1-2 ತಿಂಗ್ಳು ರಾಜಕೀಯವಾಗಿ ತೊಂದ್ರೆ ಕೊಡ್ಬಹುದು, ಆದರೆ ನನ್ನನ್ನು ಅಲುಗಾಡಿಸಲಾಗದು: ಸಿದ್ದರಾಮಯ್ಯ ಗುಡುಗು

| Published : Sep 30 2024, 07:52 AM IST

Siddaramaiah
1-2 ತಿಂಗ್ಳು ರಾಜಕೀಯವಾಗಿ ತೊಂದ್ರೆ ಕೊಡ್ಬಹುದು, ಆದರೆ ನನ್ನನ್ನು ಅಲುಗಾಡಿಸಲಾಗದು: ಸಿದ್ದರಾಮಯ್ಯ ಗುಡುಗು
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯವಾಗಿ ನನಗೆ ಒಂದರೆಡು ತಿಂಗಳು ತೊಂದರೆ ಕೊಡಬಹುದು ಅಷ್ಟೆ. ಆದರೆ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಗುಡುಗಿದ್ದಾರೆ.

  ಮೈಸೂರು : ರಾಜಕೀಯವಾಗಿ ನನಗೆ ಒಂದರೆಡು ತಿಂಗಳು ತೊಂದರೆ ಕೊಡಬಹುದು ಅಷ್ಟೆ. ಆದರೆ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಗುಡುಗಿದ್ದಾರೆ. ಜತೆಗೆ, ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಹೀಗಾಗಿ ಕಾನೂನಾತ್ಮಕ ಹೋರಾಟದಲ್ಲಿ ಗೆದ್ದೇ ಗೆಲ್ತೇನೆ ಎಂದು ಮುಡಾ ಪ್ರಕರಣದ ಪ್ರಸ್ತಾಪ ಮಾಡದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಅಶೋಕಪುರಂನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೇನೆ. ಹೀಗಾಗಿ ನಾನು ಯಾವುದಕ್ಕೂ ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ ಎಂದರು.

ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ. ಬಹಳ ಜನ ಬಂದು ನನಗೆ ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ ಅಂತಾರೆ. ಆದರೆ, ನಾನು ಇಂಥದ್ದಕ್ಕೆಲ್ಲ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇದನ್ನೆಲ್ಲ ಎದುರಿಸಿ ನಿಲ್ಲೋದು ಗೊತ್ತಿದೆ ಎಂದು ತಿಳಿಸಿದರು.

ಇದನ್ನೆಲ್ಲ ಎದುರಿಸಿ ನಿಲ್ಲೋದು ಗೊತ್ತಿದೆ

ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ. ಬಹಳ ಜನ ಬಂದು ನನಗೆ ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ ಅಂತಾರೆ. ಆದರೆ, ನಾನು ಇಂಥದ್ದಕ್ಕೆಲ್ಲ ಹೆದರುವವನೇ ಅಲ್ಲ. ರಾಜಕೀಯವಾಗಿ ಇದನ್ನೆಲ್ಲ ಎದುರಿಸಿ ನಿಲ್ಲೋದು ಗೊತ್ತಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ