಷಿಕ ಸಂಘವು ಪಡುಬೆಳ್ಳೆ ಭಟ್ಟ ಸಾಲು ಪಾವ್ಲಿನ್ ಆಳ್ವರ ಮನೆ ವಠಾರದಲ್ಲಿ ನಡೆದ ವೈಜ್ಞಾನಿಕ ಮಲ್ಲಿಗೆ ಮತ್ತು ಭತ್ತ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಗತಿಪರ ಕೃಷಿಕ ಪಾವ್ಲಿನ್ ಆಳ್ವ ಈ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಖಂಡ ಬೆಳ್ಳೆ ಸದಾನಂದ ಶೆಣೈ, ಪ್ರಗತಿಪರ ಕೃಷಿಕ ಎಚ್. ಕೆ. ಉಪಾಧ್ಯಾಯ, ಬಂಟಕಲ್ಲುಬಿ.ಸಿ. ರೋಡ್ ಲಯನ್ಸ್ ಕ್ಲಬ್ ಅಧ್ಯಕ್ಷ ಟೋನಿ ಮೋನಿಸ್, ಕ್ಯಾಥೋಲಿಕ್ ಸಭಾ ಅಧ್ಯಕ್ಷೆ ಗ್ರೇಸಿ ಕಾರ್ಡೋಜಾ ಪಾಂಬೂರು ಭಾಗವಹಿಸಿದರು.ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶರ್ಮ ಬಂಟಕಲ್ಲು ಕಡಿಮೆ ಖರ್ಚಿನಲ್ಲಿ ಮಲ್ಲಿಗೆ ಬೆಳೆ ಮತ್ತು ಪ್ರಗತಿಪರ ಕೃಷಿಕ ಶ್ರೀ ನಿತ್ಯಾನಂದ ನಾಯಕ್ ಪಾಲಮೆ ಭತ್ತ ಬೆಳೆಯುವ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರೇಸಿ ಕಾರ್ಡೋಜಾ ಮತ್ತು ಹೆಲೆನ್ ಪ್ರಾರ್ಥಿಸಿದರು. ಎವರೆಸ್ಟ್ ಆಳ್ವ ವಂದಿಸಿದರು. ರಮೇಶ್ ಚಂದ್ರ ನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.