ಸಾರಾಂಶ
ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.ರಾಜ್ಯಮಟ್ಟದ ಏರ್ ರೈಫಲ್ ವಿಭಾಗದ ಏರ್ ಪಿಸ್ತೂಲ್ ಓಪನ್ ಸೈಟ್ ಶೂಟಿಂಗ್ ಸ್ಪರ್ಧೆಯಲ್ಲಿ ಯುಕ್ತಚೇತನ ತೃತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಗಗೌತಮ್ ರೈಫಲ್ ಸ್ಪರ್ಧೆಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಮಟ್ಟದ 100 ಮತ್ತು 200 ಮೀ. ಓಟದಲ್ಲಿ ವೈಷ್ಣವಿ ಶಂಕರ್, ಡಿಸ್ಕಸ್ ಥ್ರೋನಲ್ಲಿ ಸಂಜಯ್ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ನಿತಿನ್ ಶೇಖರ್ ಪ್ರಥಮ ಸ್ಥಾನಗಳಿಸುವ ಜೊತೆಗೆ ಯುವ ಸಂಸತ್‌ನಲ್ಲಿ ಧನ್ಯಶ್ರೀ ಎಸ್. ಮತ್ತು ಸಾಹಿತ್ಯ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಕರಾಟೆ ವಿಭಾಗದ ಕುಮಿಟೆ ವಿಭಾಗದಲ್ಲಿ ನಿಹಾರಿಕಾ ಎಂ., ಪಾವನಿ ಕೆ.ಎಸ್. ಪರಿಣಿತ ಕೆ.ಎಸ್., ಜೀವಿತ ಹಾಗೂ ಚೆಸ್‌ನಲ್ಲಿ ಹರ್ಷವರ್ಧನ ಎಸ್., ಕೊಂಡಕ ಪ್ರದ್ಯೂಷ್ ಸಾಯಿನಾಗ್ ಸ್ಪರ್ಧಿಸಿ ಹಲವು ಬಹುಮಾನಗಳಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಶಾಲಾಭಿವೖದ್ದಿ ಸಮಿತಿ ಅಧ್ಯಕ್ಷರಾದ ಲಿಂಗರಾಜು, ಮುಖ್ಯಶಿಕ್ಷಕಿ ಪ್ರಿಯದರ್ಶಿನಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಹಾಗೂ ಸಹಶಿಕ್ಷಕರು ಅಭಿನಂದಿಸಿದ್ದಾರೆ
;Resize=(128,128))
;Resize=(128,128))
;Resize=(128,128))
;Resize=(128,128))