ದಶಕಗಳಿಂದಲೂ ಆಡಳಿತರೂಢ ಪಕ್ಷಗಳು ಬಡವರ ಬಗ್ಗೆ ಕರುಣೆ ತೋರಿಸಿ ನಾಟಕವನ್ನು ಮಾಡುತ್ತಾ ತಮ್ಮ ಖಜಾನೆಗಳನ್ನು ಹಲವು ತಲೆಮಾರುಗಳಿಗೆ ಆಗುವಷ್ಟು ತುಂಬಿಸಿಕೊಂಡಿರಹುದು.
ಶ್ರೀನಿವಾಸಪುರ: ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ವ್ಯವಸ್ಥೆ ನಿರ್ಮಾಣವಾಗಲು ಯುವಜನತೆ ತಳಮಟ್ಟದಲ್ಲಿ ಸಂಘಟಿತರಾಗಬೇಕು. ಶಿಕ್ಷಣದೊಂದಿಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಇಂದಿರಾ ರೆಡ್ಡಿ ತಿಳಿಸಿದರು.ಇಲ್ಲಿನ ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕೆಆರ್‌ಎಸ್ ಯುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ದಶಕಗಳಿಂದಲೂ ಆಡಳಿತರೂಢ ಪಕ್ಷಗಳು ಬಡವರ ಬಗ್ಗೆ ಕರುಣೆ ತೋರಿಸಿ ನಾಟಕವನ್ನು ಮಾಡುತ್ತಾ ತಮ್ಮ ಖಜಾನೆಗಳನ್ನು ಹಲವು ತಲೆಮಾರುಗಳಿಗೆ ಆಗುವಷ್ಟು ತುಂಬಿಸಿಕೊಂಡಿರಹುದು. ನಮಗೆ ಗೊತ್ತಿರುವ ವಿಷಯವೇ ಸರಿ. ಆದರಿಂದ ಭ್ರಷ್ಟಾಚಾರವನ್ನು ತೊಡೆದು ಕೊನೆಗಾಣಿಸುವುದು ನಮ್ಮ ಪಕ್ಷದ ಮುಖ್ಯ ಗುರಿಯಾಗಿದೆ ಹೇಳಿದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.ಸಮಾವೇಶದಲ್ಲಿ ಯುವ ಕಾರ್ಯಕರ್ತರು ಕೆಆರ್‌ಎಸ್ ಪಕ್ಷದ ಧ್ವಜ ಹಿಡಿದು ಸಂಘಟನೆಯ ಬಲವರ್ಧನೆಗೆ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಸನ್ಮಾನಿತ ವಿದ್ಯಾರ್ಥಿಗಳ ಪೋಷಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.