ದಸರೆಗೆ ಜನಜಾತ್ರೆ- ಗಜಪಡೆಯ ತಾಲೀಮು ನಿತ್ಯ ಮಿನಿ ಜಂಬೂಸವಾರಿಯಂತಿತ್ತು..!

| Published : Oct 04 2025, 02:00 AM IST

ದಸರೆಗೆ ಜನಜಾತ್ರೆ- ಗಜಪಡೆಯ ತಾಲೀಮು ನಿತ್ಯ ಮಿನಿ ಜಂಬೂಸವಾರಿಯಂತಿತ್ತು..!
Share this Article
  • FB
  • TW
  • Linkdin
  • Email

ಸಾರಾಂಶ

- ಆಹಾರ ಮೇಳದಲ್ಲಿ ಜನಜಂಗುಳಿ - ಫಲಪುಷ್ಪ ಪ್ರದರ್ಶನವೂ ಓಕೆ, - ಪುಸ್ತಕ ಮೇಳದಲ್ಲಿ ವಿಭಿನ್ನ ಕಾರ್ಯಕ್ರಮಗಳು

ಫೋಟೋ 3 ಎಂವೈಎಸ್‌1.ಜೆಪಿಜಿಮೈಸೂರು ಅರಮನೆ ಎದುರು ಶುಕ್ರವಾರ ಕಂಡ ಪ್ರವಾಸಿಗರು. ಚಿತ್ರಃ ಅನುರಾಗ್‌ ಬಸವರಾಜ್‌--ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ 416ನೇ ಮೈಸೂರು ದಸರಾ ಮಹೋತ್ಸವ ಮುಗಿದಿದೆ. ಈ ಬಾರಿ ಕೂಡ ಎಲ್ಲಿ ನೋಡಿದರಲ್ಲಿ ಜನಜಾತ್ರೆ. ಗಜಪಡೆಯ ತಾಲೀಮು ಪ್ರತಿನಿತ್ಯ ಮಿನಿ ಜಂಬೂಸವಾರಿಯಂತೆ ನಡೆಯಿತು!. ಆನೆಗಳನ್ನು ನೋಡಲು, ಅವುಗಳೊಂದಿಗೆ ಫೋಟೋ, ವಿಡಿಯೋ ತೆಗೆದುಕೊಳ್ಳಲು, ರೀಲ್ಸ್‌ ಮಾಡಲು ಅರಮನೆಯಿಂದ ಬನ್ನಿಮಂಟಪದವರೆಗೆ ಜನವೋ ಜನ!.ಗೋಲ್ಡ್ ಕಾರ್ಡ್, ಟಿಕೆಟ್‌ ಹಾಗೂ ಪಾಸು ಇದ್ದವರಿಗೆ ಪೊಲೀಸರು ''''''''ನೋ ಎಂಟ್ರಿ'''''''' ಎಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿ, ವಿವಾದಕ್ಕೆ ಕಾರಣವಾಗಿದೆ.ಇತ್ತೀಚಿನ ವರ್ಷಗಳಲ್ಲಿ ದಸರೆಯ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಸರಾ ಆರಂಭವಾದ ಸೆ.22 ರಿಂದ ಅ.2 ರವರೆಗೆ ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟಕ್ಕೆ ನೀಡಿರುವ ಪ್ರವಾಸಿಗರ ಸಂಖ್ಯೆ ಗಮನಿಸಿದರೆ ಇದು ಸಾಬೀತಾಗುತ್ತದೆ. ಶಾಲಾ- ಕಾಲೇಜುಗಳಿಗೆ ಮಧ್ಯಂತರ ರಜೆ, ರಾಜ್ಯಾದ್ಯಂತ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುವ ''''''''ಶಕ್ತಿ'''''''' ಯೋಜನೆಯಿಂದಾಗಿ ಪ್ರವಾಸಿಗರು ಹೆಚ್ಚುತ್ತಿದ್ದಾರೆ.ನಗರದ ಎಲ್ಲಾ ಹೋಟೆಲ್‌ಗಳು ಶೇ.100 ರಷ್ಟು ಭರ್ತಿಯಾಗಿದ್ದವು.ಇದಕ್ಕೆ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಕೂಡ ಕಾರಣ. ಈ ಬಾರಿ ಹೆಚ್ಚು ಜನರನ್ನು ಸೆಳೆದಿದ್ದು, ಯುವ ದಸರೆ, ವೈಮಾನಿಕ ಹಾಗೂ ಡ್ರೋನ್‌ ಪ್ರದರ್ಶನ.ಮೊದಲು ಮಾನಸ ಗಂಗೋತ್ರಿಯ ಬಯಲು ರಂಗಮಂದಿರ, ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರೆಯನ್ನು ಕಳೆದ ಬಾರಿಯಿಂದ ವರ್ತುಲ ರಸ್ತೆಯ ಉತ್ತನಹಳ್ಳಿ ಬಳಿಗೆ ಸ್ಥಳಾಂತರಿಸಲಾಗಿದೆ. ಇದು ನಗರದ ಹೊರವಲಯದಲ್ಲಿದ್ದರೂ ಜನಜಾತ್ರೆ. ಅರ್ಜುನ್‌ ಜನ್ಯ, ಲಗೋರಿ ಬ್ಯಾಂಡ್‌, ಪ್ರೀತಮ್‌, ಶೋರ್‌ ಪೊಲೀಸ್‌, ಜಬಿನ್‌ ನೌಟಿಯಾಲ್‌, ರಾಮಚಂದ್ರ, ಆಸೀಸ್‌ ಕೌರ್‌, ಸುನಿಧಿ ಚೌಹಾಣ್‌, ಬೆಸ್ಟ್‌ ಕೆಪ್ಟ್‌ ಸಿಕ್ರೇಟ್‌ ತಂಡದಕಾರ್ಯಕ್ರಮಗಳು ಕೂಡ ಇದಕ್ಕೆ ಕಾರಣ.ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಈ ಬಾರಿ ಐದು ದಿನಗಳು ವೈಮಾನಿಕ ಹಾಗೂ ಡ್ರೋನ್‌ ಪ್ರದರ್ಶನ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಕಳೆದ ಬಾರಿಯಂತೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದು, ಹೆಚ್ಚು ಜನರನ್ನು ಆಕರ್ಷಿಸಿತು. ಸ್ಕೌಟ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆದಪುಸ್ತಕ ಮೇಳವು ಸಾಹಿತಿಗಳೊಂದಿಗೆ ಸೆಲ್ಫಿ, ವಿಚಾರ ಸಂಕಿರಣ, ಕವಿಗೋ,ಷ್ಠಿ, ಪುಸ್ತಕಗಳ ಬಿಡುಗಡೆ, ನನ್ನ ಮೆಚ್ಚಿನ ಪುಸ್ತಕ ಓದು- ಈ ರೀತಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು.ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ''''''''ಯುವಸಂಭ್ರಮ'''''''' ಎಂದಿನಂತೆ ಮಾನಸ ಗಂಗೋತ್ರಿ ಬಯಲು ರಂಗಮಂದಿರಲ್ಲಿ ನಡೆಯಿತು. ದಸರಾ ಚಲನಚಿತ್ರೋತ್ಸವ ಕೂಡ ಈ ಬಾರಿ ಮುಂಚಿತವಾಗಿಯೇ ನಡೆದಿದ್ದು ವಿಶೇಷ. ಪೊಲೀಸರು ತಾಳ್ಮೆ ವಹಿಸಲಿದಸರಾ ಭದ್ರತೆಗೆ ಪೊಲೀಸರನ್ನು ನಿಯೋಜಿಸುವಾಗ ಮುಂಚಿತವಾಗಿ ಅವರಿಗೆ ಜನಸ್ನೇಹಿಯಾಗಿ ವರ್ತಿಸುವಂತೆ ತರಬೇತಿ ನೀಡಬೇಕು. ಅರಮನೆಯ ವಿವಿಧ ದ್ವಾರಗಳ ಎದುರು ಜಂಬೂಸವಾರಿಯಂದು ಕರ್ತವ್ಯ ನಿರ್ವಹಿಸುವ ಪೊಲೀಸರು ಅತ್ಯಂತ ಸಹನೆ, ತಾಳ್ನೆ, ಸೌಜನ್ಯದಿಂದ ವರ್ತಿಸುವಂತಿರಬೇಕು. ಆ ದಿನ ಒತ್ತಡ ಇರುತ್ತದೆ ಸಹಜ. ಅದನ್ನು ನಿವಾರಿಸಿಕೊಂಡೇ ಕೆಲಸ ಮಾಡಲು ಸಾಧ್ಯವಿದೆ. ಆದರೆ ಎಲ್ಲೆಡೆ ದುಡ್ಡು ಕೊಟ್ಟು ಗೋಲ್ಡ್‌ ಕಾರ್ಡ್, ಟಿಕೆಟ್‌ ಖರೀದಿಸಿದವರಿಗೆ, ಪಾಸ್‌ ಹಿಡಿದು ಬಂದವರೊಂದಿಗೆ ಈ ಬಾರಿ ಪೊಲೀಸರು ನಡೆದುಕೊಂಡ ರೀತಿ ಸರಿಯಲ್ಲ. ಬಹುಬೇಗನೇ ದ್ವಾರಗಳನ್ನು ಬಂದ್‌ ಮಾಡಿದ್ದು ಕೂಡ ವಿವೇಕಯುತವಾದ ನಡೆಯಲ್ಲ. ಮೊದಲೆಲ್ಲಾ ಗೋಲ್ಡ್‌ ಕಾರ್ಡ್‌ ಪಡೆದವರಿಗೆ ಪ್ರತ್ಯೇಕ ಸಾಲು ಇರುತ್ತಿತ್ತು. ಆದರೆ ಈ ಬಾರಿ ಕಾಣಲಿಲ್ಲ. ಅಂಬಾರಿ ಸೂಪರ್‌ ಹಿಟ್‌

ಜಂಬೂ ಸವಾರಿ ಎಂದರೇ ಅರ್ಥಾತ್‌ ಆನೆಗಳ ಮೆರವಣಿಗೆ. ಆನೆಗಳಿಲ್ಲದೇ ದಸರಾ ಮೆರವಣಿಗೆಯನ್ನು ಊಹಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಹೀಗಾಗಿ ತಾಲೀಮುನಿಂದ ಹಿಡಿದು ಕೊನೆವರೆಗೂ ಆನೆಗಳು ಜನರನ್ನು ಆಕರ್ಷಿಸಿದವು. ಸಂಜೆ ವೇಳೆ ದೀಪಾಲಂಕಾರ ವೀಕ್ಷಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಾಡಿರುವ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಸೂಪರ್‌ ಹಿಟ್‌ ಆಗಿದೆ.ಇದರ ಜೊತೆಗೆ ಪಂಚ ಕವಿಗೋಷ್ಠಿ, ನಾಡಗೀತೆಗೆ ನೂರರ ಸಂಭ್ರಮ, ಕುಸ್ತಿ, ಕ್ರೀಡಾಕೂಟ, ಯೋಗ, ಮಕ್ಕಳು, ಮಹಿಳಾ ಹಾಗೂ ರೈತ ದಸರಾ, ಮತ್ಸ್ಯಮೇಳ, ಶಿಲ್ಪಕಲೆ, ಲಲಿತಕಲೆ, ಚಿತ್ರಕಲೆ, ಕರಕುಶಲ ಕಲಾಕೃತಿಗಳು, ಸಾಕು ಪ್ರಾಣಿಗಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಪಾರಂಪರಿಕ ಟಾಂಗಾ, ಪಾರಂಪರಿಕ ಸೈಕಲ್‌ ಸವಾರಿ, ಪಾರಂಪರಿಕ ನಡಿಗೆ, ಯೋಗ ದಸರಾ, ರಂಗಾಯಣದಲ್ಲಿ ರಂಗೋತ್ಸವ ನಡೆದವು. ವಸ್ತು ಪ್ರದರ್ಶನ ಆರಂಭವಾಗಿದ್ದು, ದಸರೆ ಮುಗಿದ ನಂತರವೂ ಮೂರು ತಿಂಗಳವರೆಗೆ ಇರುತ್ತದೆ.