ಪೊಲೀಸರ ಹಲ್ಲೆಗೆ ಯುವಕ ಅಸ್ವಸ್ಥ: ಟೈರ್‌ ಸುಟ್ಟು ಪ್ರತಿಭಟನೆ

| Published : Aug 02 2024, 12:58 AM IST

ಸಾರಾಂಶ

ವಿಜಯಪುರ: ಸಹೋದರರಿಬ್ಬರು ದಾಯಾದಿ ಕಲಹದ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದರಿಂದ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಆರೋಪಿಸಿ ಯುವಕನ ಕುಟುಂಬಸ್ಥರು ಹಾಗೂ ಸ್ಥಳೀಯರು ಸೇರಿ ಟೈರ್‌ಗೆ ಬೆಂಕಿ ಹಚ್ಚಿ, ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿರುವ ಘಟನೆ ನಗರದ ಕೊಂಚಿಕೊರವರ ಓಣಿಯಲ್ಲಿ ಗುರುವಾರ ಸಂಜೆ ನಡೆದಿದೆ.

ವೈಯಕ್ತಿಕ ವಿಚಾರಕ್ಕಾಗಿ ಸಹೋದರಿಬ್ಬರು ಜಗಳವಾಡುತ್ತಿದ್ದಾಗ ಪೊಲೀಸ್ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಸಂತೋಷ ಗುಣಕಿ ಎಂಬಾತ ಅಸ್ವಸ್ಥನಾಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಯುವಕ ಅಸ್ವಸ್ಥನಾಗುತ್ತಿದ್ದಂತೆ ದಿಢೀರನೆ ರಸ್ತೆಗಿಳಿದ ಓಣಿಯ ನಿವಾಸಿಗಳು ರೊಚ್ಚಿಗೆದ್ದು, ಸ್ಟೇಷನ್ ರಸ್ತೆ ಬಂದ್ ಮಾಡಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣರಾಗಿದ್ದಾರೆ ಎನ್ನಲಾದ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಗಾಯಾಳು ಕುಟುಂಬಸ್ಥರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.---------