ಮತ್ತೆ ಭುಗಿಲೆದ್ದ ಹೆಚ್ಚುವರಿ ಡಿಸಿಎಂ ಕೂಗು

| Published : Jun 23 2024, 02:11 AM IST / Updated: Jun 23 2024, 05:15 AM IST

ಸಾರಾಂಶ

 . ಮುಸ್ಲಿಂ ಸೇರಿದಂತೆ ಲಿಂಗಾಯತ, ದಲಿತ ಸಮಾಜಗಳಿಂದಲೂ ಡಿಸಿಎಂ ಸ್ಥಾನಕ್ಕೆ‌ ಬೇಡಿಕೆ ಇದೆ. ನಾವು ಕೂಡ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ’ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್‌ ಹೇಳಿದ್ದಾರೆ.

 ವಿಜಯಪುರ‘ : ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಎಲ್ಲ ಸಮಾಜಕ್ಕೂ ತಮ್ಮ ಸಮಾಜದವರಿಗೆ ಡಿಸಿಎಂ ಸ್ಥಾನ ಸಿಗಬೇಕು ಎನ್ನುವ ಹಂಬಲ ಇರುತ್ತದೆ. ಮುಸ್ಲಿಂ ಸೇರಿದಂತೆ ಲಿಂಗಾಯತ, ದಲಿತ ಸಮಾಜಗಳಿಂದಲೂ ಡಿಸಿಎಂ ಸ್ಥಾನಕ್ಕೆ‌ ಬೇಡಿಕೆ ಇದೆ. ನಾವು ಕೂಡ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ’ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್‌ ಹೇಳಿದ್ದಾರೆ.

ನಗರದ ಹೊರಭಾಗದಲ್ಲಿರುವ ಮದರಸಾದಲ್ಲಿ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಸ್ಮಿ ಅವರ ಆಶೀರ್ವಾದ ಪಡೆಯಲು ಶನಿವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

 ಹೆಚ್ಚುವರಿ ಡಿಸಿಎಂ ಸ್ಥಾನಗಳಿಗೆ ಬೇಡಿಕೆ ಇಟ್ಟಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾವೂ ಬೇಡಿಕೆ ಇಟ್ಟಿದ್ದೇವೆ. ಆದರೆ, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತೆ. ಹಾಗಂತ, ಡಿಸಿಎಂ ಸ್ಥಾನ ನೀಡದೆ ಇದ್ದರೂ ನಮಗಾರಿಗೂ ಅಸಮಾಧಾನ ಏನೂ ಇಲ್ಲ’ ಎಂದರು.