ಯುಗಾದಿ ಗಿಫ್ಟ್‌ । ಇಂದೇ ಮಸೂದೆ : ಮಂತ್ರಿ, ಶಾಸಕರಿಗೆ ಭರ್ಜರಿ ವೇತನ ಏರಿಕೆ ಭಾಗ್ಯ!

| N/A | Published : Mar 21 2025, 01:31 AM IST / Updated: Mar 21 2025, 04:58 AM IST

ಯುಗಾದಿ ಗಿಫ್ಟ್‌ । ಇಂದೇ ಮಸೂದೆ : ಮಂತ್ರಿ, ಶಾಸಕರಿಗೆ ಭರ್ಜರಿ ವೇತನ ಏರಿಕೆ ಭಾಗ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಆರ್ಥಿಕ ಸಂಕಟ ಎದುರಿಸುತ್ತಿದ್ದರೂ ಸಿಎಂ, ಸಚಿವರು, ವಿಧಾನಮಂಡಲ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರ ಈಗಿರುವ ವೇತನವನ್ನು ದುಪ್ಪಟ್ಟುಗೊಳಿಸುವ ‘ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025’ಕ್ಕೆ ರಾಜ್ಯಪಾಲರು ಒಪ್ಪಿಗೆ 

 ಬೆಂಗಳೂರು :  ರಾಜ್ಯ ಆರ್ಥಿಕ ಸಂಕಟ ಎದುರಿಸುತ್ತಿದ್ದರೂ ಸಿಎಂ, ಸಚಿವರು, ವಿಧಾನಮಂಡಲ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರ ಈಗಿರುವ ವೇತನವನ್ನು ದುಪ್ಪಟ್ಟುಗೊಳಿಸುವ ‘ಕರ್ನಾಟಕ ಶಾಸಕಾಂಗದ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025’ಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಆ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ವಿಧೇಯಕ ಮಂಡಿಸಲಿದೆ.

ಕಲಾಪ ವ್ಯವಹಾರಗಳ ಸಲಹಾ ಸಮಿತಿ (ಬಿಎಸಿ)ಯ ನಿರ್ಣಯದಂತೆ ಮುಖ್ಯಮಂತ್ರಿ, ಸಚಿವ, ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಕರ್ನಾಟಕ ಶಾಸಕಾಂಗ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ವಿಧೇಯಕ-2025ಕ್ಕೆ ರಾಜ್ಯಪಾಲರ ಅನುಮೋದನೆ ಪಡೆಯಲು ಸರ್ಕಾರ ಯಶಸ್ವಿಯಾಗಿದೆ. ಆರ್ಥಿಕ ವಿಚಾರದ ವಿಧೇಯಕವಾದ ಕಾರಣ ಸರ್ಕಾರ ತಿದ್ದುಪಡಿ ವಿಧೇಯಕವನ್ನು ಬುಧವಾರ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿತ್ತು. ಗುರುವಾರ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಶುಕ್ರವಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸರ್ಕಾರ ಮಂಡಿಸಲಿದೆ. ಅಲ್ಲದೆ, ಶುಕ್ರವಾರವೇ ಅಧಿವೇಶನದ ಕೊನೆಯ ದಿನವಾದ ಕಾರಣ, ವಿಧೇಯಕ ಮಂಡನೆಯೊಂದಿಗೆ ಅನುಮೋದನೆಯನ್ನೂ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

40ರಿಂದ 80 ಸಾವಿರಕ್ಕೇರಿಕೆ:

ಹೊಸ ತಿದ್ದುಪಡಿಯಿಂದಾಗಿ ಶಾಸಕರ ವೇತನ 40 ಸಾವಿರ ರು.ನಿಂದ 80 ಸಾವಿರಕ್ಕೆ ಹೆಚ್ಚಳವಾಗಲಿದೆ. ಅದರ ಜತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್‌ ಸಭಾಪತಿ ವೇತನ 75 ಸಾವಿರ ರು.ನಿಂದ 1.25 ಲಕ್ಷ ರು, ಮುಖ್ಯಮಂತ್ರಿ ವೇತನ 75 ಸಾವಿರ ರು.ನಿಂದ 1.50 ಲಕ್ಷ ರು, ಸಚಿವರ ವೇತನ 60 ಸಾವಿರ ರು.ನಿಂದ 1.25 ಲಕ್ಷ ರು.ವರೆಗೆ ಹೆಚ್ಚಳವಾಗಲಿದೆ. ಈ ಕ್ರಮದಿಂದಾಗಿ ಸರ್ಕಾರಕ್ಕೆ 62 ಕೋಟಿ ರು. ಹೆಚ್ಚುವರಿ ಹೊರೆ ಅಂದಾಜಿಸಲಾಗಿದೆ.

2022ರಲ್ಲಿ ಬಿಜೆಪಿ ಸರ್ಕಾರ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಿತ್ತು. ಆಗ ಮಂಡಿಸಲಾಗಿದ್ದ ತಿದ್ದುಪಡಿ ವಿಧೇಯಕದಲ್ಲಿ ಬೆಲೆ ಸೂಚ್ಯಂಕ ಆಧಾರದಲ್ಲಿ 2023ರ ಏ.1ರಿಂದ 5 ವರ್ಷಕ್ಕೊಮ್ಮೆ ವೇತನ ಹೆಚ್ಚಿಸುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಕಲಾಪ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಶಾಸಕರ ವೇತನ ಕುರಿತು ಚರ್ಚೆ ನಡೆದು, ನಿರ್ಣಯಿಸಲಾಗಿತ್ತು. ಹೀಗಾಗಿ 2 ವರ್ಷ ಪೂರ್ಣಗೊಳ್ಳುವುದಕ್ಕೂ ಮುನ್ನ ಶಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 

ವೇತನ, ಭತ್ಯೆ ಹೆಚ್ಚಳದ ವಿವರ: (ಮಾಸಿಕ ವಿವರ)

ಪ್ರಸ್ತುತ ಪರಿಷ್ಕೃತ

ಸಭಾಧ್ಯಕ್ಷ, ಸಭಾಪತಿ ವೇತನ75 ಸಾವಿರ ರು.1.25 ಲಕ್ಷ ರು.

ಸಭಾಧ್ಯಕ್ಷ, ಸಭಾಪತಿ ಆತಿಥ್ಯ ಭತ್ಯೆ4 ಲಕ್ಷ ರು.5 ಲಕ್ಷ ರು.

ಸಭಾಧ್ಯಕ್ಷ, ಸಭಾಪತಿಯಿಂದ ಮುಖ್ಯ ಸಚೇತರವರೆಗೆಮನೆಭತ್ಯೆ1.60 ಲಕ್ಷ ರು.ನಿಂದ 2.50 ಲಕ್ಷ ರು.

ಉಪಸಭಾಧ್ಯಕ್ಷ, ಉಪಸಭಾಪತಿ ವೇತನ60 ಸಾವಿರ ರು.80 ಸಾವಿರ ರು.

ಉಪಸಭಾಧ್ಯಕ್ಷ, ಉಪಸಭಾಪತಿ ಆತಿಥ್ಯ ಭತ್ಯೆ2.50 ಲಕ್ಷ ರು.3 ಲಕ್ಷ ರು.

ಮುಖ್ಯಮಂತ್ರಿ ವೇತನ75 ಸಾವಿರ ರು.1.50 ಲಕ್ಷ ರು.

ಮುಖ್ಯಮಂತ್ರಿ, ಸಚಿವರ ಆತಿಥ್ಯ ಭತ್ಯೆ4.50 ಲಕ್ಷ ರು.5 ಲಕ್ಷ ರು.

ಸಚಿವರ ವೇತನ60 ಸಾವಿರ ರು.1.25 ಲಕ್ಷ ರು.

ಸಚಿವರ ಮನೆ ಬಾಡಿಗೆ ಭತ್ಯೆ1.20 ಲಕ್ಷ ರು.2.50 ಲಕ್ಷ ರು.

ರಾಜ್ಯ ಸಚಿವರ ವೇತನ50 ಸಾವಿರ ರು.70 ಸಾವಿರ ರು.

ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ50 ಸಾವಿರ ರು.75 ಸಾವಿರ ರು.

ವಿಪಕ್ಷ ನಾಯಕ ವೇತನ60 ಸಾವಿರ80 ಸಾವಿರ ರು.

ವಿಪಕ್ಷ ನಾಯಕಆತಿಥ್ಯ ಭತ್ಯೆ2.50 ಲಕ್ಷ ರು.3 ಲಕ್ಷ ರು.

ಮುಖ್ಯಸಚೇತಕರ ವೇತನ50 ಸಾವಿರ ರು.70 ಸಾವಿರ ರು.

ಮುಖ್ಯಸಚೇತಕರ ಆತಿಥ್ಯ ಭತ್ಯೆ2.50 ಲಕ್ಷ ರು.3 ಲಕ್ಷ ರು.

ಶಾಸಕರ ವೇತನ40 ಸಾವಿರ ರು.80 ಸಾವಿರ ರು.

ಶಾಸಕರ ಪಿಂಚಣಿ50 ಸಾವಿರ ರು.75 ಸಾವಿರ ರು.

ಹೆಚ್ಚುವರಿ ಪಿಂಚಣಿ5 ಸಾವಿರ ರು.20 ಸಾವಿರ ರು.

ಮಾಜಿ ಶಾಸಕರ ವೈದ್ಯಕೀಯ ಭತ್ಯೆ5 ಸಾವಿರ ರು.20 ಸಾವಿರ ರು.

ಕ್ಷೇತ್ರ ಪ್ರವಾಸ ಭತ್ಯೆ 60 ಸಾವಿರ ರು.80 ಸಾವಿರ ರು.

ರೈಲು, ವಿಮಾನ ಟಿಕೆಟ್‌ (ವಾರ್ಷಿಕ)2.50 ಲಕ್ಷ ರು.3.50 ಲಕ್ಷ ರು.

- ಆರ್ಥಿಕ ಸಂಕಷ್ಟದ ಮಧ್ಯೆಯೇ ಗೌರ್ನರ್‌ ಅಸ್ತು---ಯಾರಿಗೆ ಎಷ್ಟು ಹೆಚ್ಚಳ? (₹ಗಳಲ್ಲಿ)ಸಿಎಂ1.50 ಲಕ್ಷ100%--ವಿಪಕ್ಷ ನಾಯಕ80 ಸಾವಿರ33%--ಸಚಿವರುವೇತನ1.25 ಲಕ್ಷ108%-ಮನೆ ಬಾಡಿಗೆ2.50 ಲಕ್ಷ100%--ಶಾಸಕರ ವೇತನ80 ಸಾವಿರ100%- ತಿದ್ದುಪಡಿ ವಿಧೇಯಕ ಇಂದೇ ಮಂಡನೆ

- ಆರ್ಥಿಕ ಸಂಕಟ ಇದ್ದರೂ ಹೆಚ್ಚಳಕ್ಕೆ ರೆಡಿ

- ವಿರೋಧ ಇಲ್ಲದೆ ಮಸೂದೆ ಅಂಗೀಕಾರ?

- ಶಾಸಕರ ವೇತನ 40 ಸಾವಿರದಿಂದ 80 ಸಾವಿರಕ್ಕೇರಿಕೆ

- ಸಚಿವರ ವೇತನ 60,000ದಿಂದ 1.25 ಲಕ್ಷ ರು.ಗೆ ಹೆಚ್ಚಳ

ಎಷ್ಟು ಪರಿಷ್ಕೃತ ವೇತನ? (ಮಾಸಿಕ)

ವರ್ಗ ಸಿಎಂ ಸಚಿವರು ಶಾಸಕರುವೇತನ1.50 ಲಕ್ಷ ರು.1.25 ಲಕ್ಷ ರು.80 ಸಾವಿರ ರು.ಆತಿಥ್ಯ ಭತ್ಯೆ5 ಲಕ್ಷ ರು.5 ಲಕ್ಷ ರು.--

ಕ್ಷೇತ್ರ ಪ್ರವಾಸ ಭತ್ಯೆ  80 ಸಾವಿರ ರು.

ಮನೆ ಬಾಡಿಗೆ ಭತ್ಯೆ- 2.50 ಲಕ್ಷ ರು.--

ರೈಲು, ವಿಮಾನ ಟಿಕೆಟ್‌ (ವಾರ್ಷಿಕ --3.50 ಲಕ್ಷ ರು.