ಸಾರಾಂಶ
ಹೊಸಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ 10 ತಿಂಗಳಲ್ಲಿ ಸರ್ಕಾರದ ಖಜಾನೆ ಖಾಲಿಯಾಗಿದೆ. ಇದರಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸರ್ಕಾರದಲ್ಲಿ ಬಳಿ ಹಣವೇ ಇಲ್ಲದಂತಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್‌ನಿAದ ಅಭಿವೃದ್ದಿ ಶೂನ್ಯವಾಗಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹೊಸಕೋಟೆ ಟೌನ್ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ನಾರಿ ಶಕ್ತಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 10 ತಿಂಗಳಾದರೂ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿಲ್ಲ, ಬಹುತೇಕ ಲಾನುಭವಿಗಳಿಗೆ ಇಂದಿಗೂ ಯೋಜನೆ ತಲುಪಿಲ್ಲ. ಕೆಲವೇ ಪಲಾನುಭವಿಗಳಿಗೆ ಯೋಜನೆ ತಲುಪಿದ್ದು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರಿಂದ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅಗತ್ಯ ವಸ್ತುಗಳು ಸೇರಿ ಸಿಕ್ಕಸಿಕ್ಕ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಒಂದು ಕಡೆ ಯೋಜನೆಯ ನೆಪದಲ್ಲಿ ಕೊಡುವಂತೆ ಮಾಡಿ ಮತ್ತೊಂದು ಕಡೆ ಸುಲಿಗೆ ಮೂಲಕ ಜನರ ಶೋಷಣೆ ಮಾಡುತ್ತಿದೆ. ಇಂಥ ಸರ್ಕಾರಗಳಿಂದ ಮತ್ಯಾವುದೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಇವೆಲ್ಲ ಗ್ಯಾರಂಟಿಗಳಿಗಿAತ ಮೋದಿ ಗ್ಯಾರಂಟಿಯೇ ವಿಶ್ವಾಸಾರ್ಹವಾಗಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಮಾತನಾಡಿ ಲೋಕಸಭಾ ಚುನಾವಣೆ ದೇಶದ ಭವಿಷ್ಯದ ಚುನಾವಣೆಯಾಗಿದೆ ಆದ್ದರಿಂದ ಮತದಾರರು ಎಚ್ಚರಿಕೆಯಿಂದ ಮುಂದಿನ ಭವಿಷ್ಯದ ದೃಷ್ಟಿಯಿಂದ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು. ಇಡೀ ವಿಶ್ವವೇ ಇಂದು ಭಾರತನ್ನು ಬೆರಗುಗಣ್ಣಿನಿಂದ ತಿರುಗಿನೋಡುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸಿದ್ದಾರೆ. ವಿಶ್ವನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಕಳೆದ 10 ವರ್ಷದ ಅವಧಿಯಲ್ಲಿ ದೇಶ ಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಷ್ಟು ವರ್ಷದ ಅವಧಿಯಲ್ಲಿ ಆರೋಗ್ಯ ಸಮಸ್ಯೆಯಾಗಲಿ ಮತ್ಯಾವುದೇ ನೆಪದಲ್ಲಿ ಒಂದು ದಿನವೂ ವಿರಮಿಸಿಲ್ಲ. ಇದೇ ಮೋದಿ ಅವರ ಶಕ್ತಿ ಅವರಿಗೆ ದೇಶದ ಬಗ್ಗೆ ಇರುವ ಕಾಳಜಿಯಾಗಿದೆ ಎಂದರು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನುರೆಡ್ಡಿ ಮಾತನಾಡಿ ಮಹಿಳಾ ಸಬಲೀಕರಣದ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಸಾಕಾರ ಮಾಡಿರುವ ಯೋಜನೆಗಳು ಸಾಕಷ್ಟಿದ್ದು ಪ್ರತಿಬೂತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯಕರ್ತರು ಪ್ರಚಾರ ಮಾಡಿ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನುರೆಡ್ಡಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಧಾ, ಮುಖಂಡರಾದ ಸುಜಾತಾ ರವೀಂದ್ರ, ಹುಲ್ಲೂರುಮಂಜು, ಸಿ.ನಾಗರಾಜ್, ಬಾಲಚಂದ್ರ ಮತ್ತಿತರರು ಇದ್ದರು.ಬಾಕ್ಸ್:ಸುಧಾಕರ್ ಗೆದ್ದರೆ ನೀರಾವರಿ ಯೋಜನೆ ಸಾಕಾರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಡಾ.ಕೆ.ಸುಧಾಕರ್ ಅವರಿಗೆ ಒತ್ತಾಯ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇದರ ಸಾಕಾರಕ್ಕೆ ಸುಧಾಕರ್ ಖಂಡಿತವಾಗಿ ದುಡಿಯಲಿದ್ದಾರೆ. ಆದ್ದರಿಂದ ಸುಭದ್ರ ಸರ್ಕಾರ ರಚನೆಗೆ ಕೈಜೋಡಿಸುವ ಜತೆಗೆ ಬರಪೀಡಿತ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಕನಸು ಸಾಕಾರಕ್ಕೆ ಡಾ.ಕೆ.ಸುಧಾಕರ್ ಗೆಲುವು ಅವಶ್ಯವಾಗಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.ಫೋಟೋ: 21 ಹೆಚ್‌ಎಸ್‌ಕೆ 2 ಮತ್ತು 32: ಹೊಸಕೋಟೆಯ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ನಡೆದ ನಾರಿ ಶಕ್ತಿ ಮಹಿಳಾ ಸಮಾವೇಶವನ್ನು ಮಾಜಿ ಸಚಿವ ಎಂಟಿಬಿ ನಾಗರಾಜ್ ಉದ್ಘಾಟಿಸಿದರು.ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಜಿಲ್ಲಾಧ್ಯಕ್ಷೆ ಅನುರೆಡ್ಡಿ ಇದ್ದರು.