ಸಾರಾಂಶ
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಎಸ್ಟಿ ಮೋರ್ಚಾ ಸದಸ್ಯರು
ಕನ್ನಡಪ್ರಭ ವಾರ್ತೆ ಚಾಮರಾಜನಗರಬಾಲಚಂದ್ರ ಜಾರಕಿಹೊಳಿಗೆ ವಿಪಕ್ಷ ನಾಯಕ ಸ್ಥಾನವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ರಾಜು ಅವರು ಬಿಜೆಪಿ ಪಕ್ಷಕ್ಕೆ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ ವಿಧಾನಸಭೆಗೆ ವಿರೋಧ ಪಕ್ಷದ ನಾಯಕನಾಗಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿದರೆ ರಾಜ್ಯದಲ್ಲಿ ಅಪಾರ ಜನಸಂಖ್ಯೆಯನ್ನು ಹೊಂದಿರುವ ಎಸ್ಸಿ,ಎಸ್ಟಿ ಜನಾಂಗ ಪ್ರತಿನಿಧಿಗೆ ಅವಕಾಶ ನೀಡಿದಂತಾಗುತ್ತದೆ ಎಂದರು.ರಾಜ್ಯದಲ್ಲಿರುವ 66 ಶಾಸಕರಲ್ಲಿ ಎಸ್ಸಿ,ಎಸ್ಟಿ ಜನಾಂಗ ಪ್ರತಿನಿಧಿಸುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅರಬಾವಿ ವಿಧಾನಸಭೆ ಕ್ಷೇತ್ರದಿಂದ 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿ 3 ಬಾರಿ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಎಲ್ಲಾ ವಿಧಾನಸಭೆ ಕ್ಷೇತ್ರದ ಶಾಸಕರೊಂದಿಗೆ ಸ್ನೇಹ ಬೆಳೆಸಿಕೊಂಡು ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿದ್ದಾರೆ ಎಂದರು.
ಕೆಎಂಎಫ್‌ನ ಅಧ್ಯಕ್ಷರಾಗಿ ಅಭಿವೃದ್ಧಿಗೆ ಮುಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಎಂಎಫ್ ಹೆಸರುಗಳಿಸಲು ಕಾರಣರಾಗಿದ್ದಾರೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮದೇಯಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಎಸ್ಸಿ ಎಸ್ಟಿ ಸಮುದಾಯ ಪ್ರತಿನಿಧಿಸುವ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿರೋಧಪಕ್ಷದ ನಾಯಕನಾಗಿ ಆಯ್ಕೆಮಾಡಲು ಹೆಚ್ಚು ಒತ್ತು ಕೊಡುವ ಮೂಲಕ ತಳಸಮುದಾಯದ ಏಳಿಗೆಗೆ ಕಾರಣರಾಗಬೇಕು ಎಂದರು.
ಕೇಂದ್ರದಲ್ಲಿ ಬಿಜೆಪಿ ಪಕ್ಷ ತಳಸಮುದಾಯದ ದ್ರೌಪತಿಮರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ನೇಮಕ ಮಾಡಿ ಹೊಸ ದಾಪುಗಾಲನ್ನಿಟ್ಟಿದ್ದು, ಅದೇ ರೀತಿ ರಾಜ್ಯದಲ್ಲೂ ತಳಸಮುದಾಯದ ಬಾಲಚಂದ್ರ ಜಾರಕಿಹೊಳಿ ಅವರನ್ನು ಆಯ್ಕೆಮಾಡಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅಮಚವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ, ಯಳಂದೂರು ಸುರೇಶ್ ಇದ್ದರು.
------------------16ಸಿಎಚ್‌ಎನ್51
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ರಾಜು ಸುದ್ದಿಗೋಷ್ಠಿ ನಡೆಸಿದರು.----------------