‘ಕಾಂಗ್ರೆಸ್‌ ಮುಕ್ತ ಕ್ಷೇತ್ರವನ್ನಾಗಿಸಬೇಕು’

| Published : Apr 17 2024, 01:21 AM IST

‘ಕಾಂಗ್ರೆಸ್‌ ಮುಕ್ತ ಕ್ಷೇತ್ರವನ್ನಾಗಿಸಬೇಕು’
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ರಕ್ಷಣೆಗಾಗಿ ಮೋದಿರಂತ ಬಲಿಷ್ಟ ನಾಯಕ ನಮ್ಮ ದೇಶಕ್ಕೆ ಅಗತ್ಯವಾಗಿ ಬೇಕಾಗಿದೆ, ಈ ಹಿನ್ನೆಲೆಯಲ್ಲಿ ೨೬ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬೋಗಸ್ ಗ್ಯಾರಂಟಿಗಳಿಗೆ ಮಾರು ಹೋಗಬಾರದು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಜೆಡಿಎಸ್ ಮೈತ್ರಿಯ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೋಲಾರ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಮಾಡಲು ಎರಡೂ ಪಕ್ಷಗಳ ಕಾರ್ಯಕರ್ತರು ಕಂಕಣ ತೊಡಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.

ಪಟ್ಟಣದಲ್ಲಿರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ರವರ ಕಚೇರಿಯಲ್ಲಿ ಇದೇ ತಿಂಗಳು ೨೦ರಂದು ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಪ್ರಚಾರಕ್ಕೆ ಆಗಮಿಸುತ್ತಿರು ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮೈತ್ರಿ ಅಭ್ಯರ್ಥಿ ಸ್ಥಳೀಯರು

ಕಳೆದ ಬಾರಿ ಕೋಲಾರ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಈ ಬಾರಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಅ‍ವರನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ನಲ್ಲಿ ಸ್ಥಳಿಯ ಅಭ್ಯರ್ಥಿಗಳ ಕೊರತೆಯಿಂದ ಆಮದು ಮಾಡಿಕೊಂಡು ಚುನಾವಣೆ ಎದುರಿಸುವಂತಾಗಿದೆ, ಆದರೆ ಮೈತ್ರಿ ಅಭ್ಯರ್ಥಿ ಸ್ಥಳಿಯರು ಹಾಗೂ ಜಿಲ್ಲೆಗೆ ಚಿರ ಪರಿಚಿತವ್ಯಕ್ತಿ, ಆದ್ದರಿಂದ ಬಿಜೆಪಿ,ಜೆಡಿಎಸ್ ಕಾರ್ಯಕರ್ತರು ಈ ವಿಷಯವನ್ನು ಮತದಾರರಿಗೆ ಅರಿವಾಗುವಂತೆ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕು ಎಂದರು.

ಮೋದಿ ಬಲಿಷ್ಟ ನಾಯಕ

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ದೇಶ ರಕ್ಷಣೆಗಾಗಿ ಮೋದಿರಂತ ಬಲಿಷ್ಟ ನಾಯಕ ನಮ್ಮ ದೇಶಕ್ಕೆ ಅಗತ್ಯವಾಗಿ ಬೇಕಾಗಿದೆ, ಈ ಹಿನ್ನೆಲೆಯಲ್ಲಿ ೨೬ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬೋಗಸ್ ಗ್ಯಾರಂಟಿಗಳಿಗೆ ಮಾರು ಹೋಗದೆ ಮೋದಿ ಗ್ಯಾರಂಟಿಗೆ ಮಾರಿಹೋಗಿ ಮೈತ್ರಿ ಅಭ್ಯರ್ಥಿಯಾದ ಮಲ್ಲೇಶಬಾಬುರನ್ನು ಆಯ್ಕೆ ಮಾಡುವಂತೆ ಕೋರಿದರು.ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ,ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ,ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ,ಮಾರ್ಕಂಡೇಗೌಡ, ನಾಗೇಶ್, ವಿ.ಶೇಷು, ಕೃಷ್ಣೇಗೌಡ, ಪಾರ್ಥಸಾರಥಿ, ಚೌಡಪ್ಪ, ಬಿಂದು ಮಾಧವ, ಶಶಿಕುಮಾರ್, ಬಿಪಿ.ಮಹೇಶ್, ಕರವೇ ಚಲಪತಿ ಇತರರು ಇದ್ದರು.