ಸಾರಾಂಶ
ನಟಸೌರ್ವಭೌಮ ಡಾ. ರಾಜ್ ಕುಟುಂಬದ ನಟ ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಹಾಗೂ ಅಪ್ಪು ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ಯುವ ಚಿತ್ರದ ಟೈಟಲ್ ಸಾಂಗ್ ಶನಿವಾರ ಮಾ.2ರಂದು ಚಾಮರಾಜನಗರದಲ್ಲಿ ಬಿಡುಗಡೆಯಾಗಲಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಟಸೌರ್ವಭೌಮ ಡಾ. ರಾಜ್ ಕುಟುಂಬದ ನಟ ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಹಾಗೂ ಅಪ್ಪು ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ಯುವ ಚಿತ್ರದ ಟೈಟಲ್ ಸಾಂಗ್ ಶನಿವಾರ ಮಾ.2ರಂದು ಚಾಮರಾಜನಗರದಲ್ಲಿ ಬಿಡುಗಡೆಯಾಗಲಿದೆ.ದೊಡ್ಮನೆಯ ಕುಡಿ, ಡಾ. ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವರಾಜ್‌ಕುಮಾರ್ ಅವರ ಮೊದಲ ಸಿನಿಮಾ ಹೊಂಬಾಳೆ ಸಂಸ್ಥೆಯ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದ ''''''''ಯುವ'''''''' ಚಿತ್ರದ ಟೈಟಲ್ ಸಾಂಗ್ ಚಾಮರಾಜನಗರದಲ್ಲಿ ಬಿಡುಗಡೆಗೆ ಎಲ್ಲಾ ತಯಾರಿಯಾಗಿದೆ ಎಂದು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅಪ್ಪು ಯುವ ಸಾಮ್ರಾಜ್ಯ ರಾಜ್ಯಧ್ಯಕ್ಷ ಆಂಜನೇಯ ತಿಳಿಸಿದರು.ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಜೆ 4ಕ್ಕೆ ಟೈಟಲ್ ಸಾಂಗ್ ಬಿಡುಗಡೆ ನಡೆಯಲ್ಲಿದ್ದು, ಬಿಡುಗಡೆಗೆ ಆಗಮಿಸುವ ಅತಿಥಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಅಲ್ಲದೇ ಕಾರ್ಯಕ್ರಮ 4ಕ್ಕೆ ಪ್ರಾರಂಭವಾಗಿ 10 ಗಂಟೆವರೆಗೂ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮೋಹನ್ ಮಾಸ್ಟರ್ ತಂಡದಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮದ ನಡೆಯಲಿದೆ ಎಂದರು.ಡಾ. ರಾಜ್ ಕುಟುಂಬದ ಎಲ್ಲಾ ಸದಸ್ಯರು ಸೇರಿದಂತೆ ಅನೇಕ ಚಲನಚಿತ್ರ ನಟ ನಟಿಯರು ಸಹ ಆಗಮಿಸುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು, ಶಿವಣ್ಣ ಅಭಿಮಾನಿಗಳು, ರಾಘವೇಂದ್ರ ರಾಜ್‌ಕುಮಾರ್ ಮತ್ತು ಡಾ.ರಾಜ್ ಕುಮಾರ್ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಟರಾಜು, ಅಭಿಮಾನಿಗಳಾದ ಗೌತಮ್, ನಾಗೇಶ್, ಆರ್. ಮನೋಹರ್, ಕುಮಾರ್, ನವೀನ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))