ಸಾರಾಂಶ
ನವದೆಹಲಿ: ಕಾಂಗ್ರೆಸ್‌ನಿಂದ ಪ್ರಧಾನಮಂತ್ರಿಯಾಗಿ ಸೋನಿಯಾ ಗಾಂಧಿ ತಮ್ಮನ್ನು ಆಯ್ಕೆ ಮಾಡುವುದಿಲ್ಲ ಎಂದು 2004ರ ಚುನಾವಣೆ ನಂತರ ಪ್ರಣಬ್ ಮುಖರ್ಜಿ ತಿಳಿಸಿದ್ದರು ಎಂಬುದಾಗಿ ಅವರು ಪುತ್ರಿ ಶರ್ಮಿಷ್ಠಾ ತಿಳಿಸಿದ್ದಾರೆ.
ಶರ್ಮಿಷ್ಠಾ ಬರೆದಿರುವ ಆತ್ಮಕಥೆಯಲ್ಲಿ ಉಲ್ಲೇಖ
2004ರ ಚುನಾವಣೆ ವೇಳೆ ನಡೆದ ಘಟನೆಗಳ ಕುರಿತು ಬರಹರಾಹುಲ್ ಗಾಂಧಿ ಒಡನಾಟದ ಕುರಿತೂ ಅಭಿಪ್ರಾಯನವದೆಹಲಿ: ಕಾಂಗ್ರೆಸ್‌ನಿಂದ ಪ್ರಧಾನಮಂತ್ರಿಯಾಗಿ ಸೋನಿಯಾ ಗಾಂಧಿ ತಮ್ಮನ್ನು ಆಯ್ಕೆ ಮಾಡುವುದಿಲ್ಲ ಎಂದು 2004ರ ಚುನಾವಣೆ ನಂತರ ಪ್ರಣಬ್ ಮುಖರ್ಜಿ ತಿಳಿಸಿದ್ದರು ಎಂಬುದಾಗಿ ಅವರು ಪುತ್ರಿ ಶರ್ಮಿಷ್ಠಾ ತಿಳಿಸಿದ್ದಾರೆ.ಶರ್ಮಿಷ್ಠಾ ಅವರು ತಮ್ಮ ‘ಮಗಳು ನೆನಪಿಸಿಕೊಳ್ಳುವಂತೆ ತಂದೆಯಾಗಿ ಪ್ರಣಬ್’ ಎಂಬ ಪುಸ್ತಕದ ‘ಅಚ್ಚರಿಯ ಭಾರತದ ಪ್ರಧಾನಮಂತ್ರಿ’ ಅಧ್ಯಾಯದಲ್ಲಿ ಈ ಕುರಿತು ಉಲ್ಲೇಖಿಸಿರುವ ಅವರು, ‘ಪ್ರಣಬ್ ಅವರು ಆಗ ಬಹಳ ದಿನಗಳ ಕಾಲ ನಮ್ಮ ಜೊತೆ ಇರದೆ ಬಹಳ ಒತ್ತಡದಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಒಂದು ದಿನ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ನೀವು ಪ್ರಧಾನಮಂತ್ರಿಯಾಗಬಹುದೆ ಎಂದು ಪ್ರಶ್ನಿಸಿದ್ದಕ್ಕೆ ‘ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡುವುದಿಲ್ಲ. ಆದರೆ ಇದನ್ನು ರಾಷ್ಟ್ರದ ಮುಂದೆ ಹೇಳುವುದನ್ನು ತಡ ಮಾಡಬಾರದು ಎಂಬುದು ನನ್ನ ಅಭಿಪ್ರಾಯ’ ಎಂದು ತಿಳಿಸಿದ್ದರು. ಆದರೂ ಸೋನಿಯಾಗಾಂಧಿಯವರ ಬಗ್ಗೆ ತುಂಬಾ ಗೌರವ ಇರಿಸಿಕೊಂಡಿದ್ದರು’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರು ಭಾರತದ 13ನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು 2020ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.