ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ರೋಟರಿ ಕೋಟ ಸಿಟಿ ಚಾಂಪಿಯನ್ಸ್

| Published : Nov 07 2024, 11:54 PM IST / Updated: Nov 07 2024, 11:55 PM IST

ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ರೋಟರಿ ಕೋಟ ಸಿಟಿ ಚಾಂಪಿಯನ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಸಮೂಹ ನೃತ್ಯ, ಪ್ರಹಸನ ಮತ್ತು ಏಕವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಏಕಪಾತ್ರಾಭಿನಯ ದ್ವಿತೀಯ ಸ್ಥಾನದೊಂದಿಗೆ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ನ.೧೦ರಂದು ನಡೆಯಲಿರುವ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಬ್ ಅರ್ಹತೆ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಕೋಟರೋಟರಿ ಕ್ಲಬ್ ಶಂಕರನಾರಾಯಣ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಚಾಂಪಿಯನ್ ಆಗಿ ಮೂಡಿ ಬಂದಿದೆ.ಸಮೂಹ ನೃತ್ಯ, ಪ್ರಹಸನ ಮತ್ತು ಏಕವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಏಕಪಾತ್ರಾಭಿನಯ ದ್ವಿತೀಯ ಸ್ಥಾನದೊಂದಿಗೆ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ನ.೧೦ರಂದು ನಡೆಯಲಿರುವ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಬ್ ಅರ್ಹತೆ ಪಡೆದುಕೊಂಡಿದೆ.ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ಕ್ಲಬ್‌ನ ಅಧ್ಯಕ್ಷ ಅನಿಲ್ ಸುವರ್ಣ ಹಾಗೂ ಕಾರ್ಯದರ್ಶಿ ಪ್ರಕಾಶ ಪೂಜಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.ಈ ಸಂದರ್ಭ ವಲಯ ೨ರ ಸಹಾಯಕ ಗವರ್ನರ್ ಮಮತಾ ಆರ್. ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ವಲಯ ತರಬೇತುದಾರ ಸುರೇಶ್ ಬೇಳೂರು, ವಲಯ ಸಾಂಸ್ಕೃತಿಕ ಸಂಯೋಜಕ ಡಾ. ಸಚ್ಚಿದಾನಂದ ವೈದ್ಯ, ರೋಟರಿ ಶಂಕರನಾರಾಯಣ ಅಧ್ಯಕ್ಷ ದಯಾನಂದ ರಾವ್, ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಮಂದಿನ ಸಾಲಿನ ಸಹಾಯಕ ಗವರ್ನರ್ ಶ್ಯಾಮಸುಂದರ್ ನಾರಿ, ಕೋಟ ಸಿಟಿ ಸಂಸ್ಥೆಯ ಸಾಂಸ್ಕೃತಿಕ ಸಭಾಪತಿ ಡಾ. ಗಣೇಶ್, ಆನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಶ್ಯಾಮಸುಂದರ್ ಮುಂತಾದವರು ಉಪಸ್ಥಿತರಿದ್ದರು.