ಕಾಂಗ್ರೆಸ್‌ಗೆ ಮತ ತಂದುಕೊಡಲಿರುವ ‘ಗ್ಯಾರಂಟಿ’

| Published : Apr 22 2024, 02:04 AM IST / Updated: Apr 22 2024, 04:19 AM IST

ಕಾಂಗ್ರೆಸ್‌ಗೆ ಮತ ತಂದುಕೊಡಲಿರುವ ‘ಗ್ಯಾರಂಟಿ’
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ, ಕೈ ಹಿಡಿದವರನ್ನು ಜನರು ಎಂದಿಗೂ ಮರೆಯುವುದಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡುತ್ತಾರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯುಪಿಎ ಯೋಜನೆಗಳ ಹೆಸರು ಬದಲಿಸಿದೆಯಷ್ಟೇ

  ಕೆಜಿಎ ಫ್ : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮತಗಳನ್ನು ತಂದು ಕೊಡುವುದಾಗಿ ಶಾಸಕಿ ರೂಪಕಲಾಶಶಿಧರ್ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಪಾರಂಡಹಳ್ಳಿಯ ಗ್ರಾಪಂ ಮುಖಂಡರು ಹಾಗೂ ಶಾಸಕರು ಶ್ರೀ ಅಂಜೆನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಲೋಕಸಭಾ ಅಭ್ಯರ್ಥಿ ಗೌತಮ್ ಪರ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿದರು.ಕಾಂಗ್ರೆಸ್‌ಗೆ ಬಲ ತುಂಬಲಿದ್ದಾರೆ

ಜನರಿಗಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ, ಕೈ ಹಿಡಿದವರನ್ನು ಜನರು ಎಂದಿಗೂ ಮರೆಯುವುದಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡುತ್ತಾರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಯುಪಿಎ ಸರಕಾರದಲ್ಲಿ ಜಾರಿಯಾದ ಯೋಜನೆ ಕಾರ್‍ಯಕ್ರಮಗಳ ಹೆಸರು ಬದಲಿಸಿದೆಯಷ್ಟೇ, ಕೇಂದ್ರ ಸರಕಾರದ ಹೊಸ ಯೋಜನೆಗಳೇ ಇಲ್ಲ ಎಂದರು.ಪಾರಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ಬಿಜೆಪಿ ಸರಕಾರವು ದೇಶದ ಜನರಿಗೆ ಖಾಲಿ ಚೊಂಬು ಕೊಟ್ಟಿದೆ, ಅದನ್ನೇ ನಮ್ಮ ಸರಕಾರ ಜಾಹೀರಾತು ಕೊಟ್ಟಿದ್ದು, ಈ ಜಾಹೀರಾತಿನಲ್ಲಿ ಶೇ.೧೦೦ ರಷ್ಟು ಸತ್ಯಾಂಶ ಇದೆ, ರಾಜ್ಯದ ಜನರಿಗೆ ಮೋದಿ ಸರಕಾರ ಚೊಂಬು ಕೊಟ್ಟಿದ್ದಾರೆ ಎಂದರು.

ಸ್ವಾವಲಂಬಿ ಬದುಕು:

ಕಾಂಗ್ರೆಸ್ ಮುಖಂಡ ನಾರಾಯಣಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನೀಡಿದ ಗ್ಯಾರಂಟಿ ಯೋಜನೆಗಳಿಂದಾಗಿ ಜನರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ, ಜನಪರ ಆಡಳಿತದ ಹಿನ್ನಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನ ಪಡೆಯುವುದು ಖಚಿತ ಎಂದರು, ಜಿಪಂ ಮಾಜಿ ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷರಾದ ಅ.ಮು.ಲಕ್ಷ್ಮೀನಾರಾಯಣ್, ಪದ್ಮನಾಭರೆಡ್ಡಿ, ರವೀಂದ್ರರೆಡ್ಡಿ, ಗ್ರಾಪಂ ಸದಸ್ಯರಾದ ಪ್ರಕಾಶ್, ಜಮುನಾ ಇದ್ದರು.