‘ಬಿಜೆಪಿ ನನ್ನನ್ನು ನಿರ್ಲಕ್ಷಿಸಿಲ್ಲ’ ಮುಂದಿನ ದಿನಗಳಲ್ಲಿ ನನಗೆ ಸೂಕ್ತವಾದ ಸ್ಥಾನ ಮಾನ ನೀಡಲಿದೆ : ಎಸ್.ಮುನಿಸ್ವಾಮಿ

| Published : Oct 14 2024, 01:19 AM IST / Updated: Oct 14 2024, 05:07 AM IST

S Muniswamy
‘ಬಿಜೆಪಿ ನನ್ನನ್ನು ನಿರ್ಲಕ್ಷಿಸಿಲ್ಲ’ ಮುಂದಿನ ದಿನಗಳಲ್ಲಿ ನನಗೆ ಸೂಕ್ತವಾದ ಸ್ಥಾನ ಮಾನ ನೀಡಲಿದೆ : ಎಸ್.ಮುನಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಟಿಕೆಟ್ ಸಿಕ್ಕಿಲ್ಲ ಎಂದು ಬಹಳಷ್ಟು ಬಿಜೆಪಿ ಮುಖಂಡರು, ಕಾರ್ಯಕರ್ತರು, ಮತದಾರರು ಬೇಸರಪಟ್ಟಿದ್ದಾರೆ ಎಂಬ ವಿಷಯ ನನಗೂ ತಿಳಿದಿದೆ. ನನಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಇರುವುದು ಉದ್ದೇಶ ಪೂರ್ವಕವಾಗಿ ಅಲ್ಲ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು

 ಕೋಲಾರ :  ಭಾರತೀಯ ಜನತಾ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿಲ್ಲ, ಮುಂದಿನ ದಿನಗಳಲ್ಲಿ ನನಗೆ ಸೂಕ್ತವಾದ ಸ್ಥಾನ ಮಾನ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬೆಂಗಳೂರಿನ ಬಿಬಿಎಂ ಸದಸ್ಯನಾಗಿದ್ದ ನನಗೆ ಕೋಲಾರ ಲೋಕಸಭಾ ಟೆಕೆಟ್ ನೀಡಿ ನನ್ನನ್ನ ಎಂ.ಪಿ.ಯನ್ನಾಗಿ ಮಾಡಿದ್ದು ಬಿಜೆಪಿ. ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂಬುವುದಕ್ಕೆ ನಾನೇ ಉದಾಹರಣೆ ಎಂದರು.

ಅನಿವಾರ್ಯ ಕಾರಣದಿಂದ ತಪ್ಪಿದ ಟಿಕೆಟ್‌

ಈ ಬಾರಿ ಜೆ.ಡಿ.ಎಸ್. ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಅವರಿಗೆ ಲೋಕಸಭಾ ಸ್ಥಾನದ ಟಿಕೆಟ್ ಬಿಟ್ಟು ಕೊಡಬೇಕಾಗಿ ಬಂದಿತು ಹೊರತಾಗಿ ನನ್ನ ಆಡಳಿತಾವಧಿಯಲ್ಲಿ ಯಾವುದೇ ಭ್ರಷ್ಟಚಾರಗಳ ಆರೋಪಗಳಿರಲಿಲ್ಲ. ನನಗೆ ಟಿಕೆಟ್ ಸಿಕ್ಕಿಲ್ಲ ಎಂದು ಬಹಳಷ್ಟು ಬಿಜೆಪಿ ಮುಖಂಡರು, ಕಾರ್ಯಕರ್ತರು, ಮತದಾರರು ಬೇಸರಪಟ್ಟಿದ್ದಾರೆ ಎಂಬ ವಿಷಯ ನನಗೂ ತಿಳಿದಿದೆ. ನನಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಇರುವುದು ಉದ್ದೇಶ ಪೂರ್ವಕವಾಗಿ ಅಲ್ಲ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು, ಎಂದರು.

ಬಿಜೆಪಿ ಪಕ್ಷವು ರಾಷ್ಟ್ರಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ ಸೇರಿದಂತೆ ಪ್ರತಿ ಗ್ರಾಮದ ಅಭಿವೃದ್ದಿಗೆ, ಒಳ್ಳೆಯ ಕೆಲಸಗಳಿಗೆ ಬಿಜೆಪಿ ಬೇಕಾಗಿದೆ ಹಾಗಾಗಿ ಮುಂದಿನ ಎಲ್ಲಾ ಚುನಾವಣೆಗಳು ಹೆಚ್ಚು ಹೆಚ್ಚಾಗಿ ಗೆಲ್ಲಬೇಕಾಗಿದೆ. ಹೆಚ್ಚು ಸ್ಥಾನ ಪಡೆಯಬೇಕಾದರೆ ಹೆಚ್ಚು ಹೆಚ್ಚಾಗಿ ಸದಸ್ಯತ್ವ ಮಾಡುವ ಮೂಲಕ ಬಿಜೆಪಿಗೆ ಶಕ್ತಿ ತುಂಬಬೇಕಾಗಿದೆ ಹಾಗಾಗಿ ಆ ಕೆಲಸವನ್ನು ಎಲ್ಲಾ ಮತದಾರರು ಬಿಜೆಪಿ ಸದಸ್ಯತ್ವದ ನೊಂದಣಿ ಮಾಡಬೇಕು ಅದರಲ್ಲೂ ಯುವಕರು ಹೆಚ್ಚು ಸದಸ್ಯತ್ವ ಪಡೆಯಬೇಕೆಂದು ಕರೆನೀಡಿದರು.

ಸೂಕ್ತ ಸ್ಥಾನಮಾನ ಸಿಗಲಿದೆ

ಲೋಕಸಭಾ ಚುನಾವಣೆಯ ನಂತರದಲ್ಲಿ ನನಗೆ ತಮಿಳುನಾಡು, ತೆಲಗಾಣದ ಚುನಾವಣಾ ಜವಾಬ್ದಾರಿ ನೀಡಿದ್ದರು, ಈಗ ಸದಸ್ಯತ್ವದ ಅಭಿಯಾನ ನಡೆಸಲಾಗುತ್ತಿದೆ. ನನಗೆ ಬಿಜೆಪಿಯಲ್ಲಿ ಉತ್ತಮ ಗೌರವವಿದೆ, ಮುಂದಿನ ದಿನಗಳಲ್ಲಿ ನನಗೆ ಸೂಕ್ತಸ್ಥಾನಮಾನ ನೀಡಲಿದ್ದಾರೆ, ನನ್ನನ್ನು ಬಿಜೆಪಿ ಪಕ್ಷವು ನಿರ್ಲಕ್ಷಿಸಿಲ್ಲ, ನಾನು ರಾಜ್ಯ ಮಟ್ಟದ ಆರ್.ಎಸ್.ಎಸ್. ಸಂಘಟನೆಯಿಂದ ಬಂದವನಾಗಿದ್ದೇನೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ತಿಳಿಸಿದರು.ನನಗೆ ೭೪-೭೫ ವರ್ಷಗಳಾಗಿಲ್ಲ ನನಗೆ ಇನ್ನು ವಯಸ್ಸಿದೆ, ಮುಂದಿನ ದಿನಗಳಲ್ಲಿ ಬೇಕಾದಷ್ಟು ಅವಕಾಶಗಳಿಗೆ. ನನಗೆ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರವೇನೂ ಇಲ್ಲ ಬಿಜೆಪಿ ಪಕ್ಷದಲ್ಲಿ ನನಗೆ ಹಲವಾರು ಜವಾಬ್ದಾರಿ ನೀಡಿದ್ದಾರೆ. ಅವುಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಕೊಂಡು ಮುಂದುವರೆಯುವುದು ನನ್ನ ಕರ್ತವ್ಯವಾಗಿದೆ ಎಂದರು.