ಕಂಪ್ಲಿಯಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಜಿಪಂ ಸಿಇಒ

| Published : Jul 27 2025, 12:02 AM IST

ಕಂಪ್ಲಿಯಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಜಿಪಂ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಕಂಪ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಜೆಜೆಎಂ ಕಾಮಗಾರಿ ಹಾಗೂ ಮಿನಿವಿಧಾನ ಸೌಧದ ಬಳಿ ನಡೆಯುತ್ತಿರುವ ತಾಪಂ ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಜಿಪಂ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಕಂಪ್ಲಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಜೆಜೆಎಂ ಕಾಮಗಾರಿ ಹಾಗೂ ಮಿನಿವಿಧಾನ ಸೌಧದ ಬಳಿ ನಡೆಯುತ್ತಿರುವ ತಾಪಂ ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಜಿಪಂ ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೇರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ನಂ. 3 ಸಣಾಪುರ ಗ್ರಾಪಂ ವ್ಯಾಪ್ತಿಯ ಅರಳಿಹಳ್ಳಿ ತಾಂಡಕ್ಕೆ ಭೇಟಿ ನೀಡಿದ್ದರು.

ತಾಪಂ ಇಒ ಆರ್.ಕೆ. ಶ್ರೀಕುಮಾರ್ ಮಾತನಾಡಿ, ಸಣಾಪುರ ಗ್ರಾಪಂ ಆಡಳಿತ ಸಮೀಕ್ಷೆಯಂತೆ 1991 ಮತ್ತು 1993ರಲ್ಲಿ ಆಶ್ರಯ ಯೋಜನೆಯಡಿ, ಅರಳಿಹಳ್ಳಿ ತಾಂಡದ ಸರ್ವೇ ನಂಬರ್ 77/ಎ ಯ 17ಎಕರೆ ಭೂಮಿಯಲ್ಲಿ 372 ನಿವೇಶನಗಳನ್ನು ರಚಿಸಲಾಯಿತು. ಇದರಲ್ಲಿ 265 ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಯಿತು.

ಇದರಲ್ಲಿ ಸದ್ಯ ವಾಸವಿರುವ 17 ಮನೆಗಳು ಶಿಥಿಲಗೊಂಡಿವೆ. 30 ಶಿಥಿಲಗೊಂಡ ವಾಸವಿಲ್ಲದ ಮನೆಗಳಿವೆ. 40 ಖಾಲಿ ನಿವೇಶನಗಳಿವೆ. ಗ್ರಾಪಂ ಬೇಡಿಕೆ ಪಟ್ಟಿಯಲ್ಲಿ 50 ಮನೆಗಳು ಮಾತ್ರ ನೋಂದಣಿಯಾಗಿವೆ. 35 ನಿವೇಶನಗಳನ್ನು ಶಾಲೆ, ದೇವಸ್ಥಾನಕ್ಕೆ ನೀಡಿದೆ. ಮೂಲ ಪಟ್ಟಾದಾರರೇ ಬೇರೆ, ವಾಸಿಸುವವರು ಬೇರೆ ಇದ್ದಾರೆ. ಮೂಲ ಪಟ್ಟಾದಾರರು ನಮಗೆ ಮಂಜೂರಾದ ಮನೆ ಬಿಡಿಸಿಕೊಡಿ ಅನ್ನುತ್ತಾರೆ. ಇಲ್ಲೇ ಇದ್ದೇವೆ, ಇದೇ ನಮ್ಮ ಮನೆ ಎನ್ನುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕೊಡಬೇಕಿದೆ ಎಂದು ಮಾಹಿತಿ ನೀಡಿದರು.

ಈ ಕುರಿತು ಸಿಇಒ ಪ್ರತಿಕ್ರಿಯಿಸಿ ಮಾತನಾಡಿ, ಈ ವಿಚಾರ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಾಂಡಾದ ಜನತೆಗೆ ತಿಳಿಸಿದರು.

ನರೇಗಾ ಎಡಿ ಕೆ.ಎಸ್. ಮಲ್ಲನಗೌಡ, ಪಿಡಬ್ಲ್ಯೂಡಿ ಎಇಇ ಆನಂದ ಪಮ್ಮಾರ, ಪಿಡಿಒಗಳಾದ ಹಾಲಹರವಿ ಶೇಷಗಿರಿ, ಶಿಲ್ಪಾರಾಣಿ, ಆರ್‌ಡಬ್ಲ್ಯೂಎಸ್ ಇಇ ಇಂದೂಧರ, ಎಇ ದೇವರಾಜ, ತಾಲೂಕು ನರೇಗಾ ಸಂಯೋಜಕ ಎಚ್. ಹನುಮೇಶ ಇತರರಿದ್ದರು.