ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ತಮ್ಮ ಸಂಘಗಳು ಸಿದ್ಧಪಡಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಸ್ಥಳಾವಕಾಶ ಕಲ್ಪಿಸಲು 50 ಮಳಿಗೆ ತೆರೆಯಲಾಗುತ್ತಿದೆ. ಹೊರ ಜಿಲ್ಲೆಗಳ 16 ಸ್ವ-ಸಹಾಯ ಸಂಘಗಳು ಸೇರಿದಂತೆ ಮಂಡ್ಯ ಜಿಲ್ಲೆಯ 34 ಸ್ವ-ಸಹಾಯ ಸಂಘಗಳಿಗೆ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ವಿ.ಸಿ.ಫಾರ್ಮ್ ಕೃಷಿ ವಿದ್ಯಾಲಯದ ಆವರಣದಲ್ಲಿ ಡಿ.5ರಿಂದ 7ರವರೆಗೆ ನಡೆಯಲಿರುವ ಕೃಷಿ ಮೇಳದ ಪೂರ್ವ ಸಿದ್ಧತೆಗಳ ಕುರಿತು ಜಿಪಂ ಸಿಇಒ ಕೆ.ಆರ್.ನಂದಿನಿ ಪರಿಶೀಲಿಸಿದರು.

ವಿ.ಸಿ.ಫಾರ್ಮ್‌ಗೆ ಭೇಟಿ ನೀಡಿದ ಅವರು ವೇದಿಕೆ ನಿರ್ಮಾಣ, ಮಳಿಗೆಗಳ ನಿರ್ಮಾಣ ಸೇರಿದಂತೆ ಇತರೆ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ತಮ್ಮ ಸಂಘಗಳು ಸಿದ್ಧಪಡಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಸ್ಥಳಾವಕಾಶ ಕಲ್ಪಿಸಲು 50 ಮಳಿಗೆ ತೆರೆಯಲಾಗುತ್ತಿದೆ. ಹೊರ ಜಿಲ್ಲೆಗಳ 16 ಸ್ವ-ಸಹಾಯ ಸಂಘಗಳು ಸೇರಿದಂತೆ ಮಂಡ್ಯ ಜಿಲ್ಲೆಯ 34 ಸ್ವ-ಸಹಾಯ ಸಂಘಗಳಿಗೆ ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದರು.

ಮಂಡ್ಯ ಜಿಲ್ಲೆಯ ಸ್ವ-ಸಹಾಯ ಸಂಘಗಳು ಸಿರಿ ಧಾನ್ಯಗಳಿಂದ ಆಹಾರೋತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದು, ಸದರಿ ಉತ್ಪನ್ನಗಳನ್ನು ಸಿರಿ ಸಮೃದ್ಧಿ ಎಂಬ ಬ್ರಾಂಡ್ ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ ಎಂದರು.

ಕೃಷಿ ಮೇಳದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ ಎನ್.ಆರ್.ಎಲ್.ಎಂ. ಯೋಜನೆಯ ಸಿಬ್ಬಂದಿಗೆ ಸೂಚಿಸಿದರು. ಸೈಕಲ್ ಜಾಥಾ, ಬೈಕ್ ರ್‍ಯಾಲಿ ಮತ್ತು ವಾಕಾಥಾನ್ ಗಳಂತಹ ಚಟುವಟಿಕೆಗಳನ್ನು ಆಯೋಜಿಸುವಂತೆ ಸೂಚಿಸಿದರು.

ಈ ವೇಳೆ ಜಂಟಿ ಕೃಷಿ ನಿರ್ದೇಶಕರಾದ ಅಶೋಕ್, ಜಿಪಂ ಯೋಜನಾ ನಿರ್ದೇಶಕಿ ರೂಪಶ್ರೀ, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ವಿ.ಸಿ.ಫಾರ್ಮ್ ನ ಅಧಿಕಾರಿಗಳು ಇದ್ದರು.

ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು, ಅವಕಾಶಗಳನ್ನು ಕೊಟ್ಟಿದೆ: ನಟರಾಜು

ಕನ್ನಡಪ್ರಭ ವಾರ್ತೆ ಮದ್ದೂರು

ದೇಶದ ಸಂವಿಧಾನವು ಎಲ್ಲಾ ವರ್ಗದ ಜನರಿಗೂ ಸಮಾನ ಹಕ್ಕು ಅವಕಾಶ ಒದಗಿಸಿಕೊಟ್ಟಿದೆ ಎಂದು ಗ್ರಾಪಂ ಸದಸ್ಯ ಎಚ್.ಎಸ್.ನಟರಾಜು ಹೇಳಿದರು.

ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಜೈಭೀಮ್ ಯುವಕರ ಬಳಗದಿಂದ ಆಯೋಜಿಸಿದ್ದ 76ನೇ ಸಂವಿಧಾನ ಸಮರ್ಪಣಾ ದಿನ ಉದ್ಘಾಟಿಸಿ ಮಾತನಾಡಿ,. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಸಂವಿಧಾನ ಹಲವು ಹಕ್ಕು ಅಧಿಕಾರಗಳನ್ನು ನೀಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿವಿಧತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವು ಜಾತಿ, ಧರ್ಮ ಮತ್ತು ಸಂಸ್ಕೃತಿಗಳಿವೆ. ಎಲ್ಲಾ ಬಗೆಯ ಜನರಿಗೂ ಹೊಂದುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಆಳುವ ಸರ್ಕಾರಗಳು ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವ ಕೆಲಸವಾಗಬೇಕಿದೆ ಎಂದರು.

ಗ್ರಾಮದ ಮುಖಂಡ ಬಸವರಾಜು ಮಾತನಾಡಿ, ದೇಶದ ಸರ್ವ ಜನರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಅಂಬೇಡ್ಕರ್ ಅವರನ್ನು ಎಲ್ಲಾ ವರ್ಗದ ಜನರು ಸ್ಮರಿಸಬೇಕು. ಸಂವಿಧಾನವನ್ನು ರಕ್ಷಣೆ ಮಾಡಿದರೇ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡಲಿದೆ ಎಂದರು.

ಇದೇ ವೇಳೆ ಗ್ರಾಮದ ಪ್ರತಿ ಮನೆಗೂ ಉಚಿತವಾಗಿ ಅಂಬೇಡ್ಕರ್ ಫೋಟೋ ವಿತರಿಸಲಾಯಿತು. ಗ್ರಾಪಂ ಮಾಜಿ ಸದಸ್ಯ ಚುಂಚಗಳ್ಳಿ ಕುಮಾರ್, ಮುಖಂಡರಾದ ರವಿ, ಚಿಕ್ಕಬಸವಯ್ಯ, ಗೂಡಯ್ಯ, ಮಾಯಿಗಯ್ಯ, ಸೀನ, ಕುಮಾರ್, ಶಿವಮೂರ್ತಿ, ರಾಜೇಶ್, ನವೀನ್ ಕುಮಾರ್, ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.