ಕನ್ನಡಪ್ರಭ ವಾರ್ತೆ ಬಾಗಲಕೋಟೆಯುವತಿಯನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಧರ್ಮದೇಟು ನೀಡಿದ ಇಬ್ಬರು ಯುವಕರನ್ನೇ ನವನಗರ ಠಾಣೆ ಪೊಲೀಸರು ಬಂಧಿಸಿದ ಆರೋಪ ಕೇಳಿ ಬಂದಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯುವತಿಯನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಧರ್ಮದೇಟು ನೀಡಿದ ಇಬ್ಬರು ಯುವಕರನ್ನೇ ನವನಗರ ಠಾಣೆ ಪೊಲೀಸರು ಬಂಧಿಸಿದ ಆರೋಪ ಕೇಳಿ ಬಂದಿದೆ.ನವನಗರದ 51ನೇ ಸೆಕ್ಟರ್ ನಲ್ಲಿ ಯುವತಿಯನ್ನು ಚುಡಾಯಿಸುತ್ತಿದ್ದ ಯುವಕನಿಗೆ ಇಬ್ಬರು ಯುವಕರು ಧರ್ಮದೇಟು ನೀಡಿದ್ದರು. ಯುವತಿಯೂ ಆತನಿಗೆ ಚಪ್ಪಲಿ ಏಟು ನೀಡಿದ್ದಳು. ಒದೆ ತಿಂದು ಕ್ಷಮೆ ಕೇಳಿದ್ದ ಯುವಕ ನಂತರ ನವನಗರ ಠಾಣೆಗೆ ಆಗಮಿಸಿ ಹಲ್ಲೆ ನಡೆಸಿದ ಇಬ್ಬರು ಯುವಕರ ವಿರುದ್ಧವೇ ಪ್ರಕರಣ ದಾಖಲಿಸಿದ್ದ. ತಕ್ಷಣ ಪೊಲೀಸರು ಯುವಕರಾದ ಚೇತನ್ ಹಾಗೂ ರೋಷನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಪೂರ್ವಾಪರ ವಿಚಾರಿಸದೇ ನಮ್ಮ ಮಕ್ಕಳನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಚುಡಾಯಿಸುವುದನ್ನು ನೋಡಿಕೊಂಡು ಸುಮ್ಮನಿರಬೇಕಿತ್ತೆ. ಆಕೆಯನ್ನು ರಕ್ಷಿಸಿದ ತಪ್ಪಿಗೆ ನಮ್ಮ ಮಕ್ಕಳು ಜೈಲಿಗೆ ಹೋಗುವುದಾದರೆ ಇದೆಂಥ ವ್ಯವಸ್ಥೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚುಡಾಯಿಸಿದ ಯುವಕನನ್ನು ಸುದೀಪ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಿಟ್ಟು ಕಳುಹಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಠಾಣೆಯಲ್ಲಿ ಪ್ರತಿದೂರು ಸಹ ದಾಖಲಾಗಿದೆ ಎನ್ನಲಾಗಿದೆ.