ಸಾರಾಂಶ
-ದೇಶ ಸೇವೆಗೆ ನೂತನವಾಗಿ ಆಯ್ಕೆಗೊಂಡ ಸೈನಿಕರಿಗೆ ಸನ್ಮಾನ
-----ಕನ್ನಡಪ್ರಭ ವಾರ್ತೆ ಹುಣಸಗಿ
ಅಗತೀರ್ಥ ಗ್ರಾಮದ ರೇವಣಸಿದ್ಧೇಶ್ವರ ಮಠದಲ್ಲಿ ದೇಶ ಸೇವೆಗೆ ನೂತನವಾಗಿ ಆಯ್ಕೆಯಾದ ವಿವಿಧ ಗ್ರಾಮಗಳ ಯುವ ಸೈನಿಕರಿಗೆ ಕರ್ನಾಟಕದ ಪ್ರದೇಶ ಕುರುಬ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿ ಮಾತನಾಡಿ, ಸೈನಿಕ ನೇಮಕಾತಿಯಲ್ಲಿ ಆಯ್ಕೆಗೊಂಡು ದೇಶ ಸೇವೆಯಲ್ಲಿ ಕರ್ತವ್ಯಗೆ ನಿರತರಾದ ನಮ್ಮ ಭಾಗದ ಯುವಕರು ಇತರರಿಗೂ ಸ್ಫೂರ್ತಿ ಅಲ್ಲದೆ ಹೆಮ್ಮಯ ವಿಷಯ ಎಂದರು.
ದೇಶ ರಕ್ಷಣೆಯಲ್ಲಿರುವ ಯೋಧರನ್ನು ನಾವು ಗೌರವಿಸಬೇಕು. ವೀರಯೋಧರಿಂದಲೇ ನಮ್ಮ ಭಾರತ ದೇಶವು ಸುಭದ್ರವಾಗಿದೆ. ಹೀಗಾಗಿ ರೈತ ಮತ್ತು ಯೋಧರು ಈ ದೇಶದ ಎರಡು ಕಣ್ಣುಗಳಿದಂತೆ ಎಂದು ತಿಳಿಸಿದರು.ಸೈನಿಕರಾದ ಮಲ್ಲಿಕಾರ್ಜುನ ಸಂಜೀವಪ್ಪ ಹುಡೇದ್, ಪರಶುರಾಮ ನಾಗೂರ, ಬಸವರಾಜ ಮಾನಬಾವಿ, ಬಸವರಾಜ ಯಕ್ತಾಪೂರ, ನಾಗರಾಜ ಪೂಜಾರಿ, ಬಸವರಾಜ ಕಕ್ಕೇರಾ ಅವರನ್ನು ಸನ್ಮಾನಿಸಲಾಯಿತು. ಅರ್ಚಕ ಕೆಂಚರಾಯ ಪೂಜಾರಿ ಸಾನಿಧ್ಯ ವಹಿಸಿದ್ದರು. ಪರಶುರಾಮ ಚೌದ್ರಿ ಅಧ್ಯಕ್ಷತೆ ವಹಿಸಿದ್ದರು. ಶಿವಣ್ಣ ಪೂಜಾರಿ ಬೈಲಕುಂಟಿ, ಮಾಳಿಂಗರಾಯ ಮೌರ್ಯ, ಪರಮಣ್ಣ ನಿಲಗಲ್, ಕಾಳಪ್ಪ ಕವಾತಿ, ಪುರಸಭೆ ಸದಸ್ಯ ಮಲ್ಲು ದಂಡಿನ್, ರವಿಚಂದ್ರ ಸಾಹುಕಾರ, ಮಹಿಳಾ ಘಟಕದ ಅಧ್ಯಕ್ಷೆ ರಾಧಿಕಾ ಸಿ. ಬಿರಾದಾರ್, ಹಣಮಂತ್ರಾಯ ಕಮಲಾಪೂರ, ಬಿ.ಹೊರಟ್ಟಿ ಸೇರಿದಂತೆ ಸಮಾಜದವರಿದ್ದರು.
-14ವೈಡಿಆರ್12 : ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ದೇಶ ಸೇವೆಗೆ ನೂತನವಾಗಿ ಆಯ್ಕೆಗೊಂಡ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.