ಸಾರಾಂಶ
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮ ಭೂ ಕಬಳಿಕೆ ಆರೋಪದಡಿ ಎಫ್‌ಐಆರ್ ದಾಖಲಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಅ.ನಾ. ಹರೀಶ್ ಆಗ್ರಹಿಸಿದ್ದಾರೆ.
ಬಂಗಾರಪೇಟೆ : ಅಕ್ರಮ ಭೂ ಕಬಳಿಗೆ, ಡಿ ನೋಟಿಪಿಕೇಷನ್ ಆರೋಪದಡಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಮಾಧ್ಯಮ ವಕ್ತಾರ ಅ.ನಾ ಹರೀಶ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲಾರ ಸಂಸದರಾದ ಎಂ. ಮಲ್ಲೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿರುವುದನ್ನು ಖಂಡಿಸಿದರು. ಮೊದಲು ಸಚಿವ ಎಚ್ಡಿಕೆ ರಾಜೀನಾಮೆ ನೀಡಲಿ ಎಂದರು. ಎಚ್ಡಿಕೆ ರಾಜೀನಾಮೆ ನೀಡಲಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ದ 50 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ, ಕುಟುಂಬದ ಸದಸ್ಯರಿಗೆ ಸರ್ಕಾರದ ಜಮೀನನ್ನು ಬೇನಾಮಿಯಾಗಿ ಆಸ್ತಿಯನ್ನು ಮಾಡಿರುವುದು ಹಾಗೂ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರು, ಇವುಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಕುಮಾರಸ್ವಾಮಿಗೆ ಸಂಸದ ಮಲ್ಲೇಶ್ ಬಾಬು ಒತ್ತಾಯಿಸಲು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕೋಲಾರ ಸಂಸದರಿಗೆ ಇಲ್ಲ, ಸಿದ್ದರಾಮಯ್ಯ ಅವರು ಜಾತ್ಯತೀತ, ಹಿಂದುಳಿದ, ಅಲ್ಪಸಂಖ್ಯಾತ, ದಲಿತರ, ಅಹಿಂದ ನಾಯಕರಾಗಿರುವ ಇವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಅಶೋಕ್ ರಾಜೀನಾಮೆ ನೀಡಲಿ
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್ ವಿಜಯೇಂದ್ರ ಅವರು ಬಿಜೆಪಿ ಸರ್ಕಾರ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗ ಚೆಕ್ಕುಗಳ ಮುಖಾಂತರ ಭ್ರಷ್ಟಾಚಾರ ಮಾಡಿದ ಆರೋಪ ಹೊತ್ತಿದ್ದಾರೆ. ಕೋವಿಡ್ ಹಗರಣದಲ್ಲಿ ಸಂಸದ ಡಾ. ಸುಧಾಕರ್ ವಿರುದ್ದ ಎಸ್‌ಐಟಿ ತನಿಖೆ ನಡೆಸಬೇಕು ಹಾಗೂ ಭೂ ಹಗರಣ ಆರೋಪ ಹೊತ್ತಿರುವ ಆರ್.ಆರ್ ಅಶೋಕ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.