ಸಾರಾಂಶ
Zonal Forest Officer Bahuguna to Bangalore: Manjunath assumes charge
ಚಳ್ಳಕೆರೆ: ಅರಣ್ಯ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಿಂದ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಹುಗುಣ ಅವರನ್ನು ಅರಣ್ಯ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ದಾವಣಗೆರೆ ವಲಯ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ವಿ.ಮಂಜುನಾಥ ಅವರನ್ನು ಚಳ್ಳಕೆರೆ ವಲಯ ಅರಣ್ಯಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಎಸ್.ವಿ.ಮಂಜುನಾಥ ಬಹುಗುಣರವರಿಂದ ಅಧಿಕಾರ ಸ್ವೀಕರಿಸಿದರು. ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ವರ್ಗಾವಣೆಗೊಂಡ ಬಹುಗುಣ ಹಾಗೂ ನೂತನವಾಗಿ ಅಧಿಕಾರ ವಹಿಸಿಕೊಂಡು ಮಂಜುನಾಥ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ವಸಂತಕುಮಾರ್, ರಾಜೇಶ್, ಇನಾಯಿತ್ ಉಪಸ್ಥಿತರಿದ್ದರು.--------
ಪೋಟೋ: ೯ಸಿಎಲ್ಕೆ೩ಚಳ್ಳಕೆರೆ ನಗರದ ನೂತನ ವಲಯ ಅರಣ್ಯ ಅಧಿಕಾರಿಯಾಗಿ ಎಸ್.ವಿ.ಮಂಜುನಾಥ ಅಧಿಕಾರ ವಹಿಸಿಕೊಂಡರು.