ಸಾರಾಂಶ
ಕಡೂರು : ಕಡೂರು ಕ್ಷೇತ್ರದ ಮರವಂಜಿ ಗ್ರಾಪಂ ಸದಸ್ಯರು ಹಾಗೂ ಕೆಲವು ಗ್ರಾಮಸ್ಥರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಮರವಂಜಿ ಗ್ರಾಪಂ ಸದಸ್ಯೆ ಮಂಜುಳಾ ಮೈಲಾರಪ್ಪ, ಜಯಣ್ಣ, ಜೆಸಿಬಿ ಓಬಳೇಶ್, ಮನು, ಮಂಜು, ಮುರಳಪ್ಪ, ತಮ್ಮಯ್ಯ, ಲಿಂಗಪ್ಪ, ರಾಮಪ್ಪ, ರಫಿ, ವಿಜಯಕುಮಾರ್, ಬಸವರಾಜು ಸೇರಿದಂತೆ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರುಗಳು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡರಾದ ಚೇತನ್ ಕೆಂಪ್ರಾಜ್ ತಿಳಿಸಿದರು.
ಕ್ಷೇತ್ರದ ಉಪ್ಪನಹಳ್ಳಿ ತಾಂಡ್ಯದ ಗ್ರಾಪಂ ಸದಸ್ಯ ಗಿರೀಶ್ ನಾಯಕ್, ಅಶೋಕ್ ಕುಮಾರ್ ನಾಯ್ಕ್, ರಾಮ ನಾಯಕ್, ಗೋಪಿ ನಾಯಕ್, ಮುರುಳ ನಾಯಕ್, ಸೇರ್ಪಡೆಗೊಂಡಿದ್ದಾರೆ.
ಮರವಂಜಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಶಿವಣ್ಣ, ಶಾಂತಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ತಲಾ ಏಳು ಮತ ಗಳು ಕಾಂಗ್ರೆಸ್ ಅಭ್ಯರ್ಥಿಗೆ 6 ಮತಗಳು ಲಭಿಸಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಭಿನಂದಿಸಿದ್ದಾರೆ ಎಂದರು
ಕಡೂರು ಕ್ಷೇತ್ರದಲ್ಲಿ ವೈ.ಎಸ್.ವಿ. ದತ್ತಾ ನಾಯಕತ್ವದಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್‌ಗೆ ತನ್ನದೇ ಆದ ಇತಿಹಾಸವಿದೆ. ವಿಧಾನಸಭಾ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದ ದಿವಂಗತ ಕೆ.ಎಂ. ಕೃಷ್ಣಮೂರ್ತಿ, ಮೂರು ಬಾರಿ ಜೆಡಿಎಸ್ ಪಕ್ಷದಿಂದ ವಿಜಯ ಸಾಧಿಸಿದ್ದರು.
ದತ್ತಾ ಅವರು ಅತಿ ಹೆಚ್ಚಿನ ಮತಗಳಿಂದ ವಿಧಾನಸಭೆಗೆ ಆಯ್ಕೆಗೊಂಡಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನವರಿಗೂ ಕಡೂರು ಕ್ಷೇತ್ರ ಹೆಚ್ಚಿನ ಮತಗಳನ್ನು ನೀಡಿದಿದ್ದು ಈಗಲೂ ಸಹ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ ಎಂದರು ಈ ಸಂದರ್ಭದಲ್ಲಿ ಹೋಚಿಹಳ್ಳಿ ದೇವರಾಜು ಶೇಖರ್ರಪ್ಪ, ಸುರೇಶ್, ದಿನೇಶ, ಉಮಾಶಂಕರ್, ರವಿ ಮತ್ತಿತರ ಇದ್ದರು.