ಸಾರಾಂಶ
ಮನುಷ್ಯನಲ್ಲಿ ಹಣ ಮತ್ತು ಎಲ್ಲಾ ರೀತಿಯ ಸೌಲಭ್ಯ ಇದ್ದ ಮಾತ್ರಕ್ಕೆ ದೇವಾಲಯ ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ದೇವಿಯ ಅನುಗ್ರಹ ಕೂಡ ಬೇಕಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪೂರ್ವಜರು ಕಾಪಾಡಿಕೊಂಡು ಬಂದಂತಹ ಸಂಪ್ರದಾಯ, ಆಚಾರ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಮುಂದುವರೆಸಬೇಕಿದೆ. ಇಲ್ಲವಾದರೆ ಮನುಕುಲ ಅಂತ್ಯ ಕಟ್ಟಿಟ್ಟಬುತ್ತಿ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಕರಿದುಗ್ಗನಹಳ್ಳಿ ಮತ್ತು ಹನುಮಂತಯ್ಯನಪಾಳ್ಯದ ಗ್ರಾಮದೇವತೆ ಶ್ರೀದೊಡ್ಡಮ್ಮದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವ ಹಾಗೂ ಶ್ರೀಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಕ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.ಮನುಷ್ಯನಲ್ಲಿ ಹಣ ಮತ್ತು ಎಲ್ಲಾ ರೀತಿಯ ಸೌಲಭ್ಯ ಇದ್ದ ಮಾತ್ರಕ್ಕೆ ದೇವಾಲಯ ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ದೇವಿಯ ಅನುಗ್ರಹ ಕೂಡ ಬೇಕಿದೆ. ನನ್ನ ತಾಯಿ ಕಲಿಸಿದ ಸಂಸ್ಕೃತಿ, ಸಂಪ್ರಾದಾಯದಿಂದ ಇಂದು ಉನ್ನತ ಸ್ಥಾನದಲ್ಲಿದ್ದೇನೆ. ಉದ್ಯಮಿ ನಿಲೇಶ್ ಮತ್ತು ಶಶಿಧರ್ ದುಬೈನಲ್ಲಿದ್ದರೂ ಉದ್ಯಮದ ಜೊತೆಗೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಾ ಸಂಸ್ಕೃತಿ, ಆಚರಣೆಯನ್ನು ಮರೆಯದಿರುವುದು ಖುಷಿಯ ವಿಚಾರ ಎಂದು ಶ್ಲಾಘೀಸಿದರು.ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮಾತನಾಡಿ, ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ, ರಾಜಕೀಯ ಹೊರತುಪಡಿಸಿದರೆ ನಾನು ಮತ್ತೆ ಗೃಹ ಸಚಿವರು ಸಹೋದರರಿದ್ದಂತೆ ಎಂದರು.ಕಾರದೇಶ್ವರ ಮಠದ ವೀರ ಬಸವಲಿಂಗ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಡಾ.ಹನುಮಂತನಾಥ ಸ್ವಾಮೀಜಿ, ನರಸೀಪುರ ವಿರಕ್ತಮಠದ ಶ್ರೀಗೌರಿಶಂಕರ ಸ್ವಾಮೀಜಿ, ಅಟವಿ ಮಠದ ಚೆನ್ನಬಸವೇಶ್ವರ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಕುಣಿಗಲ್ ಹರಿಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ 3 ದಿನದ ಧಾರ್ಮಿಕ ಪೂಜಾ ಕಾರ್ಯಕ್ರಮ ಯಶಸ್ವಿ ಕಂಡಿತು.ಶನಿವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ದೇವಾಲಯಗಳಿಗೆ ವಿಶೇಷ ಸ್ಥಾನವಿದೆ. ಆದ್ದರಿಂದ ನಮ್ಮಲ್ಲಿ ಇಡೀ ವಿಶ್ವದಲ್ಲಿಯೇ ಹೆಚ್ಚು ದೇವಾಲಯ ಇದೆ. ನಿತ್ಯವೂ ನಾವು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ದೇವಾಲಯಗಳಿಗೆ ಬರಬೇಕಿದೆ. ನಾವು ದೇವರನ್ನು ಪೂಜಿಸುವಂತೆ ನಮ್ಮ ಹೆತ್ತ ತಾಯಿಯನ್ನು ಆರಾಧಿಸಬೇಕು ಎಂದರು.ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಲೌಕಿಕ ಮತ್ತು ಆಧ್ಯಾತ್ಮಿಕ ಎರಡನ್ನು ನಮ್ಮ ಬದುಕಿನಲ್ಲಿ ನಾವು ಅನುಸರಿಸಬೇಕಿದೆ. ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು ಚಂಚಲವಾಗಲು ಬಿಡಬಾರದು, ಭಗವಂತನ ಸೇವೆಯನ್ನು ಎಲ್ಲರೂ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಿದೆ ಎಂದರು.ತುಮಕೂರಿನ ವಿದ್ಯೋದಯ ಕಾಲೇಜಿನ ಕಾರ್ಯದರ್ಶಿ ಪ್ರದೀಪ್, ಉದ್ಯಮಿ ಶಶಿಧರ್, ಶಿಕ್ಷಕ ಹರೀಶ್,ವಿಜಯ್, ಗ್ರಾಮದ ಹಿರಿಯ ಮುಖಂಡ ಹನುಮಂತರಾಯಪ್ಪ ಸೇರಿದಂತೆ ಗ್ರಾಮದ ಗೌಡರು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಜರಿದ್ದರು.ಕ್ಯಾಪ್ಶನ್.....ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಗೌರವಿಸಲಾಯಿತು.ಕ್ಯಾಪ್ಶನ್...2ಹನುಮಂತಯ್ಯನಪಾಳ್ಯಕ್ಕೆ ಭೇಟಿ ನೀಡಿದ ಸುತ್ತೂರು ಹಾಗೂ ಸಿದ್ಧಗಂಗಾ ಶ್ರೀಗಳಿಗೆ ಭಕ್ತಿ ಸಮರ್ಪಣೆ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))