ಸಾರಾಂಶ
ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗಾಗಿಗದ್ದು ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು. ಇತ್ತೀಚೆಗೆ ಯುವಕರು ಇಂತಹ ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದು ಯುವಕರ ಜೀವನವೇ ಶೂನ್ಯವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಮಾದಕ ದ್ರವ್ಯ ಸೇವನೆ ನಮ್ಮ ದೇಶದ ಅತೀ ದೊಡ್ಡ ಪಿಡುಗಾಗಿಗದ್ದು ಈ ಪಿಡುಗನ್ನು ತಳ ಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು. ಇತ್ತೀಚೆಗೆ ಯುವಕರು ಇಂತಹ ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದು ಯುವಕರ ಜೀವನವೇ ಶೂನ್ಯವಾಗುತ್ತಿದೆ. ಶಾಲಾ, ಕಾಲೇಜುಗಳ ಸುತ್ತಲು ಗಾಂಜಾ ಮಾರಾಟ ಮತ್ತು ಸೇವನೆಯನ್ನು ಯುವಜನರು ಬಹಿಷ್ಕರಿಸಬೇಕು ಎಂದು ಶಹಬಾದ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಹೇಳಿದರು.ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಪೊಲೀಸ್ ಇಲಾಖೆ ಸಹಯೊಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತು ಹಾಗೂ ಕಳ್ಳ ಸಾಗಣಿ ದಿನಾಚರಣೆ ನಿಮಿತ್ತ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮದ್ಯಪಾನ ವ್ಯವಸ್ಥೆ ಇಡೀ ಸಮಾಜವನ್ನೆ ಹಾಳು ಮಾಡುತ್ತಿದೆ. ಮದ್ಯಪಾನ, ಮಾದಕ ದ್ರವ್ಯ ಸೇವನೆ ಮುಂತಾದವುಗಳು ನಮ್ಮ ಸಮಾಜದ ಕೆಟ್ಟ ವ್ಯವಸ್ಥೆಯಾಗಿದೆ. ಯುವಜನರು ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ ಮಕ್ಕಳು ಮಾದಕ ದ್ರವ್ಯ ಸೇವನೆಯಿಂದ ದೂರ ಇರುವಂತೆ ಕಾಳಜಿ ವಹಿಸಬೇಕು ಎಂದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ದುಷ್ಪರಿಣಾಮ ಹಾಗೂ ಅವರಿಂದ ಆಗುವ ಅನಾಹುತ ಮತ್ತು ಕಾನೂನಿನ ಅಡಿಯಲ್ಲಿ ಇರುವ ಶಿಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಪ್ರಾಚಾರ್ಯ ಶರಣಬಸಪ್ಪ ಬೀರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಎಸ್‌ಐ ಶ್ರೀಶೈಲ ಅಂಬಾಟಿ, ಕ್ರೈಂ ಪಿಎಸ್‌ಐ ಚಂದ್ರಾಮಪ್ಪ ವೇದಿಕೆಯಲ್ಲಿದ್ದರು. ಸಮಾರಂಭದ ನಂತರ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರ ಇರುವಂತೆ ಪ್ರತಿಜ್ಞಾ ವಿಧಿ ಬೊದಿಸಿದರು.