ಸಂವಿಧಾನ 73ನೇ ತಿದ್ದುಪಡಿಯಿಂದ ಪಂಚಾಯತ್‌ ರಾಜ್ಯ ವ್ಯವಸ್ಥೆಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಯುವಕರು ಸಂಘಟಿತರಾಗಿ ಗ್ರಾಮ ಸಭೆ ವಾರ್ಡ್‌ ಸಭೆಯಲ್ಲಿ ಭಾಗವಹಿಸಿ ಗ್ರಾಮೀಣ ಸಮಸ್ಯೆಗಳಾದ ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ, ಚರಂಡಿ, ರಸ್ತೆಗಳ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿ. ಅನಿತಾ ಡಿಸೋಜಾ ತಿಳಿಸಿದರು.

ಹಾನಗಲ್ಲ:ಸಂವಿಧಾನ 73ನೇ ತಿದ್ದುಪಡಿಯಿಂದ ಪಂಚಾಯತ್‌ ರಾಜ್ಯ ವ್ಯವಸ್ಥೆಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಯುವಕರು ಸಂಘಟಿತರಾಗಿ ಗ್ರಾಮ ಸಭೆ ವಾರ್ಡ್‌ ಸಭೆಯಲ್ಲಿ ಭಾಗವಹಿಸಿ ಗ್ರಾಮೀಣ ಸಮಸ್ಯೆಗಳಾದ ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ, ಚರಂಡಿ, ರಸ್ತೆಗಳ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿ. ಅನಿತಾ ಡಿಸೋಜಾ ತಿಳಿಸಿದರು. ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಬೆಂಗಳೂರಿನ ಇಂಡಿಯನ್ ಅಸೋಸಿಯಶೀಯಲ್ ಇನ್ಸಿಟಿಟ್ಯೂಟ್ ಹಾನಗಲ್ಲಿನ ಯಂಗ್ ವಿಜನ್ ರೋಶನಿ ಸಮಾಜ ಸೇವಾ ಸಂಸ್ಥೆ, ಲೊಯೋಲಾ ವಿಕಾಸ ಕೇಂದ್ರ, ಬೇಲಗಾಲಪೇಟೆ ಅಕ್ಕ ಮಹಾದೇವಿ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ ಮೂರು ದಿನದ ಯುವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿ ಅವಧಿಯಲ್ಲಿ ಒಂದು ದಿನ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆ ಅಧ್ಯಯನ ಮಾಡಿ ಯುವಕರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಲು ತರಬೇತಿ ನೀಡಬೇಕು. ಇಂದಿನ ಯುವಕರನ್ನು ಸಮಾಜದ ಹಿತಕ್ಕಾಗಿ ಒಡ್ಡಿಕೊಳ್ಳುವ ತರಬೇತಿ ತೀರ ಅಗತ್ಯವಿದೆ. ದೇಶಧ ಹಿತಕ್ಕಾಗಿ ದುಡಿಯುವ ಮನಸ್ಸು ಯುವಕರದ್ದಾಗಬೇಕು ಎಂದರು.ಯಂಗ್ ವಿಜನ್ ಸಂಸ್ಥೆ ಮುಖ್ಯಸ್ಥ ಪೈರೋಜಅಹಮ್ಮದ ಶಿರಬಡಗಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮೀಸಲಾತಿ, ಅಧಿಕಾರ ವಿಕೇಂದ್ರೀಕರಣ, ಸರ್ಕಾರದ ಎಸ್ ಸಿ ಎಸ್ ಟಿ ಯೋಜನೆಗಳ ಸೌಲಭ್ಯ, ಸಂಘಟನೆ ಮಹತ್ವ, ಸರ್ಕಾರದ ಹೊಸ ಹೊಸ ಯೋಜನೆಗಳ ಕುರಿತು ಯುವಕರಿಗೆ ತರಬೇತಿ ನೀಡುವ ಅಗತ್ಯವಿದೆ. ಯುವಕರು ಆಸಕ್ತಿಯಿಂದ ಭಾಗವಹಿಸಿ ತಮ್ಮ ಸಾಮರ್ಥ್ಯ ಬಲವರ್ಧನೆ ಮಾಡಿಕೊಳ್ಳಲು ಉತ್ತಮ ಅವಕಾಶ ಇದಾಗಿದೆ ಎಂದರು.ಕಾರ್ಯಗಾರದಲ್ಲಿ ಲೊಯೋಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಜೆಸನ್ ಪೈಸ್. ಯುವ ಸಂಗಮದ ಸಂಜನಾ ಭಸವಂತಕರ, ನಾಗರಾಜ ಅಕ್ಕಿವಳ್ಳಿ, ಸಂಪನ್ಮೂಲ ವ್ಯಕ್ತಿಗಳಾದ ಜನವೇದಿಕೆ ಮುಖಂಡ ಮಂಜುನಾಥ ಕುದರಿ, ವಸಂತ್‌ಕುಮಾರ, ಮಂಜುನಾಥ ಗೌಳಿ ವೇದಿಕೆಯಲ್ಲಿದ್ದರು. ಪಕ್ಕಿರೇಶ ಗೌಡಳ್ಳಿ ಸ್ವಾಗತಿಸಿದರು. ಕಾಂತೇಶ ಬಾಳೂರ ನಿರೂಪಿಸಿದರು. ದೀಪಾ ಚವಡಿ ವಂದಿಸಿದರು.