ಸಾರಾಂಶ
ದಾಬಸ್‌ಪೇಟೆ: ಯುವಕರಿಗೆ ಹೆಚ್ಚು ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ, ಯುವ ಕಾಂಗ್ರೆಸ್ ಚುನಾವಣೆಯಿಂದ ಗ್ರಾಮೀಣ ಪ್ರದೇಶದ ಯುವಕರ ಸಂಘಟನೆಯ ಶಕ್ತಿ ದುಪ್ಪಟ್ಟು ಹೆಚ್ಚಾಗಿದೆ ಎಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಚ್.ಕೆ.ಯಶ್ವಂತ್ ಹೇಳಿದರು.ಪಟ್ಟಣದ ಮಾರುತಿ ಕಾಂಪ್ಲೆಕ್ಸ್ ನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿಯ ಯುವ ಕಾಂಗ್ರೆಸ್ ಚುನಾವಣೆ 2024ರ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಚುನಾವಣೆಯ ಪ್ರಕ್ರಿಯೆಯ ಆ.20 ರಿಂದ ಆರಂಭವಾಗಿ ಒಂದು ತಿಂಗಳ ಕಾಲ ನಡೆಯಲಿದೆ, ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೆಲಮಂಗಲ ಟೌನ್, ಕಸಬಾ, ತ್ಯಾಮಗೊಂಡ್ಲು, ಸೋಂಪುರ, ಮಧುರೆ, ಸೋಲೂರು ಭಾಗಕ್ಕೆ ಸ್ಪರ್ಧಿಸಿದ್ದೇನೆ, ಶಾಸಕರಾದ ಎನ್.ಶ್ರೀನಿವಾಸ್ ರವರು ಸಹ ಯೂತ್ ಕಾಂಗ್ರೆಸ್ ನಿಂದ ಬಂದವರಾಗಿದ್ದು ನಮ್ಮ ತಂಡಕ್ಕೆ ಅವರ ಸಹಕಾರ ಹೆಚ್ಚಿದೆ ಎಂದರು.500 ಯುವಕರನ್ನು ಸಂಘಟಿಸುವ ಗುರಿ : ನೆಲಮಂಗಲ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಬಿ.ವಿ.ರಾಜೀವ್ ಹಾಗೂ ಸೋಲೂರು ಮತ್ತು ಮಧುರೆ ಹೋಬಳಿಗೆ ಚಂದನ್.ಟಿ. ಸ್ಪರ್ದಿಸಿದ್ದಾರೆ. ಆನ್ ಲೈನ್ ನ ಐವೈಸಿ ಆಪ್ ಮುಖಾಂತರ ಯುವಕರು ನೋಂದಣಿಗೆ ಪ್ರಕ್ರಿಯೆ ರೂಪಿಸಿದ್ದು, ಯುವ ಶಕ್ತಿಯನ್ನು ಪಕ್ಷದ ಕಡೆಗೆ ಹೆಚ್ಚಿಸುವ ಗಮನ ಹರಿಸಿ ಪ್ರತಿ ಬೂತ್ ನಲ್ಲಿ 500 ಯುವಕರನ್ನು ಸಂಘಟಿಸುವುದೇ ಗುರಿಯಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಮಾತನಾಡಿ ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಎನ್.ಶ್ರೀನಿವಾಸ್ ಮಾರ್ಗದರ್ಶನದಲ್ಲಿ, ಸ್ಪರ್ದಿಸಿರುವ ಎಲ್ಲಾ ಅಭ್ಯರ್ಥಿಗಳಿಗೂ ಬೆಂಬಲ ಸೂಚಿಸಿದ್ದೇವೆ, ಸ್ಥಳೀಯ ಮುಖಂಡ ಅಗಳಕುಪ್ಪೆ ಗೋವಿಂದರಾಜು ನೇತೃತ್ವದಲ್ಲಿ ಎರಡು ಹೋಬಳಿಯಲ್ಲಿ ಲೀಡ್ ನೀಡಲಿದ್ದೇವೆ ಎಂದರು.ಈ ಸಂದರ್ಭದಲ್ಲಿ ಬಗರ್ ಹುಕ್ಕುಂ ಸಮಿತಿ ಸದಸ್ಯರಾದ ವಕೀಲ ಹನುಮಂತೇಗೌಡ್ರು, ಖಲೀಂ ಉಲ್ಲಾ, ವೀರಸಾಗರ ಗಂಗರುದ್ರಯ್ಯ, ಬರಗೇನಹಳ್ಳಿ ನಾರಾಯಣ್, ಎನ್.ಪಿ.ಎ.ನಿರ್ದೇಶಕ ಪ್ರಕಾಶ್ ಬಾಬು, ಬಮೂಲ್ ನಿರ್ದೇಶಕ ಜಿ.ಆರ್. ಭಾಸ್ಕರ್, ಶಿವಗಂಗೆ ದಿನೇಶ್, ಹ್ಯಾಡಾಳು ಕಿರಣ್, ಕಾಚನಹಳ್ಳಿ ಮನು, ಗ್ರಾ.ಪಂ.ಅಧ್ಯಕ್ಷರಾದ ರಾಮಾಂಜಿನಯ್ಯ, ಅಪ್ಪಾಜಿ, ಚಂದ್ರಣ್ಣ, ಪೆಮ್ಮನಹಳ್ಳಿ ದೇವರಾಜು, ಪಾರ್ಥಣ್ಣ, ಲೋಕೇಶ್, ಗೋಪಿ ವರ್ಮ, ಹಾಲೇನಹಳ್ಳಿ ನಯಾಜ್ ಖಾನ್ ಮತ್ತೀತ್ತರರಿದ್ದರು.